________________
ಅರೇಬಿಯನ್ ನೈಟ್ಸ್ ಕಥೆಗಳು, ವುದಾದರೆ, ನನ್ನ ಮತ್ತು ಈ ಹೆಣ್ಣು ಜಿಂಕೆಯ ಕಥೆಯನ್ನು, ನಿಮಗೆ ವಿಸ್ತಾರವಾಗಿ ಹೇಳುವೆ ನೆಂದು, ನುಡಿದನು. ಅದು ನೀವು ಕೊಲ್ಲಹೋ ಗುವ ವರಕನ ಕಥೆಗಿಂತಲೂ, ಹೆಚ್ಚಾದ ಉತ್ಸಾಹವನ್ನು ಆಶ್ಚರ ವನ್ನು ವುಂಟು ಮಾಡುವುದಾಗಿದ್ದರೆ ಈ ನಿರ್ಭಾಗ್ಯನಾದ ವರಕನ ಮೇಲೆ ಹೊರಿಸಿರುವ ತಪ್ಪಿತದಲ್ಲಿ ಮೂರರಲೆಂದು ಭಾಗವನ್ನು ಮನ್ನಿ ಸಬೇಕು ಎಂದು ಹೇಳಲು, ಆ ಭೂತವು ಸ್ವಲ್ಪ ಹೊತ್ತು ಯೋಚಿಸಿ ಒಳ್ಳೆಯದು, ಹಾಗೆ ಆಗಲಿ ಎಂದು ಹೇಳಿ ಸುಮ್ಮ ನಿದ್ದಿತು. ಒ೦ ದ ನ ಮು ದ ಕ ನ ಜ ಫೆ . ಆಗಮುದುಕನು ಭೂತವನ್ನು ಕುರಿತು ಇನ್ನು ನನ್ನ ಕಥೆಯನ್ನು ನಾ ರುಭ ಮಾಡುವೆನು. ಸಾವಕಾಶ ಮನಸ್ಕನಾಗಿ ಕೇಳು. ನೀನು ನೋಡುತ್ತಿರುವ ಈ ಹೆಣ್ಣು ಜಿಂಕೆಯು, ನನ್ನ ದೊಡ್ಡಪ್ಪನ ಮಗಳು, ಮತ್ತೆನು ಹೇಳ ಬೇಕು, ನನ್ನ ಪ್ರೀತಿಪಾತ್ರಳಾದ ಅಚ್ಚು ಮೆಚ್ಚಿದ ಹೆಂಡತಿ, (ಅರವಿಯವರಾದ ಮುಸಲ್ಮಾನರು ಇಂತು ಚಿಕ್ಕಪ್ಪ ದೊಡ್ಡ ಜೈನ ಮಕ್ಕಳನ್ನು ಮದುವೆ ಮಾಡಿ ಕೊಳ್ಳುವ ವಾಡಿಕೆ ಯುಂಟು) ಇವ ಳನ್ನು ಮದುವೆ ಮಾಡಿ ಕೊಳ್ಳುವ ಕಾಲದಲ್ಲಿ ಇವಳಿಗೆ ಹನ್ನೆರಡು ವರುಷ. ಆದುದರಿಂದ ಇವಳು ನನ್ನನ್ನು ತಂದೆಯೆಂದೂ, ಗಂಡನೆಂದೂ ಭಾವಿಸು ತಾ ನಡೆದು ಕೊಳ್ಳೆ ಬೇಕಾದುದು ನ್ಯಾಯವೇ ಅಲ್ಲವೆ ? ಆಗಿನಿಂದಲೂ, ಇಪ್ಪತ್ತು ಸಂವತ್ಸರಗಳವರೆಗೂ ಸಸಾರವನ್ನು ನಡೆಸಿದರೂ, ಮಕ್ಕ ೪ಾಗಲಿಲ್ಲ, ಆದರೂ, ಇವಳು ಬಂಜೆ ಯೆಂದು ಅಲಕ್ಷ ಮಾಡದೆ, ಇವಳನ್ನು ಅತ್ಯಂತ ಪ್ರೇಮದಿಂದ ನೋಡಿ ಕೊಳ್ಳು ತಿದ್ದೆನು. ಮಕ್ಕಳಾಗ ಬೇಕೆಂಬ ಅಪೇಕ್ಷೆಯಿಂದಲೆ, ಒಬ್ಬ ಗೌಡಿಯನ್ನು ಕೊಂಡೆನು. ಅವ ಇಲ್ಲಿ ನನಗೊಬ್ಬ ಕುಮಾರನು ಹುಟ್ಟಿದನು. ಅವನು ಬಹಳ ಬುದ್ಧಿ ನಂತನಾಗುವ ಮಟ್ಟಿಗಾದನು. ನನ್ನ ಹೆಂಡತಿ ಅಸೂಯೆಯಿಂದ ಆತಾಯಿ ಮಕ್ಕಳ ಮೇಲೆ ತುಂಬ ಕೊರವಂತಳಾಗಿ, ತನ್ನ ಕಾರವನ್ನು ಕೊನೆ ಮುಟ್ಟಿಸಿ ಕೊಳ್ಳುವವರೆಗೂ ನನಗೆ ಆ ಸಂಗತಿಯನ್ನು ಚೆನ್ನಾಗಿ ತಿಳಿಯ ಹೇಳಲಿಲ್ಲ.ಇಸ್ಮರಲ್ಲಿಯೇ ನನ್ನ ಮಗನು ಎಂಟುಹತ್ತು ವರುಷ ನ್ಯಾಯ ದವನಾದನು,