________________
(K೭) ಅರೇಬಿರ್ಯ ನೈಟ್ಸ್ ಕಥೆಗಳು, 88F ಎಂದು ಹೇಳಿದಳು. ಮರುದಿನ ಬೆಳಿಗ್ಗೆ ನನ್ನ ಹೆಂಡತಿ ನನ್ನ ಬಳಿಗೆ ಬಂದು, ನೀನು ಇಂತಹ ಅಪರಾಧವನ್ನು ಮಾಡಿದ್ದರೂ, ಮತ್ತೆ ನಿನ್ನ ಬಳಿಗೆ ಬಂದಿರುವೆನು ನೋಡು. ಆದರೆ ನೀನು ಬೆಳ್ಳುಳ್ಳಿಯನ್ನು ತಿಂದು ಕೈ ತೊಳೆದುಕೊಳ್ಳದೆ ಹೋದುದಕ್ಕಾಗಿ, ನಿನಗೆ ತಕ್ಕ ಶಿಕ್ಷೆಯನ್ನು ಮಾಡದೆ ನಾನೆಂದಿಗೂ ಬಿಡಲಾರೆನೆಂದು ಹೇಳಿ, ತನ್ನದಾದಿಯರನ್ನು ಕರೆಯಲು, ಅವ ರೆಲ್ಲರೂ ಬಂದು, ನನ್ನನ್ನು ಹಿಡಿದು ಕೈಕಾಲುಗಳನ್ನು ಕಟ್ಟಿ, ನೆಲದಮೇಲೆ ಕೆಡವಿದರು. ಆಗ ಆಕೆ ಕತ್ತಿಯನ್ನು ತೆಗೆದುಕೊಂಡು, ನನ್ನ ಹೆಬ್ಬೆಟ್ಟು ಗಳನ್ನು ಕಾಲುಬೆರಳುಗಳನ್ನು ನಿರ್ದಯದಿಂದ ಕೊಯಿದುಹಾಕಿದಳು. ಕೂಡಲೆ ದಾದಿಯೊಬ್ಬಳು ಔಧವನ್ನು ಹಾಕಿ ರಕ್ತವು ಸೋರದಂತೆ ನಿಲ್ಲಿಸಿ ದಳು. ಆದರೂ ನಾನು ಮರ್ಧೆ ಹೊಂದಿದನು. ಸ್ವಲ್ಪ ಹೊತ್ತಿನ ಮೂರ್ಛ ತಿಳಿದಿದ್ದು, ನಾನು ನನ್ನ ಹೆಂಡತಿಯನ್ನು ನೋಡಿ, ಇನ್ನು ಮೇಲೆ ನಾನು ಬೆಳ್ಳುಳ್ಳಿಯನ್ನು ತಿಂದರೆ, ವಿಳ್ಯದೆಲೆಯಿಂದಲೂ, ಬೂದಿಯಿಂ ದಲೂ, ಸೋವೆಂಬ ಸಾಬೂನಿನಿಂದಲೂ, ಒಟ್ಟಿಗೆ ನೂರಿಪ್ಪತ್ತು ಸಾರಿ ತೊಳೆದುಕೊಳ್ಳುವೆನೆಂದು ಹೇಳಿದನು. ಆಕೆಯು, ಆಗ ನನ್ನನ್ನು ನೋಡಿ ಹಾಗಾದರೆ ಹಿಂದೆ ಕಳೆದುಹೋದುದನ್ನು ಮರೆತು, ನನ್ನಲ್ಲಿ ವಿಶ್ವಾಸದಿಂದ ವರ್ತಿಸತಕ್ಕ ಗಂಡನಾಗಿರೆಂದು ಹೇಳಿದಳು. ಆದಕಾರಣದಿಂದಲೆ, ನಾನು ಬೆಳ್ಳುಳ್ಳಿಯ ವಚ್ಡಿಯನ್ನು ತಿನ್ನಿಲೆನಂದು ಹೇಳಿದನು, ಅಮ್ಮ ರಿ ಬೆಳಗಾದುದರಿಂದ, ಪಹರಜಾದಿಯು ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವಗಲ್ಲಿ ಪುನಹ ಹೇಳಲಾರಂಭಿಸಿದಳು. ೧೪೯ ನೆಯ ಅತಿ ಕಥೆ ಪಹರಜಾದಿಯು ಸುಲ್ತಾನರನ್ನು ಕುರಿತು ಇಂತಂದಳು :--- ನಾನು ಹಿಂದೆ ಹೇಳಿದಂತೆ ಆ ಸ್ತ್ರೀಯರು ಕಲೀಧರ ಔಷಧಶಾಲೆಯಿಂದ, ಉತ್ತಮವಾದ ಔಷಧಗಳನ್ನು ತಂದುಹಾಕಿದರು. ನಂತರ ಕೆಲವು ದಿನಗಳ ಮೇಲೆ, ನನ್ನ ಗಾಯವು ವಾಸಿಯಾದಕೂಡಲೆ, ದಂಪತಿಗಳು ಅನೋನ್ಯ. ನಾಗಿರಲಾರಂಭಿಸಿದೆವು. ಆದರೆ ಮಹಾರಾಜನಮನೆಯಲ್ಲಿ ನಾನು ವಾಸ ಮಾಡಬೇಕಾಗಿರುವುದರಿಂದ, ಸ್ವತಂತ್ರ ವೆಂಬುದಿಲ್ಲದೆ, ನಾನು ಖಿನ್ನನಾಗಿ ಇರುತ್ತಿದ್ದನು. ಈ ವರ್ತಮಾನವನ್ನು ಬಾಲಕಾಮುಣಿಯೊಡನೆ ಹೇಳಿದರೆ,