________________
(೬೦) ಅರೇಬಿರ್ಯ ನೈಟ್ಸ್ ಕಥೆಗಳು, ೪೭೩ ನನ್ನ ಕೈಲಾದ ಸಾಹಸವನ್ನು ಮಾಡಿಕೊಡುವೆನು, ಅದುವರೆಗೂ ನೀನು ನೆಮ್ಮದಿಯಾಗಿ ನಂಬಿಕೊಂಡಿರು, ಎಂದು ಹೇಳಿ, ಮುದುಕಿಯು ಹೊರಟು ಹೋದಮೇಲೆ, ಆಕ ಹೇಳಿದ ಪ್ರತಿಕೂಲಗಳಿಂದ ಅವಳನ್ನು ಸಾಧಿಸುವುದು ಅಸಾಧ್ಯವೆಂದು ತಿಳಿದು, ಆ ಮುದುಕಿಯಮಾತನ್ನು ಸ್ಮರಿಸುತ್ತ, ನನ್ನ ಮೋಹವೂ ಇನ್ನೂ ಅಧಿಕವಾಯಿತು. ಮರುದಿನ ಆ ಮುದುಕಿಯು, ನನ್ನ ಬಳಿಗೆ ಬಂದು, ಅಯಾ ! ನಾನುಹೇಳುವ ವರ್ತಮಾನವನ್ನು ಕೇಳು, ಆ ನಿನ್ನ ಮೋಹಿನಿಗೆ ತಂದೆಯ ನಿರ್ಬಂಧ ಒಂದೇ ಅಲ್ಲ, ಇನ್ನೂ ಇತರ ವಿಧವಾದ ಆತಂಕಗಳೂ ಉಂಟು. ಆಹಾ ! ಎಂತಹ ಅಸಾಧ್ಯವಾದ ಸಿಯನ್ನು ವಹಿಸಿದೆ. ನಾನು ಈದಿನ ಅವಳ ಮನೆಗೆ ಹೋಗಿ, ನಿನ್ನ ದುರವಸ್ಥೆಯನ್ನು ಹೇಳುತ್ತಿದ್ದರೂ, ಹುಸಿನಗೆಯನ್ನು ಬೀರುತ್ತಾ ಕೇಳುತಿದ್ದಳೇಹೊರತು, ಸ್ವಲ್ಪವಾದರೂ ಮನ ಕರಗದವಳಾಗಿದ್ದಳು. ಆ ಬಾಲೆಯು ನಿನ್ನಂತೆ ಓಹುಜನರಿಗೆ ವ್ಯಥೆಯನ್ನುಂಟುಮಾಡಿಸಿ ಕೂರ ಗಿಸುತ್ತಿರುವಳೆಹೊರತು, ಒಬ್ಬರಿಗಾದರೂ, ಆನಂದವನ್ನು ಉಂಟುಮಾಡಿ ತೃಪ್ತಿಪಡಿಸಲಿಲ್ಲ. ನಂತರ ನಾನು ಆಕೆಯನ್ನು ಕುರಿತು, ರಾಣಿ ! ನೀನು ಬಂದು, ಆತನನ್ನು ನೋಡಿ ಮಾತನಾಡುವುದಕ್ಕೆ ಯಾವಮಯವು ಅನು ಕೂಲವಾಗಿ ಇರುವುದು ಹೇಳನಲು, ಅವಳು ಕೋಪದಿಂದ ದುರದುರನೆ ನೋಡು ಇಂತಹ ಮಾತುಗಳನ್ನು ಧೈರದಿಂದ ಹೇಳಿದ, ನಿನ್ನನ್ನು ನನ್ನ ಮನೆಯಬಳಿಗೆ ಬಾರದಂತೆ ಮಾಡುವೆನೆದುಹೇಳಿ ಹೊರಟುಹೋದಳು, ಆದರೂ, ನೀನು ಧೈರೈಗಡಬೇಡ, ನನ್ನ ಕೈಲಾದ ಸಾಹಸ ವನ್ನು ಮಾಡಿ, ನಿನಗೆ ಮೋಹವನ್ನು ಉಂಟುಮಾಡಿರುವ, ಆಕೆಯನ್ನು ನಿನ್ನಸ್ವಾಧೀನ ಮಾಡುವೆನು, ಎಂದು ಹೇಳಿ ಹೊರಟುಹೋಗಿ ಅದಕ್ಕೆ ತಕ್ಕ ಉಪಾಯಗಳನ್ನು ಮಾಡಿದರೂ, ಅದು ಸಫಲವಾಗಲಿಲ್ಲ. ಆದುದರಿಂದ ನಾನು ವ್ಯಥೆಯನ್ನು ತಾಳಲಾರದೆ ಸಾಯುವ ಸ್ಥಿತಿಯಲ್ಲಿದ್ದೆನು. ಅಮ್ಮ ರ ಮುದುಕಿಯು ಬಂದು ನನ್ನ ಕಾ ಣವನ್ನು ಉಳಿಸಿದಳು. ಬಳಿಕ ಆ ಮುದುಕಿಯು ನನ್ನ ಬಳಿಗೆ ಬಂದು ಮೆಲ್ಲಗೆ ತನ್ನ ಬಹುಮಾನವನ್ನು ಕಳಲೆಳಸಿ, ನಾನು ತಂದಿರುವ ಸಂತೋಷಕರವಾದ ವರ್ತಮಾನಕ್ಕಾಗಿ, ತಕ್ಕ ಬಹುಮಾನವನ್ನು ಕೊಡುವುದಕ್ಕೆ ಮರೆಯಬೇಡ ಎನಲು, ನೀನು