________________
ಅರೇಬಿರ್ಯ ನೈಟ್ ಕಥಗಳು. 8೭೬ ೧೬೦ ನೆಯ ರಾತ್ರಿ ಕಥೆ. ಬಳಿಕ ನರರಜಾದಿಯು ಸುಲ್ತಾನರನ್ನು ಕುರಿತು ಇಂತಂದಳು. ಆ ಕ್ಷೌರಿಕನು ತನ್ನ ಕತ್ತಿಗಳನ್ನು ಸರಿಮಾಡಿಕೊಳ್ಳುವುದರಲೈ, ಕಾಲ ವನ್ನು ಕಳೆದು ನೀರಿನಬಟ್ಟಲನ್ನು ತೆಗೆವುದಕ್ಕೆ ಬದಲಾಗಿ, ಚೀಲದಿಂದ ಮತ್ತೊಂದು ಬಲಯಂತ್ರವನ್ನು ತೆಗೆದುಕೊಂಡು, ಮನೆಯ ನಡುಹಜಾ ರಕ್ಕೆ ಬಂದು ಸೂರ್ಯನಿರುವ ಸ್ಥಳವನ್ನು ದೃಷ್ಟಿಸಿ ನೋಡಿ, ಮರಳಿ ಕೊಠಡಿಯೊಳಕ್ಕೆ ಬಂದು, ಆಯಾ ! ಈದಿನ ಶುಕ್ರವಾರ. ಅಲ್ಲದೆ ದೊಡ ಇಸ್ಕಂದರನಶಕೆಯಲ್ಲಿ ಏಳುಸಾವಿರದ ಮೂನ್ನೂರಿಪ್ಪತ್ತನ ಸಂವ ತೃರಕ್ಕೆ ಸರಿಯಾದ ನಮ್ಮ ಪ್ರಧಾನ ದೀರ್ಘದರ್ಶಿಗಳು ಮಕ್ಕಾದಿಂದ ಮದೀನಾಕ್ಕೆ ಹೊರಟುಬಂದ , ಜರಿಯಂಬಕಯಲ್ಲಿ ಆರುನೂರ ಎಂಭತ್ತು ಮೂರನೆಯ ವರ್ಷವು, ಸಫರ್ ತಿಂಗಳಲ್ಲಿ ಹದಿನೆಂಟನೆದಿನ ಈದಿನ ಬುಧ ಕುದ ಯೋಗವಾದುದರಿಂದ, ಈ ದಿನವೂ, ಈ ವೇಳೆಯೂ, ಕೈರಕ್ಕೆ ಯೋಗ್ಯವಾದುದೇಕೊರತು, ನಿನಗಾದರೆ ಈ ಯೋಗವು, ಉತ್ತಮವಾದು ದಿಲ್ಲ. ಅದರಿಂದ ನನಗೆ ತೋರುವುದೇನಂದರೆ :-ನಿನಗೆ ಮಹತ್ತಾದ ಆಪದವು ಸಂಭವಿಸುವುದು, ಆದರೆ ಪ್ರಾಣಭಯವೇನೂ ಇಲ್ಲ. ಇಂತಹ ದುರವಸ್ಥೆಯು ಈ ಪ್ರವಾಗುವುದಕ್ಕೆ ಮೊದಲೇ, ನೀನು ಎಚ್ಚರಿಕೆಯಾಗಿರುವುದಕ್ಕಾಗಿ, ನಾನು ಹೇಳಿದ ಬುದಿವಾದವನ್ನು ಕುರಿತು, ನೀನು ನನ್ನಲ್ಲಿ ವಿಶ್ವಾಸವುಳ್ಳವ ನಾಗಿ ಇರಬೇಕು. ನಿನಗಂತಹವ್ಯಸನವು ಪ್ರಾಪ್ತವಾದರೆ, ನಾನು ಮಹತ್ತರ ವಾದ ವ್ಯಸನವನ್ನು ಹೊಂದುವನು, ಮಹಾತ್ಮರೇ ! ಇಂತಹ ಅಧಿಕಪ್ರಸಂಗಿಯಾದೆ, ಆ ಕೆರಕನಿಂದ ಆಕಾಲದಲ್ಲಿ ನನಗಂತಹ ವ್ಯಸನ ಉಂಟಾಗಿರಬಹುದು, ನೀವೇ ಯೋಚಿಸಿ, ನಂತರ ನಾನು ಈತನಮೇಲೆ ಕೋಪಿಸಿಕೊಂಡು, ನಿನ್ನ ಜೊತಿಷವನ್ನಾ ಗರಿ, ಶಕುನವನ್ನಾಗಲಿ, ಕೇಳುವುದಕ್ಕಾಗಿ ನಿನ್ನನ್ನು ಕರೆಸಿದವನಲ್ಲ. ನಿನಗೆ ಇಷ್ಮವಾದರೆ ಕಲಸ ಮಾಡು, ಇಲ್ಲವಾದರೆ ಹೊರಟುಹೋಗು ಎಂದು ಸಾಮಾನ್ಯವಾಗಿ ಕಾಮುಕರ ಗುಣವನ್ನು ಹಿಡಿದು ಮಾತನಾಡಿದನು. ಆಯಾ ! ಏಕ ಕೋಪಿಸಿಕೊಳ್ಳುವಿರಿ. ಈ ಊರಿನಲ್ಲಿರುವ ಇತರನಾವಿಪಿತರು ನನಗಂದಿಗ, ಸಮಾನರಾಗಲಾರರು. ನಾನು ಕುಲಕಸಬಿನಿ ಜಾಣ,