________________
8೬8 ಯವನ ಯಾಮಿನಿ ವಿನೋದ ವಿಂಬ, ಬೇಡಲು, ಅವನು ಸನ್ಮತಿಸಿದನು. ನಂತರ ನಾನು ಮನೆಯನ್ನು ಸೇರಿ, ನೋವನ್ನು ತಾಳಲಾರದೆ, ಅಯಾ ! ನಾನಿನ್ನು ಮಾಡತಕ್ಕದ್ದನು. ಈ ದುರವಸೆಯನ್ನು ಅನುಭವಿಸು , ನನ್ನ ತಂದೆಯಬಳಗೆ ಹೇಗೆ ಹೋಗಃ, ಎಂದು ಚಿಂತಿಸುತ್ತಿದ್ದನು. ಇತಂದು ಹೇಳಿ ನಗರಜಾದಿಯು ಬೆಳಗಾವಕ೦ಡರೆ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನಜಿನಲ್ಲಿ ಪುನಹಾ ನುಡಿಯಲಾರಂಭಿಸಿದಳು, ೧೫೫ ನೆಯ ರಾತ್ರಿ ಕಥೆ. ಬಳಿ ಕ ಆ ವರ್ತಕಪುತ ನು ವೈದ್ಯನನ್ನು ನೋಡಿ, ಇಂತೆಂದನು. ನಾನು ಮನೆಯನ್ನು ಸೇರಿದ ಸ್ವಲ್ಪ ಹೊತ್ತಿಗೆ ಸರಿಯಾಗಿ, ನ್ಯಾಯಾಧಿ ಪತಿಯ ಭಂಟರು ದಳ್ಳಾಳಿಯನ್ನೂ ನನ್ನ ಮೇಲೆ ಕಳ್ಳತನವನ್ನು ಅನ್ಯಾಯ ವಾಗಿ ಹರಿಸಿದ, ಅಂಗಡಿಯವನನು ಕರೆದುಕೊಂಡು ನನ್ನ ಮನೆಗೆ ಬಂದರು. ಅವರು ಬರುವುದಕ್ಕೆ ಕಾರಣವೇನೆಂದು ನಾನು ಯೋಚಿಸಿ, ಅವರನ್ನೆ ನ ಕ್ಕೆ ಮಾಡಿದನು. ಆದರೆ ಅವರು ನನಗೆ ಪ್ರತ್ಯುತ್ತರವನ್ನು ಹೇಳದೆ, ಹಿಂಗಟ್ಟು ಮುಂಗಟ್ಟುಗಳನ್ನು ಕಟ್ಟಿ ಕೂಗದಂತೆ ಬಾಯಿ ಯನ್ನು ಬಲವಾಗಿ ಮುಚ್ಚಿ, ಆ ಕಂಥಮಾಲೆಯು ಈ ಪಟ್ಟಣವನ್ನಾಳುವ ರಾಜನದು. ಇದುಹೋಗಿ ಮೂರುವರ್ಷಗಳಾಯಿತು. ಆಗಿನಿಂದಲೂ ಆತನ ಕುಮಾರಿಯಲ್ಲೊಬ್ಬಳು, ಕಣ್ಣಿಗೆ ಕಾಣದೆ ಹೊರಟುಹೋದಳೆಂದು ಹೇಳಿದರು. ಅದನ್ನು ಕೇಳಿದಕೂಡಲೆ, ನನ್ನ ಮನಸ್ಸು ಹೇಗಾಯಿತೋ ಅದನ್ನು ನೀನೆ ಯೋಚಿಸು. ಆದರೂ, ಧೈರಾವಲಂಬನೆಯನ್ನು ಹೊಂದಿ, ನನ್ನನ್ನು ಕೊಂದುಹಾಕಿದರೂ, ನಿಜವನ್ನು ಹೇಳಬಾರದೆಂದು ಅಂದು ಕೊಂಡನು. ಅವರು ನನ್ನನ್ನು ರಾಜನಬಳಿಗೆ ಕರೆದುಕೊಂಡುಹೋದಾಗ ಆತನು ನನ್ನನ್ನು ನೋಡಿ, ಕರುಣಾದೃಷ್ಟಿಯನ್ನು ಬೀರುತ್ತಿರುವುದನ್ನು ಕಂಡು, ಇದೇ ನನಗೆ ಶುಭಸೂಚಕವೆಂದಂದುಕೊಂಡೆನು. ಬಳಿಕ ಆತನು ನನ್ನ ಕಟ್ಟುಗಳನ್ನು ಬಿಚ್ಚಿಸಿ, ವರ್ತಕನನ್ನೂ ದಳ್ಳಾಳಿಯನ್ನೂ ನೋಡಿ ಮುತ್ತಿನಕಂಠಿಯನ್ನು ಮಾರುವುದಕ್ಕೆ ತಂದಿದ್ದವನು ಈತನೆಯೋ ? ಎಂದು ಕೇಳಿದನು. ಅವರು ಹೌದೆಂದರು. ಆಗ ರಾಜನು, ಈತನನ್ನು ಕೂಡಿದರೆ, ಅಂತಹ ಅಪರಾಧವನ್ನು ಮಾಡಿದವನಂತೆ ಕಾಣಬರುವುದಿಲ್ಲ,