________________
سلام ಯವನ ಯಾಮಿನೀ ವಿನೋದ ಎಂಬ, ಜನರೂ ಒಪ್ಪುವಂತೆ ನಿನ್ನ ಮಗನ ಶವವನ್ನು ಹೇಮುಸೆಲ್‌ನೆಹರಳ ಗೋರಿ ಯಲ್ಲಿ ಇಡಿಸಬೇಕೆಂದು ಬೇಡಿಕೊಂಡಳು. ಆಕೆ ಅದೇಮೇರೆಗೆ ಸಮ್ಮತಿಸಿ ದುದರಿಂದ, ಅಲ್ಲಿ ನೆರೆದಿದ್ದ ಜನರೆಲ್ಲರೂ ರಾಜಪುತ್ರನ ಶವವನ್ನು ತಂದು, ಆ ಗೋರಿಯಲ್ಲಿ ಸಮಾಧಿ ಮಾಡಿದರು, ಆದುದರಿಂದಲೇ ನಮ್ಮ ಮಹಮ್ಮ ದೀಯ ಮತಸ್ಥರೆಲ್ಲರೂ, ಆ ಪಟ್ಟಣವು ಪುಣ್ಯಸ್ಥಲವೆಂದು ತಿಳಿದು, ಇಗಲ ಯಾತೆ) ಹೋಗುತ್ತಿರುವರೆಂದು ಹೇಳಿ, ಕಥೆಯನ್ನು ಮುಗಿಸಿ ದಳು, ದಿನರಜಾದಿಯ, ತನ್ನ ಸಹೋದರಿಯಾದ ಸಹರಜಾದಿಯನ್ನು ಕುರಿತು, ಅಕ ! ನೀನು ಹೇಳಿದ ಕಥೆಯಿಂದ ನನಗೆ ಸರನೋತ್ಸಹ ಉಂಟಾಯಿತೆಂದು ನುಡಿಯಲು, ಪಹರಜಾದಿಯು ತಂಗಿ ! ಸುಲಾನರು ದಯಮಾಡಿ ನನ್ನ ನಾ ಣವನ್ನು ಉಳಿಸಿದುದೇ ಆದರೆ, ನಾಳಿನದಿನ ಇದ ಕ್ಕಿಂತಲೂ ಅತಿಚಮತ್ಕಾರವಾಗಿರುವ, ರಾಜಕುಮಾರನಾದ ಕಮರಲು ಜಮಾನನ ಕಥೆಯನ್ನು ಹೇಳುವೆನೆಂದು ನಿರೂಪಿಸಿದಳು, ೨೧೦ ನೆಯ ರಾತ್ರಿ | ಕಥೆ. ಮರುದಿನ ಬೆಳಗಿನ ಜಾವದ ತನ್ನ ತಂಗಿಯಾದ ದಿನರ ಜಾದಿಯಿಂದ ಎಚ್ಚರಿಸಲ್ಪಟ್ಟ ಪ್ರಹರಜಾದಿಯು ತಾನು ಹಿಂದಿನದಿನ ದಲಿ ವಾಗ್ದಾನ ಮಾಡಿದಂತೆ, ಕಮರಲು ಜಮಾನನ ಕಥೆಯನ್ನು ಹೇಳತೊಡಗಿವಳು. ( ಖಾಳಿದಾಸನ ಮಕ್ಕಳ ಹೆಸರಿನ ರಾಜ್ಯವನಾಳುತಿದ್ದ) ಕಮರಲುಜಮಾನನಗೂ, ಚೀನಾದೇಶದ ರಾಜ ಕುಮಾರಿಯಾದ ಬಂದಾ ಎಂಬ ಸಿ ಶಿರೋಮಣಿಗೂ, ಉಂಟಾದ ವೆಶದ ಕಥೆ. . ಸುಲ್ತಾನರೇ ! ಪರ್ಷಿಯಾ ದೇಶದಿಂದ ಹೊರಟರೆ, ಇಪ್ಪತ್ತು ದಿನಗಳ ಪ್ರಯಾಣದ ದೂರದಲ್ಲಿ, ಸಮುದ್ರ ಮಧ್ಯದಲ್ಲಿ ಖಾಳಿದಾಸನ ಮಕ್ಕಳ ದಿವಂಗಳೆಂಬ, ನಡುಗಡ್ನಗಳುಂಟು. ಆ ದ್ವೀಪಗಳು ನಾಲ್ಕು ದೊಡ್ಡ ರಾಜ್ಯಗಳಾಗಿ ವಿಭಾಗಿಸಲ್ಪಟ್ಟು, ಒಂದೊಂದು ದೇಶದಲ್ಲಿಯೂ ಮಹಾ ವಿಸ್ತಾರವಾಗಿಯೂ, ಅತ್ಯಂತ ಜನಭರಿತವಾಗಿಯೂ, ಇರುವ