________________
8೦ ಯವನ ಯಾಮಿನೀ ವಿನೋದ ಎಂಬ, ಏನು ತೊಂದರೆಯುಂಟಾಗುವುದೊ, ಎಂದು ನಾನು ಹೇಳದಿದ್ದರೂ, ನನ್ನ ಮನೆಭಿಕಾ ಯವನ್ನು ಆಕೆ ತಿಳಿದುಕೊಂಡು, ತನ್ನ ರಾಣನಾಯಕ ನಿಂದ, ತನಗಿರುವ ತೊಂದರೆಯನ್ನು ರಾಣಿಯಲ್ಲಿ ಅರಿಕೆಮಾಡಿ, ಅವರಿದ ಅಪ್ಪಣೆಯನ್ನು ಕೇಳಿ, ಪ್ರತ್ಯೇಕವಾದ ಒಂದು ಮನೆಯನ್ನು ಕಟ್ಟಿಸಿ, ನಗರ ವಾಸಿಗಳಾದ ಇತರ ದನಗಳ ಜೊತೆಯಲ್ಲಿ ವಾಸಮಾಡುವಂತೆ ಅವಳ ರಾಣಿ ಯಾದ ಜೋಬದಿಯಿಂದಾಜ್ಞೆಯನ್ನು ಹೊಂದಿ, ನನ್ನ ಖರ್ಚಿಗೋಸ್ಕರ ಎಂಭತ್ತುಸಾವಿರ ಸೆಕ್ಸಿ೯ಸುಗಳನ್ನು ತಂದಿತ್ತು. ನಾನು ನಿರ್ಬಂಧವಿಲ್ಸ್ ದಂತ, ಸ್ವತಂತ್ರ ನಾಗಿ ವಾಸಮಾಡುವಹಾಗೆ ಮಾಡಿದಳು. ನನಗೆ ಮದುವೆ ಯಾದ ಒದುತಿಂಗಳ ಒಳಿಕ ನನ್ನ ಹೆಂಡತಿಯು ನನ್ನ ಬಳಿಗೆ ಬಂದು, ನಿನಗೆ ಅರಮನೆಯಲ್ಲಿ ವಾಸಮಾಡಿಕೊಂಡಿರಲು, ಇನ್ಮವಿಲ್ಲವೆಂಬ ಸಂಗತಿಯನ್ನು ನನಗೆ ನೀನು ತಿಳಿಯಹೇಳಲಿಲ್ಲ. ಆದರೂ ನಿನ್ನ ತಾತ್ಪರವನ್ನು ಜೋಬದಿಗೆ ತಿಳಿಸಿ, ಅದರಂತೆ ನೆರವೇರಿಸಿರುವುದರಿಂದ ನೀನು, ಪಟ್ಟಣಮಧ್ಯದಲ್ಲಿ ಒಂದುಮನೆಯನ್ನು ಕೊಂಡುಕೊಳ್ಳುವುದಕ್ಕಾಗಿ, ಈ ಎಂಭತ್ತು ಸಾವಿರ ಸೆರ್ಕ್ಸಿಸುಗಳನ್ನು ನಿನಗೆ ಕೊಟ್ಟಿರುವೆನೆಂದು ಹೇಳಿ ಹಣವನ್ನು ಕೊಟ್ಟಳು. ಬಳಿಕ ನಾನು ಒಂದು ಸುಂದರವಾದ ಮನೆಯನ್ನು ಕೊಂಡು, ಅಂದವಾಗಿ ಅಲಂಕರಿಸಿಕೊಂಡು, ಹಂಡತಿಯೊಡನೆ ಗೌರವದಿಂದ ಸಂಸಾರ ಮಾಡಿಕೊಂಡಿದ್ದೆನು. ಒಂದು ಸಂವತ್ಸರವು ಕಳೆದಬಳಿಕ, ನನ್ನ ಹೆಂಡತಿಯು ದೇಹಾಲಸ್ಯದಿಂದ ಸತ್ತಹೋದಳು. ಬಳಿಕ ಬೇತೆ ವಿವಾಹ ಮಾಡಿಕೊಂ ಡರೂ, ದೇಶಸಂಚಾರ ಮಾಡಬೇಕೆಂಬ ಆಸೆಯಿಂದ, ಸರಕುಗಳನ್ನು ತುಂಬಿ ಕೊಂಡು, ನಾನು ದೇಶವನ್ನು ಸುತ್ತಿಕೊಂಡು, ಈಗ ಇಲ್ಲಿಗೆ ಬಂದಿರುವೆನು ಎಂದು ಹೇಳಿದನು. ಕಥೆಯನ್ನು ಬಾಗದಾದು ಪಟ್ಟಣದ ವರ್ತಕನು ಭೋಜನಕಾಲದಲ್ಲಿ ಹೇಳಿದರೂ, ಬಹು ವಿಚಿತ್ರ ವಾಗಿಲ್ಲವೆ ? ಎಂದು ದಳಾ ಆಯು ಕಾಸುಗಾರು ರಾಜನನ್ನು ಕೇಳಿದಕೂಡಲೇ ಇದುಕೊಂಚ ವಿನೋದ ವಾದುದೇಕೊರತು, ಈ ಗೂನನ ಕಥೆಗಿಂತ ವಿಚಿತ್ರ ವಾದುದಲ್ಲವೆಂದು, ರಾಜನು ಹೇಳಿದನು. ನಂತರ ವೈದ್ಯನು ಸಿಂಹಾಸನದಬಳಿಗೆ ಬಂದು, ನಮಸ್ಕಾರ ಮಾಡಿ, ಆಯಾ ! ಮಹಾರಾಜ ಈ ಕಥೆಗಳೆಲ್ಲಕ್ಕಿಂತಲೂ, ಅತ್ಯುತ್ತಮವಾದ ನನ್ನ ಕಥೆಯನ್ನು ಕೇಳೆಂದೆನು, ನೀನು ಹೇಳುವ