________________
೬೨ ಯವನ ಯಾಮಿನೀ ವಿನೋದ ಎಂಬ, 4. ಏಳೆಂದು ನುಡಿದು, ಬಲವಾಗಿ ಹೊರಳಿಸಿದರೆ, ಯಕ್ಷಿಣಿಯ ಮಾಯದಿಂದ ರಾಜಪುತ್ರನು ಗಾಢಾರೂಢವಾದ ನಿದ್ರೆಯನ್ನು ಆಲಿಂಗಿಸಿಕೊಂಡು, ಮೈ ಮರದಿರುವುದನ್ನು ನೋಡಿ, ಆಹಾ ! ನಾವಿಬ್ಬರೂ ವಿನೋದವಾಗಿರುವುದ ನ್ನು ನೋಡಿ, ಸಹಿಸಲಾರದ ಸಸಿಗಳು ನಿನಗೇನನ್ನು ಮಾಡಿರ.ವರೋ ತಿಳಿ ಯದು. ಅಯ್ಯೋ ! ಇಂಥಾ ವಿಚಿತ್ರ ಕರವಾದ ವಿರಹಾಗ್ನಿಯನ್ನು ತಾಳ ಲಾರೆನಲ್ಲ ! ಎಂದು ಬಹಳವಾಗಿ ವ್ಯಥೆಯಿಂದ ನರಳುತ್ತಾ, ತನ್ನ ಕೈ ಬೆರಳನ್ನು ನೋಡಿಕೊಂಡು, ಬಳಿಕ ರಾಜಪುತ ನ ಕೈ ಬೆರಳನ್ನು ನೋಡಿ ತನ್ನ ಉಂಗುರವು ಆತನ ಕೈಬೆರಳಲೂ, ಆತನುಂಗುರವು ತನ್ನ ಹಸ್ಯ ದಲ್ಲೂ, ಇರುವುದನ್ನು ಕಂಡು, ವಿನ್ಯಯುಕ್ತಳಾಗಿ ತಮ್ಮಿಬ್ಬರಿಗೂ ಮದುವೆಯಾದುದಕ್ಕಾಗಿ, ಇದೇ ಚಿಹ್ನೆಯು ಕಂಡುಬಂದಂತಾಯಿತಂದು ಯೋಚಿಸಿಕೊಂಡಳು. ಸ್ಪಲ್ಪ ಹೊತ್ತು ಕಳೆದಬಳಿಕ ರಾಜಪುತ್ರನನ್ನು ಎಚ್ಚರಗೊಳಿ ಸುವುದಕ್ಕಾಗಿ ಪ್ರಯತ್ನ ಮಾಡಿ, ಕಡೆಗೆ ರಾಜಪುತ ನು 'ಚರಿಕೆಯಾ ದಿರುವುದನ್ನು ಕಂಡು, ಅಯ್ಯೋ ! ಬಜಪುತ್ರನೇ ! ನೀನು ಹೇಗಾದರೂ ಎದ್ದರೆ ಸಾಕೆಂದು, ನಾನು ಬಹಳವಾಗಿ ಪ್ರಯತ್ನ ಮಾಡಿ ಕಡೆಗೆ ನಿದಾ ಭಂಗ ಆಗುವುದೆಂಬ ಭಯದಿಂದ ಸುಮ್ಮನಾದೆನು. ಆದರೂ ನಿನ್ನನ್ನು ಅಗಲಿಹೋಗುವುದಕ್ಕೆ ನನಗೆ ತುಂಬಾ ಅಸಾಧ್ಯವಾಗಿರುವುದರಿಂದ ನಾನು ನಿನ್ನ ಪಕ್ಕದಲ್ಲಿ ನಿದಿಸುವೆನೆಂದು ಹೇಳಿ, ಮಲಗಿಕೊಂಡು ನಿದ್ರೆ ಮಾಡಿದಳು. ರಾಜಪುತ್ರಿಗೆ ಇನ್ನೂ ಎರವಾಗದಾದದುದರಿಂದ ಈ ನು ಮಾತನಾಡ ಬಹುದೆಂದು ತಿಳಿದು, ಮರಿಮನಳು ರಾಕ್ಷಸನನ್ನು ಕುರಿತು, ಎಲಾ ! ನೀಚರಕಸನೇ ! ನೋಡಿದೆಯೋ ! ಇದುವರೆಗೂ ನಡೆದ ವಿಚಿತ್ರ ಸಂದ ರ್ಶನದಲ್ಲಿ ಯಾರು ಅಧಿಕವಾದ ಮೋಹವನ್ನು ಹೊಂದಿದರೆಂಬದನ್ನು ನೀನೇ ತಿಳಿದಿರುವೆಯಲ್ಲ ! ಆದರೂ ನಿಮ್ಮ ರಾಜಪುತಿಯು ಅತಿಶಯವಾದ ಲಾವಣ್ಯವಂತನಾದ ರಾಜಕುಮಾರನನ್ನು ಮೋಹಿಸಿ, ಚಿಂತಾಕಾ }ಂತ ಛಾಗಿ ನಿದಿ ಸಿದಳಲ್ಲ ! ಆದುದರಿಂದ ಇನ್ನು ಮೇಲೆ ನಾನುಹೇಳುವ ಮಾತು ಗಳನ್ನು ನಂಬಿಕೊಂಡಿರು ಎಂದು ಹೇಳಿ, ಭೂತರಾಜನಾದ ಕಸುಗಾತ್ಮನ ಕಡೆಗೆ ತಿರುಗಿ ಅಯಾ ? ನೀನು ನನಗೋಸ್ಕರವಾಗಿ ಪ್ರಯಾಸಹೊಂದಿ ದುದಕ್ಕಾಗಿ, ನಾನು ವಧಿಸುವೆನು. ಈ ರಾಕ್ಷಸನು ರಾಜಪುತಿಯನ್ನು