ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

విద్య ವಿದ್ಯಾ ನಾಮ ನರಸ್ಯ ರೂಪಮಧಿಕಂ ಪ್ರಚ್ಛನ್ನ ಗುಪ್ತಂ ಧನಂ ವಿದ್ಯಾ ಭೋಗಕರೀ ಯಶಸ್ಸು ಖಕರೀ ವಿದ್ಯಾ ಗುರೂಣಾಂ ಗುರುಃ | ವಿದ್ಯಾ ಬಂಧುಜನೋ ವಿದೇಶಗಮನೇ ವಿದ್ಯಾ ಪರಾ ದೇವತಾ ವಿದ್ಯಾ ರಾಜಸು ಪೂಜ್ಯತೇ ನ ಹಿ ಧನಂ ವಿದ್ಯಾವಿಹೀನಃ ಪಶುಃ || ವಿದ್ಯೆಯು ತಿಳಿವಳಿಕೆಯುಂಟಾಗುವುದಕ್ಕೆ ಸಾಧಕವಾದದ್ದು. ಇದು ಅಭ್ಯಾಸಾನುಸಾರವಾಗಿ ಸ್ವಾಧೀನಕ್ಕೆ ಬರತಕ್ಕದ್ದಾಗಿದೆ. ವಿದ್ಯೆಯು ಜನರಿಗೆ ದೇವತೆಯಾಗಿಯ ವಿಶೇಷಂದ ದಾ -ಕವಾಗಿಯೂ, ಸಕಲ ಭೋಗಗ ಳಿಗೂ ಸಾಧಕವಾಗಿಯ, ಯಶಸ್ಸನ. ಸುಖವನ್ನೂ ಕೊಡತಕ್ಕುದಾಗಿ ಯ, ಗುರುವಿಗೆ ಗುರುವಾಗಿದೆ, ದೇಶಾಂತರಗಳಲ್ಲಿ ಬಂಧುವಾಗಿಯ, ರಾಜರುಗಳಲ್ಲಿ ಧನಕ್ಕಿಂತಿ: ಪೂಜ್ಯವಾಗಿಯೇ ಇರುವುದು. ಇದಲ್ಲದೆ ದುಃಖಕಾಲದಲ್ಲಿ ವೈರಾಗ್ಯಪ್ರದವಾದ ಗ್ರಂಥಗಳ ಅವಲೋಕನದಿಂದ ದುಃಖ ಗಳನ್ನು ಮರೆಯುವುದಕ್ಕೂ, ಸಂತೋಷಕಾಲಗಳಲ್ಲಿ ಉತ್ಸಾಹವನ್ನು ವಿಶೇಷ ವಾಗಿ ವೃದ್ಧಿ ಮಾಡುವುದಕ್ಕೆ ಸಾಧಕಗಳಾದ ಗ್ರಂಥಗಳ ಅವಲೋಕನದಿಂದ ಆನಂದವನ್ನು ವೃದ್ಧಿಮಾಡಿಕೊಳ್ಳುವುದಕ್ಕೆ ಸಾಧಕವಾಗಿರುವುದು. ಆದುದ ರಿಂದಲೇ ವಿದ್ಯಾವಿಹೀನನಾದವನು ಪಶುವಿಗೆ ಸಮಾನನೆಂದು ಹೇಳಲ್ಪಡುವನು. ವಿದ್ಯೆಯು ಅನೇಕ ಶಾಖೆಗಳುಳ್ಳದಾಗಿರುವುದು. ಅವುಗಳಲ್ಲೆಲ್ಲಾ ಓದುವುದು, ಬರೆಯುವುದು, ಲೆಕ್ಕ ಮಾಡುವುದು ಇವು ಮುಖ್ಯವಾದ ಭಾಗ ಗಳಾಗಿರುವುವು. ಎಲ್ಲಾ ಲೌಕಿಕ ವೈದಿಕ ವ್ಯಾಪಾರಗಳಲ್ಲಿಯೂ ಇವುಗಳ ಆವಶ್ಯಕತೆಯು ಬಹಳವಾಗಿರುವುದು, ಓದು ಬರಹ ಲೆಕ್ಕಗಳು ಎಲ್ಲಾ ವಿದ್ಯೆಗಳಲ್ಲಿಯೂ ಪ್ರವೇಶದಾಯಕಗಳಾಗಿಯೂ ಎಲ್ಲಾ ವೃತ್ತಿಗಳಲ್ಲಿಯ ಫಲದಾಯಕಗಳಾಗಿಯೂ ಆಗುವುವು. ಇವುಗಳಲ್ಲಿ ಪ್ರವೇಶವಿಲ್ಲದವರು