ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೫೯೬ ಇರ್ಬತಿಹರನು ಕಲೀಫರಿಗೆ ಬೇಕಾದವನಾಗಿದ್ದುದರಿಂದ, ಎಲ್ಲಿ ಸಂಚಾರ ಮಾಡಿದರೂ ರಾಜಭಟರು ಕೇಳುತ್ತಿರಲಿಲ್ಲ. ನಾನು ಹಾಗೆ ಬಂದರೆ ಮಹ ತಾದ ಪ್ರಮಾದ ಉಂಟಾದೀತು. ಆದುದರಿಂದ ರಾಣಿಯು ಈ ಅನಾ ಗಳನ್ನೆಲ್ಲಾ ಚೆನ್ನಾಗಿ ಯೋಚಿಸಬೇಕೆಂದು, ನಾನು ಹೇಳಿದೆನೆಂದು ವಿವರಿಸಿ, ಇಲ್ಲವಾದರೆ ನಾವುಗಳು ಅತ್ಯಂತವಾದ ತೊಂದರೆಗೆ ಸಿಕ್ಕಿಕೊಳ್ಳುವುವಂದು ಹೇಳುವನು. ಬಳಿಕ ದಾದಿಯು ಆತನ ಭಯವನ್ನು ಹೋಗಲಾಡಿಸಿ ಧೈರ ವನ್ನು ಹೆಚ್ಚಿಸಬೇಕೆಂದು, ಅಲes ! ಮಹದುಪಕಾರವನ್ನು ಹೊಂದಿ ನಿನ್ನ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು, ನಿನ್ನನ್ನು ಅರಮನೆಗೆ ಕರೆಸಿಕೊಳ್ಳುವ ರಾಣಿಯು, ನಿನಗೆ ಮಹತ್ತಾದ ವಿಪತ್ತನ್ನು ತಂದುಬಿಡ ವಳೆಂದು ತಿಳಿದುಕೊಂಡು ಇರುವೆಯಾ ? ಹಾಗಂದಿಗೂ ಯೋಚಿಸಬೇಡ, ನಿನಗೆ ಯಾವ ತೊಂದರೆಯೂ ಇಲ್ಲದಂತೆ ನೋಡಿಕೊಳ್ಳುವುದಕ್ಕೆ ನಾನೂ ನಮ್ಮ ರಾಣಿಯಸಹ ಬಹು ಎಚ್ಚರಿಕೆಯಿಂದ ನೋಡಿಕೊಳ್ಳುವೆವೆಂದು, ಹೇಳಲು, ಆತನು ಬಹು ಧೈರ್ಯದಿಂದ, ನನ್ನ ಬಳಿಗೆ ಬರುತ್ತಾ ಗಡ ಗಡನೆ ನಡುಗಲು ಆರಂಭಿಸಿದನು. ಆತನ ದುರವಸೆಯನ್ನು ನೋಡಿ, ದಾದಿಯು ಅಯಾ ! ನೀನು ನನ್ನ ಸಂಗಡ ಬರುವುದಕ್ಕಿಂತಲೂ, ನಿನ್ನ ಮನೆಯಲ್ಸ್ ಇರುವುದು ಉತಮ. ಹೇಗಾದರೂ ಮಾಡಿ ರಾಣಿಯೇ ನಿನ್ನ ಬಳಿಗೆ ಬರವಂತ ಮಾಡು ವೆನೆಂದು ಹೇಳಿ, ಆತನನ್ನು ಸಮಾಧಾನ ಮಾಡಿ, ರಾಣಿಯಬಳಿಗೆ ಬಂದು ನಡೆದ ವರ್ತಮಾನವನ್ನು ಬಿನ್ನವಿಸಲು, ರಾಣಿಯ ಕೊರಕೊರಟು ರತ್ನ ಪಡಿವರ್ತಕನಮನೆಗೆ ಬಂದಳು. ಆಕೆಯನ್ನು ಬಹು ಮರ್ಯಾದೆಯಿಂದ ಬರಮಾಡಿಸಿಕೊಂಡು, ರತ್ನ ಪಡಿವಾಪಾರಿಯು ಸತ್ಕರಿಸಿದನು. ರಾಣಿಯು ಬಹು ಆಯಾಸದಿಂದ ಸುದಾರಿಸಿಕೊಳ್ಳುವುದಕ್ಕಾಗಿ ಮುಸುಕನ್ನು ತಗದು, ತನ್ನ ಸೌಂದರ್ಯವನ್ನು ರತ್ನ ವಡಿವ್ಯಾಪಾರಿಗೆ ತೋರಿಸಲು, ಆತನು ಆಹಾ ! ಇಂತಹ ಸುಂದರಿಯನ್ನು ರಾಜಪುತ್ರನು ಮೋಹಿಸಿದುದು ನ್ಯಾಯ ನಾಗಿರಬಹುದು ಎಂದು ಯೋಚಿಸುತ್ತಿರುವಾಗ, ಸೇವುಸೆಲನಹರಳು, ರತ್ನಪಡಿವಾವಾರಿಯನ್ನು ಬಹು ಮುರಾದೆಯಿಂದನೋಡಿ, ನಿಲಾಂಮಾಡಿ ದನಂತರ, ಅಯಾ ! ನೀನು ನನಗೆ ರಾಜಕುಮಾರನಿಗೂ ಉಪಕಾರ