________________
೪v೬ ಯವನ ಯಾಮಿನೀ ವಿನೋದ ಎಂಬ, ನಿಂತಿದ್ದನು. ಇವರಿಬ್ಬರನ್ನೂ ನೋಡಿ ನನಗೆ ತುಂಬ ಭಯ ಉಂಟಾ ಯಿತು. ಆಗ ಆ ಸುಂದರೀಮಣಿಯು, ಏಯನೇ ! ನೀನು ನನ್ನ ತಂದೆಗೆ ಹೆದರತಕ್ಕೆ ಕಾರಣವಿಲ್ಲ. ಆತನು ಬಂದರೂ, ನನ್ನ ಅಂತಃಪುರಕ್ಕೆ ಬರುವು ದಿಲ್ಲ. ನಿನ್ನನ್ನು ಯಾವ ತೊಂದರೆಯೂ ಇಲ್ಲದೆ ಮನೆಗೆ ಕಳುಹಿಸುವ ಭಾರವು ನನ್ನದು. ನೀನು ಯೋಚಿಸಬೇಡ, ಸುಮ್ಮನಿರು ಎಂದು ಹೇಳಿ ದಳು. ಎರಡುವಿಧವಾಗಿ ನನಗೆ ನವನಾದ ತೊಂದರೆಗಳಲ್ಲಿ ಮೊದಲನೆ ಯದು ನಿವಾರಣೆಯಾಯಿತು. ಈ ಹಾಳು ಕ್ರಕನಿಂದ ನನಗೆ ತೊಂದರೆ ಯುಂಟಾದುದನ್ನೂ ಮತ್ತೊಂದು ಭಯಕ್ಕೆ ಕಾರಣವನ್ನೂ ನನ್ನ ಮುಂದಿನ ಕಥೆಯನ್ನು ಕೇಳುವುದರಿಂದ, ನೀವೇ ತಿಳಿದುಕೊಳ್ಳಬಹುದು. ಬಳಿಕ ಖಜಿಯು ಮನೆಗೆ ಬಂದಮೇಲೆ, ಆತನ ನೌಕರರಲ್ಲಿ ಒಬ್ಬನು ಏನೋ ತಪ್ಪು ಮಾಡಿದ್ದಕ್ಕಾಗಿ, ಆತನನ್ನು ಬೆತ್ತದಿಂದ ಹೊಡೆ ದನು ಪಟ್ಟು ತಿಂದು ಅಳುತ್ತಿರುವ, ಶಬ್ಬವು ಈಹಜವನಿಗೆ ಕೇಳಿಬಂದ ಕಡಲೆ ಆತನು ತನ್ನ ಬಟ್ಟೆಗಳನ್ನು ಹರಿದುಹಾಕಿಕೊಂಡು, ಗಟ್ಟಿ ಯಾಗಿ ಅಳುತ್ತಾ, ಕುಯೊ ! ಮರ ! ಎಂದು ಅರಚಿಕೊಂಡನು. ನೆರೆಹೊರೆಯವರು, ಆತನನ್ನು ನೋಡಿ ಅಯಾ ! ನೀನು ಹೀಗೆ ಅಳುವು ದಕ್ಕೆ ಕಾರಣವೇನನಲು, ಸಾವಿರಾ ! ನನ್ನ ರಕ್ಷಕನಾದ ಯಜಮಾನನನ್ನು ಈ ಖಾಜಿಯು ಹೊಡೆದು ಕೊಳ್ಳುತ್ತಿರುವನೆಂದು ಹೇಳಿ, ಓಡಿಹೋಗಿ ನನ್ನ ಸೇವಕರನ್ನು ಕುರಿತು ದೊಣ್ಯಗಳನ್ನು ತೆಗೆದುಕೊಂಡುಬರುವಂತೆ ಹೇಳಲು, ಅವರು ರೋಷಾವೇಶದಿಂದಬಂದು ಖಾಜಿಯನುನೆಯ ಬಾಗಿಲನ್ನು ತಟ್ಟಿದರು, ಆಗ ಖಾಜಿಯು ಬಾಗಿಲಬಳಿ ಗಲಾಟೆ ನಡೆವುದಕ್ಕೆ ಕಾರಣ ವೇನೆಂದು, ತನ್ನ ಚಾರಕರನ್ನು ಕೇಳಲು, ಅವರು ಬಂದು ಬಾಗಿಲಬಳಿ ನೋಡಿ ಭಯದಿಂದ ಓಡಿಹೋಗಿ, ಅಯಾ ! ಹತ್ತುಸಾವಿರಮಂದಿ ನಿನ್ನ ಮನೆಯನ್ನು ದೋಚಿಕೊಳ್ಳುವುದಕ್ಕಾಗಿ ಬಂದಿರುವರೆನಲು, ಕೂಡಲೆ ಖಾಜಿ ಹೊರಗೆಬಂದು ನೀವು ಬರುವುದಕ್ಕೆ ಕಾರಣವೇನು, ಎಂದರು ! ಆಗ ಚಾರಕರು ಸ್ವಲ್ಪವೂ ಮರ್ಯಾದೆ ಇಲ್ಲದೆ, ವಿಲಾ ! ದುರಾತ್ಮನಾದ ಪಾಪಿ. ನೀನು ನನ್ನ ಯಜಮಾನನನ್ನು ಕೊಲ್ಲುತಿರುವುದೇತಕ್ಕೆ ? ಆತನು ನಿನಗೆ ಏನು ಅಪರಾಧ ಮಾಡಿದನು ಎನಲು ಖಾಜಿಯು, ಅಯ್ಯೋ ! ನಿಮ್ಮ