ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ ಬುದ್ದಿಯು ಮಗನಿಗೂ ಸೊಸೆಗೂ ಶಿಷ್ಯರಿಗೂ ಚಾಕರರಿಗೂ ಹುಟ್ಟಿಯೇ ಹುಟ್ಟುವುದು. ಒಂದುವೇಳ ಯತ್ನವಿಲ್ಲದೆ ಅವರು ಅದನ್ನು ಮಾಡಿದರೂ ಅಸಮಾಧಾನದಿಂದ ಗೊಣಗುಟ್ಟುತ್ತಾ ಕಾಟಕ್ಕಾಗಿ ಮಾಡುವರಂತೆ ಮಾಡುವರು. ಇದಲ್ಲದೆ ಒಂದೊಂದು ಸಂದರ್ಭದಲ್ಲಿ ಪರಿಚಯವಿಲ್ಲದವರಿಗಾ ದರೂ ಮಯ್ಯಾದೆಯಿಂದ ಯಾವುದಾದರೂ ಒಂದು ಕೆಲಸವನ್ನು ಹೇಳಿದರೆ ಅವರು ಕೂಡ ಅದನ್ನು ನೆರವೇರಿಸುವರು. ಆದುದರಿಂದಲೇ * ಉಪಚಾರ ಕೊಟಟಳುವುದು ” ಎಂಬ ಗಾದೆಯು ರೂಢಿಯಲ್ಲಿದೆ ಎಲ್ಲಾ ವೃತ್ತಿಗೆ ಳಲ್ಲಿಯೂ ಯಾರು ವಿಶೇಷ ಉನ್ನತಸ್ಥಿತಿಗೆ ಬಂದಿರುವರೋ ಅವರನ್ನು ಪರೀ ಕ್ಷಿಸಿ ನೋಡಿದರೆ ಅವರು ಹಾಗೆ ಉನ್ನತಸ್ಥಿತಿಗೆ ಬರುವುದಕ್ಕೆ ಒದಗಿದ ಅನೇಕ ಕಾರಣಗಳಲ್ಲಿ ಮತ್ಯಾದೆಯ ನಡವಳಿಕೆಯೂ ಒಂದಾಗಿರುತ್ತದೆ. ಮರಾದೆಯಿಂದ ನಡೆದುಕೊಳ್ಳತಕ್ಕವರನ್ನು ಎಲ್ಲರೂ ಪುರಸ್ಕರಿಸುತ್ತಾರೆ. ಇತರರಿಗೆ ಬಹಳ ಧನವ್ಯಯದಿಂದ ಆಗತಕ್ಕ ಕೆಲಸಗಳಲ್ಲಿ ಅನೇಕವನ್ನು ಇವರು ಮಯ್ಯಾದೆಗಳಿಂದ ಸಾಧಿಸುತ್ತಾರೆಆದುದರಿಂದ ಎಲ್ಲರೂ ಗರ್ವ ದಿಂದ ಪ್ರತಿನಿವಿಷ್ಟರಾಗದೆ ಕಾಲಕಾಲ ತಾರತಮ್ಯ ಸಂದರ್ಭಗಳನ್ನರಿತು ಮತ್ಯಾದೆಯಿಂದ ನಡೆದುಕೊಳ್ಳುವುದನ್ನು ಕಲಿತುಕೊಂಡು ನಡೆಯುವುದು ಅಭಿವೃದ್ಧಿಗೆ ಸಾಧಕವಾದದ್ದು Gouse. ಲೋಕವ್ಯವಹಾರ. ಅಧೀತತ್ವಶಾಸ್ಕೋಪಿ ಯೋ ನ ಜಾನಾತಿ ಯುಕ್ತಿತಃ | ಲೌಕಿರ್ಕಾ ವಿಷರ್ಯಾ ಸರ್ಲ್ವಾ ಸ ಕ್ರಿಯಾ ಹೀಯತೇ ಧ್ರುವಂ || ಲೋಕದಲ್ಲಿ ನಡೆಯತಕ್ಕ ವ್ಯಾವಹಾರಿಕ ವಿಷಯಗಳಿಗೆ ಸಂಬಂಧ ಪಟ್ಟ ವರಮಾನಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾದದ್ದು. ಪ್ರತಿ