ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩೦ ಯವನ ಯಾಮಿನೀ ವಿನೋದ ಎಂಬ, ನಿಮ್ಮ ರಾಜ್ಯದ ಮಂತ್ರಾಲೋಚನಾಸಭೆಯ ಮುಖ್ಯಸ್ಥನಾಗಿ ನಿಯಮಿಸಿಕೊಂಡು, ಆತನ ಸಕಲವಿಧವಾದ ಶಕ್ತಿ ಸಾಮರ್ಥ್ಯಗಳ ನಿಮಗೆ ತಿಳಿಯಬಂದಮೇಲೆ, ರಾಜ್ಯಭಾರವನ್ನು ಕೊಡಬಹುದೆಂದು ಹೇಳಿ ದನು. ರಾಜನು ಯುಕ್ತಿಯುಕ್ತನಾದ ತನ್ನ ಮಂತ್ರಿವರ್ಯನ ಮಾತು ಗಳನ್ನು ಕೇಳಿ, ಬಹಳವಾಗಿ ಮೆಚ್ಚಿಕೊಂಡು, ತನ್ನ ಕುಮಾರನ್ನು ಬರ ಮಾಡುವಂತೆ ಆಜ್ಞೆ ಮಾಡಿದನು. ಆದರೆ ರಾಜಕುಮಾರನು ತನಗಿ ವಾದ ಕಾಲದಲ್ಲಿ ತಂದೆಯನ್ನು ನೋಡುತ್ತಿದ್ದನು. ಆದುದರಿಂದ ಸುಲ್ಲಾ ನನು ತನ್ನನ್ನು ಬರಮಾಡುವಂತೆ ಹೇಳಿದರೆಂದು ನುಡಿದ ಮಂತಿ ಸೇವಕರ ಪಕ್ಕಕ್ಕೆ ತನು ಬಹಳವಾಗಿ ಹೆದರಿ, ಶೀಘ್ರವಾಗಿ ಹೊರಟುಬಂದು, ಬಹು ನವನಗಿ ತಂದೆಗೆ ನಮಸ್ಕರಿಸಿ ನಿಂತುಕೊಂಡನು. ರಾಜನು ತನ್ನ ಕುಮಾರನನ್ನು ನೋಡಿ, ಅಯಾ ! ನಾನು ನಿನ್ನನ್ನು ಇಲ್ಲಿಗೆ ಏತಕ್ಕಾಗಿ ಬರಮಾಡಿದೆನೆಂಬದನ್ನು ಹೇಳಬಲ್ಲೆಯಾ ? ಎನಲು, ಸಾವಿರಾ ! ಅಂತ ರ್ಗತವಾದ ತಮ್ಮ ಹೃದಯವನ್ನು ಅಂತರಾತ್ಮಸ್ವರೂಪನಾದ ನಾರಾಯ ಣನೇ ಬಲ್ಲನಲ್ಲದೆ ಅನ್ಯಥಾ ಇಲ್ಲವಾದುದರಿಂದ, ತಾವು ದಯಮಾಡಿ ನಿಮ್ಮ ಏಸಬೇಕೆಂದು ಬೇಡಿಕೊಳ್ಳಲು, ರದನು ಆಯಾ ! ನೀನು ವಯಸ್ಕ ನಾಗಿರುವುದರಿಂದ, ಯುಕ್ತವಾದ ರೀತಿಯಲ್ಲಿ ವಿವಾಹ ಮಾಡಬೇಕೆಂಬ ಇಚ್ಛೆಯುಳ್ಳವನಾಗಿರುವೆನು. ಈ ವಿಷಯದಲ್ಲಿ ನಿನ್ನ ಅಭಿನಯವೇನೆನಲು, ರಾಜಕುಮಾ ರನು ಸಾಮಾ ! ಎಂದು ನುಡಿದು ಮುಂದೆ ಮಾತನಾಡಲು ಅವಕಾಶ ದೊರೆಯದೆ ತತ್ತರಿಸುತ್ತ, ಸ್ವಲ್ಪ ಹೊತ್ತು ಸುಮ್ಮನಿದ್ದು, ಬಾಲಕ ನಾದ ನನ್ನಲ್ಲಿ ನೀವು ಮಾಡಿದ ಪ್ರಶ್ನೆಯಿಂದ ನಾನು ವಿಸ್ಮಯವನ್ನು ಹೊಂದಿ ರುವೆನೆಂಬುದು, ತಮ್ಮ ದಿವ್ಯಚಿತ್ರಕ್ಕೆ ವೇದ್ಯವಾಗಿದ್ದರೆ, ನನ್ನನ್ನು ಕ್ಷಮಿಸಿ ಬೇಕೆಂದು ಬೇಡಿಕೊಳ್ಳುವೆನು, ಗೃಹಸ್ಥರಾದವರ ಸುಖವೂ, ಜನರ ದುರ್ಹೃದಯವೂ, ಅವುಗಳಿಂದ ಉಂಟಾಗುವ ಫಲವನ್ನು ಸಹಾ ನಾನು ಚೆನ್ನಾಗಿ ಕೇಳಿರುವೆನು. ಎಂದಿಗೂ ಯಾವಾಗಲೆ ಮದುವೆಯಾಗ ಬೇಕಂಬ ಕೋರಿಕೆ ಹುಟ್ಟುವುದೂ ಇಲ್ಲವೋ ನನಗೆ ತಿಳಿಯದು. ಮನ ಸಾದರೂ ಒಂದೇ ವಿಧವಾಗಿ ಇರಲಾರದೆಂಬುದೇ ನನಗೆತಿಳದೇಯಿರುವುದು