________________
೬೪ ಯವನ ಯಾಮಿನೀ ವಿನೋದೆ ಎಂಬ, ಯಾವುದನ್ನು ಕಾಣದ ಚಾರಕನು ತಾನು ಏನೂ ಹೇಳಲಾರದ, ಸುಮ್ಮ ನಿರಲು ರಾಜಪುತ್ರನು ಬಹು ಕೋಪದಿಂದ ಆತನನ್ನು ನೆಲಕ್ಕೆ ಬೀಳು ಮತೆ ಹೊಡೆದು, ಒಂದಾನೊಂದು ಹಗಕ್ಕೆ ಕಟ್ಟಿ, ಭಾವಿಯಲ್ಲಿ ಬಿಟ್ಟು ಹಲವುಸಾರಿ ಮುಳುಗಿನತ, ಹೇಳು ? ಹೇಳು !! ನಿಜವನ್ನು ಹೇಳು!! ಈಗಲಾದರೂ ಹೇಳು. ಇಲ್ಲದಿದ್ದರೆ ನಾನೆಂದಿಗೂ ಬಿಡನೆಂದು, ಆತನನ್ನು ಬಹಳನಾಗಿ ನೋಯಿಸುತ್ತ, ಮತ್ತೆ ಮತ್ತೆ ಭಾವಿಯಲ್ಲಿ ಬಿಟ್ಟು, ನೀರಿ ನಲ್ಲಿ ಮುಳುಗಿಸುತ್ತಾ ಇದ್ದನು. ಆ ಚಾರಕನು ತಾನು ಸಾಯುವ ಕಾಲವು ಒದಗಿಬಂದುದನ್ನು ಕಂಡು, ನಾನು ಇನ್ನು ಸುಳ್ಳು ಹೇಳದೆಂದರೆ ನನ್ನ ಪ್ರಾಣಂಗಳುಳಿಯುವುದಿಲ್ಲವೆಂದು ತಿಳಿದು, ಅಯಾ! ನೀನು ದಯ ಮಾಡಿ ನನ್ನನ್ನು ಬಿಟ್ಟರೆ ನಾನು ನಿಜವನ್ನು ಹೇಳುವೆನು. ಆದರೆ ತನಗೆ ಅವಕ ಶಮಾತ್ರವೇ ಬೇಕಾಗಿರುವುದಾದುದರಿಂದ ಅಪ್ಪಣೆಮಾಡಿದರೆ, ಬೇರೆ ಬಟ್ಟೆಗಳನ್ನು ಹಾಕಿಕೊಂಡು, ವಿಹಿಸುವೆನೆಂದು ಹೇಳಲು, ರಾಜಪುತ್ರನು ಹಾಗೆಯೇ ಆಗಲೆಂದು ಒಪ್ಪಿಕೊಂಡುದರಿಂದ, ಚಾರಕರ ತನ್ನ ಕೊಠ ಡಿಗಯೋಗಿ, ಬೇರೆ ಬಟ್ಟೆಗಳನ್ನು ಹಾಕಿಕೊಂಡು, ಸಪುತ್ರ ಸಿಗೆ ಹೆದರಿ ಓಡಿಹೋಗಿ, ಅರಮನೆಯನ್ನು ಸೇರಿದರು. ಆಗ ರಾಜನು ತನ್ನ ಮಗನು ತನ್ನನ್ನು ತಿರಸ್ಕರಿಸಿ, ಅವಿನೀತ ನಾಗಿರುವುದರಿಂದ, ತನಗುಂಟಾಗಿರುವ ದುಃಖವನ್ನು ಕುರಿತು, ಪ್ರಧ- ನ ಮುಂತಿಯೊಡನೆ ಚೇಳುತ್ತಿದ್ದನು. ಆಗ ಮುಂತಿಯು ಅಯಾ ! ಆತ ನನ್ನು ಇನ್ನು ಕೆಲವುದಿನಳ ವರೆಗೆ, ಹಾಗೆಯೇ ಇರುವುದರಿಂದ, ಅಹಂ ಕಾರವಣಗಿ ಕೆಲವುಕಾಲದಿ ಮಾರ್ಗಕ್ಕೆ ಬರುವನು. ಈ ಅರ್ಥದಲ್ಲಿ ಸಂದೇಹವೇ ಇಲ್ಲವಾದುದರಿಂದ, ನೀನು ಚಿಂತಿಸಬೇಡವೆಂದು ನುಡಿದನು. ಆ ಕಾಲಕ್ಕೆ ಸರಿಯಾಗಿ ಚರಕನು ಓಡಿ ಬಂದು ರಾಜನಿಗೆ ನಮಸ್ಕರಿಸಿ, ಎದ್ದು ನಿಂತು, ಅಯಾ ! ಬಡ, ಕೂ ರವಾದ ಸಮಾಚಾರವನ್ನು ತಂದಿ ರುವ, ನಿನ್ನ ಮಗನ ಕಡೆಯ ದೂತನಾದ ನನ್ನನ್ನು ನೀನು ಮನ್ನಿಸಬೇಕು. ಅದೇನೆನ್ನುವಿಯೋ ! ನಿನ್ನ ಮಗನಿಗೆ ಪಿಶಾಚವು ಹಿಡಿದಿರುವಂತೆ ಕಾಣು ತದೆ. ಹೇಗೆಂದರೆ :-ನಿನ್ನೆ ರಾತ್ರಿ ತನ್ನ ಬಳಿ ಯಲ್ಲಿ ಯಾರೋ ಒಬ್ಬ ಸಿಯು ಮಲಗಿದ್ದಳೆಂದು ಹೇಳಿ, ಅವಳನ್ನು ಕರೆತಂದವರು ಯಾರು?