ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೭೧೬ ಪ್ರವೇಶಿಸುವುದು ಯೋಗ್ಯವಲ್ಲ. ಆದುದರಿಂದ ನೀನು ಇಲ್ಲಿಯೇ ಇದ್ದರೆ ನಮ್ಮ ಈ ಪಟ್ಟಣಕ್ಕೆ ಹೋಗಿ ಅಲ್ಲಿನ ವಿಶೇಷ ವರ್ತಮಾನಗಳನ್ನು ತಿಳಿ ದುಕೊಂಡು ಬಿಕ್ಷವನ್ನು ತಗೆದುಕೊಂಡು ನಿನ್ನ ಬಳಿಗೆ ಬರುವೆನು, ಅಥವಾ ಒಂದುವೇಳೆ ನನಗೇನಾದರೂ ಅಪಾಯ ಉಂಟಾದರೂ, ನೀನು ಸುಖದಿಂ ದಿರುವೆಯೆಂಬ ಸಂಗತಿಯನ್ನು ಕೇಳಿ, ನಾನು ಸಂತೋಷದಿಂದಿರುವೆನೆಂದು, ಅಣ್ಣನಾದ ಅಂಜೆಯಾದನು ತನ್ನ ತಮ್ಮನನ್ನು ಕುರಿತು ಹೇಳಲು, ಆಸ್ತಿ ದನು ತನ್ನ ಅಣ್ಣನು ಹೇಳಿದ ಮಾತುಗಳನ್ನು ಕೇಳಿ ಸಮ್ಮತಿಸಿದವನಾಗಿ ಅಣ್ಣಾ! ನೀನು ಹೇಳಿದ ವಾಕ್ಯವು ನನಗೆ ಸಮ್ಮತವಾಗಿದ್ದರೂ, ನಾವಿ ಬರ ತಾಳ್ಮೆಯಿಂದ ಕಾರ್ಯಸಾಧನೆಯನ್ನು ಮಾಡಬೇಕಾದುದರಿಂದ ಭಗವಂತನು ನಿನಗೆ ಯಾವುದೆಂದು ಅಪಾಯವೂ ಬರದಂತೆ ಕಾಪಾಡ ಲೆಂದು ಪ್ರಾರ್ಥಿಸುವೆನು, ನಾ ದರೆ ನಿನ್ನ ಆಜ್ಞಾನುಸಾರವಾಗಿ ಇಲ್ಫ್ ಕುಳಿತಿರುವೆನೆಂದು ನುಡಿದನು. ಕೂಡಲೇ ಅಂಜಿಂದಾನು ಪಟ್ಟಣಕ್ಕೆ ಹೊರಟುಹೋದುದ ರಿಂದ ಆಸ್ವಾದನು ಒ: ದಾನೊಂದು ಮರದ ಬುಡದಲ್ಲಿ ಕುಳಿತುಕೊಂಡಿ ದನು. ಕೂಡಲೇ ರಾಜಕುಮಾರನಾದ ಅಂಜಿಯಾದನು ನಗರವನ್ನು ಹೊಕ್ಕುಬರುತ್ತಾ ಒಂದಾನೊಂದು ಬೀದಿಯಲ್ಲಿ ಉತ್ತಮವಸ್ತ್ರಗಳನ್ನು ಧರಿಸಿಕೊಂಡು ಕೈಯಲ್ಲಿ ಚಿತ್ರವನ್ನು ಹಿಡಿದುಕೊಂಡು ಹೋಗುತ್ತಿರುವ ಒಬ್ಬ ದೊಡ್ಮನುಷ್ಯನನ್ನು ಕಂಡು, ಆಯಾ ! ಈ ಊರಿನಲ್ಲಿ ಅಂಗಡಿ ಬೀದಿಗೆ ಹೋಗುವ ಮಾರ್ಗವಾವುದೆಂದು ಪ್ರಶ್ನೆ ಮಾಡಲು ಆ ಮುದುಕನು ಹಸನ್ಮುಖಿಯಾಗಿ ರಾಜಪುತ್ರನಾದ ಆಂಜಿಯಾದನನ್ನು ನೋಡಿ ಅಯಾ! ನೀನುಮಾಡಿದ ಪ್ರಶ್ನೆಯಿಂದೀವೂರಿಗೆ ನೀನು ಹೊಸಬನೆಂದು ತೋರುತ್ತದೆ. ಓಹೋ ! ಹೌದು ? ನೀನು ಹೊಸಬನಾಗಿ, ತೇಜೋವಂತನಾದ ರಾಜ ಪುತ್ರನಾಗಿ ಬಂದಿರುವುದರಿಂದ ನಮ್ಮ ದೇಶಕ್ಕೆ ಯಾವ ಫಲವು ತಾನೇ ಉಂಟೆಂದು ಕೇಳಲು, ಆತನು ಮುದುಕನನ್ನು ನೋಡಿ ಅಯಾ ! ನಾನೂ, ನನ್ನ ತಮ್ಮನೂ, ಕಾರಣಾಂತರದಿಂದ ನಮ್ಮ ಊರನ್ನು ಬಿಟ್ಟು ಎರಡು ತಿಂಗಳವರಿಗೂ ಈ ಕಾಡುಹಾದಿಯಲ್ಲಿ ಸುತ್ತು ಬಹುದೂರ ಪ್ರಯಾ ಣಮಾಡಿ ಈ ಊರನ್ನು ಸೇರಿದೆವು. ನನ್ನ ತಮ್ಮನು ಬಳಲಿಕೆಯನ್ನು