ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೬ ಯವನೆ ಯಾಮಿನೀ ವಿನೋದ ವಿಂಬ, ನಂತರಾಗಿ ಸಮಸ್ತವಾದ ಸುಖವನ್ನು ಹೊಂದುತ್ತಿರುವುದನ್ನು ನೋಡಿ ದರೆ ಒಬ್ಬ ಮನುಷ್ಕನು ಒಂದುವಿಧವಾಗಿ ಸುಖಿಸುತ್ತಿರುವ ಮತ್ತೆ ಬನು ಆತನಂತೆ ಇರಬೇಕೆಂದು ಬಯಸಿ, ಅದರಂತೆ ನಡೆದುಕೊಳ್ಳಲು ಸಾಧ್ಯವಿಲ್ಲವೆಂಬ ಅಭಿಮಾ ಯಉಳ್ಳ ಬರವಣಿಗೆಯನ್ನು ಬರೆದು ಆತನ ಕೈಗೆ ಕೊಡಲು, ರಾಣಿಯು ಆದರ ತಾತ್ಪರ್ಯವನ್ನು ಗ್ರಹಿಸಿಕೊಂಡು ತನ್ನಮತದವನಾದ ಈತನಿಗುಂಟಾಗಿರುವ ದೌರ್ಭಾಗ್ಯವನ್ನು ಹೋಗಲಾ ಡಿಸಬೇಕೆಂದು ತಿಳಿದು ಹಡಗಿನ ಸರದಾರನಾದ ಬಹರಾಮನನ್ನು ಕರೆದು ನೀನು ಈ ಬಾಣಸಿಗನನ್ನು ಕ್ರಯಕ್ಕೆ ಕೊಟ್ಟುಬಿಡುವೆಯಾ ? ಇಲ್ಲವೇ ನನಗೆ ಬಹುಮಾನವಾಗಿ ಕೊಡುವೆಯಾ ? ಹೇಗಾದರೂಮಾಡಿ ನಿನಗ ಈತ ನನ್ನು ಕೊಟ್ಟುಬಿಡುವುದರಲ್ಲಿ ಅಭಿಮಾನ ಉಂಟೆಂದು ನಾನು ಚೆನ್ನಾಗಿ ತಿಳಿದಿರುವೆನಂದು ನುಡಿದಳು, ಆಗ ಹಡಗಿನ ಸರದಾರನು ನಾನು ಈತನನ್ನು ಕ ಯಕ ಕೊಡುವುದಿಲ್ಲ ಅಲ್ಲದೆ ನಿನಗೆ ಬಹುಮಾನವಾಗಿ ಕೊಡುವುದಿಲ್ಲ ಎಂದು ಅಹಂಕಾರದಿಂದ ನುಡಿದನು, ೧೩ಣಿಯು ಆತನನ್ನು ಲಕ ಮಾಡದ ರಾಜ ಕುಮಾರನನ್ನು ಕರೆದುಕೊಂಡು ತನ್ನರಮನೆಗೆ ಹೋಗಿ ಚಾರಕರನು ಕರೆದು ಅಂಗಾ ! ನೀವುಗಳು ಇಲ್ಲಿಂದ ಹೊರಟು ಹಡಗಿನಬಳಿಯನ್ನು ಸೇರಿ, ಅದರಲ್ಲಿರುವ ಸಾಮಾನುಗಳನ್ನು ಕಿತ್ತುಕೊಂಡು ಆತನನ್ನು ಓಡಿಸಿ ಬಿಡಿರೆಂದು ನುಡಿಯಲು, ಅವರು ಹಾಗೆಯೇ ಮಾಡಿದರು. ನಂತರ ರಾಣಿಯು ಭೋಜನಾದಿಗಳನ್ನು ರಾಜಪುತ್ರನಾದ ಅಂಜಿಯಾದನೊಡನೆ ತೀರಿಸಿ ನಂತರ ಆತನನ್ನು ಬಹು ವಿಶ್ವಾಸದಿಂದ ತನ್ನ ರಾಣಿವಾಸಕ್ಕೆ ಕರೆದುಕೊಂಡು ಹೋಗಿ ಅಯಾ ! ಇದುವರಿಗೂ ನಿನ್ನನ್ನು ನಾನು ಬಾಣಸಿಗನೆಂದು ತಿಳಿ ದಿದನು, ಆದರೆ ಇನ್ನು ಮೇಲೆ ನಾನು ಹಾಗೆಂದು ಭಾವಿಸೆನು ಆದುದರಿಂದ ನೀನು ನನ್ನ ಬಳಿಯಲ್ಲಿ ಕುಳಿತುಕೊಂಡು ಸಂತೋಷದಿಂದ ಮಾತನಾಡುತ್ತ, ನಿನ್ನ ವಿಚಾರವನ್ನು ನನಗೆ ತಿಳಿಸಬೇಕು. ಹಡಗಿನ ಯಜಮಾನನಾದ ಬಾದರಾಮನು ಹೇಳಿದಮಾತನ್ನು ಕೇಳಿದುದರಿಂದ ನಿನ್ನಲ್ಲಿ ಆತನು ಏನೋ ದೊ ಹಚಿಂತೆಯನ್ನು ಎಣಿಸಿರಬೇಕೆಂದು ತೋರುವುದೆಂದು ನುಡಿಯಲು, ರಾಜಪುತ್ರನು ತನ್ನನ್ನು ಬಹು ಮರ್ಯಾದೆಯಿಂದ ಸತ್ತರಿಸುತ್ತಿರುವ Vಾಣಿಯನ್ನು ಕುರಿತು ಬಹಳವಾಗಿ ವಂದನೆಗಳನ್ನು ಮಾಡಿ, ತನ್ನ ಕಥೆ ಯನ್ನು ಹೇಳಲಾರಂಭಿಸಿದನು. ರಾಜಕುಮಾರನು ತನ್ನ ಕಥೆಯನ್ನು