ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೪೭೧ ನನ್ನ ಈ ದುರವಸೆಗೆ ಕಾರಣವೇನೆಂದು, ಅವರು ಬಹುವಾಗಿ ನಿರ್ಬಂಧ ಪಡಿಸಿದರೂ, ನಾನು ನಿಜವನ್ನು ಹೇಳದೆ ಹೋದುದರಿಂದ, ಅವರು ವೈದ್ಯ ನನ್ನು ಕರೆಸಿ, ಔಷಧವನ್ನು ಕುಡಿಸಿದರು, ಅದರಿಂದ ನನ್ನ ರೋಗವು ಪ್ರಬಲವಾಯಿತೇಹೋರರು, ರಗಲಿಲ್ಲ. ಆದುದರಿಂದ ನನ್ನ ಕುಟುಂಬದವರ - ವ್ಯಸನರು ಇನ್ನೂ ಅಧಿಕವಾಯಿತು. ಅವರು ನನ್ನ ಮೇಲಾಸೆಯನ್ನು ತೊರೆದಿರುವುದನ್ನು ಕೇಳಿ, ನನ್ನ ಗುರುತು ತಿಳಿದವಳಾದ ಒಬ್ಬ ಮುದುಕಿ ನನ್ನನ್ನು ನೋಡುವುದಕ್ಕೆ ಬಂದು, ನಿಜಸ್ಥಿತಿಯನ್ನು ಊಹಿಸಿ ತಿಳಿದು : ಕೊಂಡು, ನನ್ನ ತಾಯಿ ಮೊದಲಾದವರನ್ನು ಹೊರಕ್ಕೆ ಕರೆದು, ಆ ರೋಗಿ . ಯನ್ನು ಗೋವಾಗಿ ಕೆಲವುಕಾಲ ನನ್ನ ಬಳಿಯಲ್ಲಿಡುವಂತ ಮಾಡ ಬೇಕೆಂದು ಕೇಳಿದಳು, ಆಗ ಅವಳ ಇಷಾನುಸಾರವಾಗಿ ಅಲ್ಲಿದ್ದವ ರಲ್ಲರೂ ಹೊರಟುಹೋಗಲು, ಆಮುದುಕಿಯು ನನ್ನ ಬಳಗೆಬಂದು ಕುಳಿತು • ಕಂಡು, ತಮಾ ! ನಿನ್ನ ರೋಗಕ್ಕೆ ಕಾರಣವಿಂಥದೆಂಬುದನ್ನು ಹೇಳದೆ ಮರೆಮಾಚಬಹುದೆ ? ಆದರೂ ನೀನು ಹೇಳಬೇಕಾದುದೇನೂ ಇಲ್ಲ, ನಾನು ಅನುಭವಶಾಲಿಯಾದುದರಿಂದ, ನಿನ್ನ ರೋಗಕ್ಕೆ ಕಾರಣ 'ವನ್ನು ತಿಳಿದುಕೊಂಡನು. ಇದು ವಾಹದಿಂದ ಉಂಟಾದ * ಜಡ, ನೀನು ಸಿಯರ ವಿಷಯದಲ್ಲಿ , ವ್ಯಾಮೋಹರಹಿತನಾದ ವ್ಯಂಗ್ಯಶಾಲಿಯಂಬ ಹೆಸರನ್ನು ಪಡೆದಿದ್ದರೂ, ಯಾವ ಕನ್ಯಾಮಣಿಯ - ಮೇಣ ಮಡದಿಂದ ಇಂತಹ ದುರವಸ್ಥೆಯನ್ನು ಹೊಂದಿದೆಯೋ ಅದನ್ನು ತಿಳಿಸಿದರೆ, ನಿನ್ನ ರೋಗ ಪರಿಹಾರಕಾರಣವನ್ನು ತಿಳಿದು, ಆಕೆಯನ್ನು ಸಮಯೋಚಿತವಾಗಿ, ನಿನ್ನ ಸಹವಾಸಕ್ಕೆ ಯೋಗ್ಯಳಾಗುವಂತೆ ಮಾಡುವೆ ಸಂದು ಹೇಳಿದಳು, ಇಂಡಂದು ಹೇಳಿ, ನಹರಜಾದಿ ಬೆಳಗದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೫V ನಯ ನೀತಿ ಕಥೆ. ಮಹರಜಾದಿಯು ಸುಲ್ತಾನರನ್ನು ಕುರಿತು, ಇಂತಂದಳು :ಆ ಮುದುಕಿಯು ನನ್ನ ಮನಭಿಪಾಯವನ್ನು ತಿಳಿದುಕೊಳ್ಳಬೇಕೆಂದು ಹೀಗೆ ಹೇಳಿದಳೆಂದುತಿಳಿದು, ನಾನು ಯಾವಮಾತನ್ನು ಆಡದೆ, ಮುಖ ವನ್ನು ತಿರುಗಿಸಿಕೊಂಡು ನಿಟ್ಟುಸುರು ಬಿಡುತ್ತಿದ್ದನು. ಆಗ ಆಕೆ ಆಯಾ ! ನೀನು ನಾಚಿಕೆಯಿಂದ ಹೇಳದಿರುವರೋ ? ಅಲ್ಲದೆ ನನ್ನಲ್ಲಿ