ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& ಪೂರಾಪರಜ್ಞತೆ ನಿಮ್ಮ ದೊರೆಯ ಶಿರಶ್ಚ ದನವನ್ನು ಮಾಡು ; ನಿನಗೆ ವಿಪತ್ತು ಬಂದರೆ ನಾನು ನಿನ್ನನ್ನು ರಕ್ಷಿಸುತ್ತೇನೆ, ” ಎಂಬುದಾಗಿ ಹೇಳ ಬಹುದ್ರವ್ಯವನ್ನು ಕೊಟ್ಟು ಕಳುಹಿಸಿದನು. ಆ ನಾಪಿತನು ಈ ಧನಕ್ಕಾಗಿ ಆಸೆಪಟ್ಟು, ಸ್ವಾಮಿ ಹತ್ಯ ಮಾಡುವುದೇ ಸರಿ ಎಂಬುದಾಗಿ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಅರಮನೆಗೆ ಹೋದನು. ಅಲ್ಲಿ ದೊರೆಯನ್ನು ನೋಡಿದಕೂಡಲೆ ಆ ನಾಪಿತ ನಿಗೆ ಭಯವುಂಟಾಯಿತು. ಆದರೂ ಅವನು ಆ ಭಯವನ್ನು ನಿಗ್ರಹಿಸಿ ಕೊಂಡು ಮುಂಡನವನ್ನು ಮಾಡುವುದಕ್ಕೆ ಸನ್ನಾಹಮಾಡಿಕೊಳ್ಳುತ್ತಾ, ಏನೇ ಆಗಲಿ ಈದಿವಸ ವಸನಮಾಡುವಾಗ ದೊರೆಯನ್ನು ಕೊಲ್ಲುವುದೇ ಸರಿ ಎಂದು ಯೋಚಿಸಿಕೊಂಡು, ದೊರೆಯ ಮುಂದಕ್ಕೆ ಹೋದನು. ಅಲ್ಲಿ ತನಗೆ ಅಭಿಮುಖವಾಗಿದ್ದ ಗೋಡೆಯ ಮೇಲೆ ನೀನು ಮಾಡತಕ್ಕ ಕೆಲಸಗಳ ಪರಿಣಾಮಫಲಗಳನ್ನು ಚೆನ್ನಾಗಿ ತಿಳಿದುಕೊಳ್ಳದೆ ಯಾವ ಕೆಲಸವನ್ನೂ ಮಾಡಬೇಡ,' ಎಂದು ಬರೆದಿದ್ದ ಲೇಖನವನ್ನು ಓದಿಕೊಂಡನು. ಕೂಡಲೆ ತಾನು ನೆನೆಸಿದ್ದ ದುಷ್ಕೃತ್ಯದಿಂದ ತನಗಾಗತಕ್ಕೆ ವಿಪತ್ಪರಂಪರೆಗಳು ಮನ ಗೆ ಗೋಚರವಾಗಲು ಅವನಿಗೆ ಕೈಕಾಲುಗಳು ನಡುಗುವದಕ್ಕುಪಕ್ರಮ ವಾಯಿತು. ಯಾವಾಗಲೂ ಇಲ್ಲದ ಈ ನಾಯಿಂದನ ವಿಕಾರಗಳನ್ನು ನೋಡಿದಕೂಡಲೆ ದೊರೆಯು ಅವನನ್ನು ಹಿಡಿದುಕೊಂಡು ಕ್ಷೌರದ ಕತ್ತಿ ಯನ್ನು ಕಿತ್ತುಕೊಂಡು ಅವನು ಹೀಗೆ ಭಯಪಡಲು ಕಾರಣವನ್ನು ವಿಚಾರಿ ಸಿದನು. ಆಗ ಭಯದಿಂದ ನಡುಗುತ್ತಿರುವ ನಾವಿಲನು “ ಮನೆಯನ್ನು ಕಟ್ಟಬಹುದು, ಮನಸ್ಸನ್ನು ಕಟ್ಟಲಾಗದು ” ಎಂದು ಹೇಳುವ ಮಾತು ಸತ್ಯ, ಮಾಡತಕ್ಕದ್ದೇನು, ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು, ನಡೆದ ವೃತ್ತಾಂತವನ್ನೆಲ್ಲಾ ದೊರೆಗೆ ಅರಿಕೆಮಾಡಿ, ದ್ರವ್ಯದ ಆಸೆಯಿಂದುಂಟಾದ ಅಪರಾಧವನ್ನು ಕ್ಷಮಿಸಬೇಕೆಂದು ಅಡ್ಡಬಿದ್ದನು. ದೊರೆಯು ತಾನು ಹಿಂದೆ ಹಿತೋಪದೇಶಕ್ಕೋಸ್ಕರ ಮಹಾತ್ಮನಿಗೆ ಕೊಟ್ಟ ಕೋತಿದ್ರವ್ಯವು ಶತಗುಣ