ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭ WV ಮನೆಗೆ ಬಂದಿದ್ದನೆಂದು ತಿಳಿದು, ಒಡನೆಯೇ ಬಂದು ಇವನ ಮನೆಯನ್ನು ಶೋಧಿಸಿ, ಈ ವರಕನು ಸಂಪಾದಿಸಿಕೊಂಡಿದ್ದ ಅಲ್ಪ ಸ್ವಲ್ಪ ದ್ರವ್ಯವ ನ್ನೆಲ್ಲ ತೆಗೆದುಕೊಂಡು ಹೊರಟುಹೋದನು, ೧v೧೫ ನೇ ಇಸವಿಯಲ್ಲಿ ವಾರ್ಟ ಎಂಬ ಸ್ಥಳದಲ್ಲಿ ನಡೆದ ಯುದ್ದದಲ್ಲಿ ನೆಪೋಲಿರ್ಯ ಎಂಬವನು ಸೋತು ರಾಜ್ಯಭ೦ಶವನ್ನು ಹೊಂದಿದಮೇಲೆ ಈ ರಾತ್ಚೆಂಬ ವರ ಕನು ಆ ಪೆಟ್ಟಿಗೆಯನ್ನು ತೆಗೆದು ಅದರಲ್ಲಿದ್ದ ದ್ರವ್ಯವನ್ನೂ ಜವಾಹಿರಿ ಗಳನ್ನೂ ಮೂಲಧನವಾಗಿಟ್ಟುಕೊಂಡು ವ್ಯಾಪಾರವುಡು ವುದಕ್ಕಸಕ್ಕೆ ಮಿಸಿದನು. ನಾಲೈದು ವರ್ಷಗಳೊಳಗಾಗಿ ಬಂಡವಾಳವಾಗಿಟ್ಟುಕೊಂ ಡಿದ್ದ ಕೋಟ್ಯಂತದ್ರವ್ಯವು ಅವನ ಶಕ್ತಿಯಿಂದ ಬಹಳವಾಗಿ ಹೆಜ್ಜೆತು. ಇದಕ್ಕೆಲ್ಲಾ ಕ್ರಮವಾಗಿ ಲೆಕ್ಕವನ್ನಿಟ್ಟು ತನ್ನ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ತಗೆದುಕೊಳ್ಳುತಿದ್ದನು. ಆಮೆಲೆ ಚಕ್ರವರ್ತಿಯು ರಾಜಧಾನಿಗೆ ಬಂದು ರಾಕ್ಸ್ಟೈಲೈಂಬ ವರಕನ ಮನೆಗೆ ಹೇಳಿ ಕಳುಹಿಸಲು, ಆ ವರಕನು ನಾಮವಿದ್ದರೂ ನಂಬಿಕೆಯಿರಬೇಕು ' ಎಂಬಂತೆ ತಾನು ಮೊದಲಿನಿಂದ ಕ್ರಮವಾಗಿಟ್ಟಿದ್ದ ಲೆಕ್ಕವನ್ನೂ ಅದುವರೆಗೆ ವೃದ್ಧಿಮಾಡಿರ ತಕ್ಕೆ ಧನವನ್ನೂ ತೆಗೆದುಕೊಂಡು ಹೋಗಿ ಒಪ್ಪಿಸಿ, ನೆಪೋಲಿಯನನು ತನ್ನಿಂದ ತೆಗೆದುಕೊಂಡ ಹೋದ ದ್ರವ್ಯವನ್ನು ಮಟ್ಟಿಗೆ ತನಗೆ ಮೂಲಧನ ವಾಗಿ ಕೊಡಿಸಿದರೆ ಸಾಕೆಂದ. ಚಕ್ರವರ್ತಿಯಲ್ಲಿ ಅರಿಕೆಮಾಡಿಕೊಂಡನು. ಆ ಚಕ್ರವರ್ತಿಯು ಇವನ ಸತ್ಯವನ್ನು ನೋಡಿ ಆಶ್ಚಯ್ಯಪಟ್ಟು ಅವನು ವೃದ್ಧಿ ಮಾಡಿದ ಧನವನ್ನೆಲ್ಲಾ ಅವನಿಗೆ ಕೊಟ್ಟು ತಾನು ಕೊಟ್ಟಿದ್ದಷ್ಟನ್ನು ಮಾತ್ರ ತಾನು ತೆಗೆದುಕೊಂಡದ್ದಲ್ಲದೆ, ಯುರೋಪ್ ಖಂಡದಲ್ಲಿರತಕ್ಕೆ ಎಲ್ಲಾ ರಾಜರಿಗೂ ವರಕರಿಗೂ ಈ ವರಕನ ಸತ್ಯಸಂಧತ್ವವನ್ನು ಅತ್ಯಂತ ಅಭಿಮಾನದಿಂದ ತಿಳಿಸಿದನು. ಆಮೇಲೆ ಈ ವರಕನ ವ್ಯಾಪಾರವು ದಿನದಿ ನಕ್ಕೆ ವಿಶೇಷವೃದ್ಧಿಗೆ ಬಂದಿತು. ಈಗಲೂ ಈ ವರಕನ ಸಂತತಿಯವರು