ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ್ನಾನನಿರ್ಣಯ ವಿಶೇಷವಾಗಿ ಗಿರಾಕಿಯಿರುವುದಿಲ್ಲವೋ ಅಲ್ಲಿ ಆ ಉದ್ಯೋಗಿಗೆ ಹೆಚ್ಚಾಗಿ ಲಾಭ ಬರುವುದಿಲ್ಲ. ವಿಶೇಷವಾಗಿ ಜನಗಳು ಬಂದು ಇಳಿಯತಕ್ಕ ರೈಲು ಸ್ಟೇಷನ್ನುಗಳಲ್ಲಿ ಯ ಬಹುಜನ ಭರಿತವಾದ ದೊಡ್ಡ ಪಟ್ಟಣಗಳಲ್ಲಿಯ ಫಲಾಹಾರದ ಸಾಮಾನುಗಳನ್ನು ಇಟ್ಟುಕೊಂಡಿರತಕ್ಕವರೂ ಅನ್ನ ಹಾಕ ತಕ್ಕ ಹೋಟೇಲಿನ ಯಜಮಾನರೂ ಬಹು ದ್ರವ್ಯವನ್ನು ಸಂಪಾದಿಸುತ್ತಾರೆ. ಅಂಥ ಹೊಟೇಲುಗಳನ್ನು ಗ್ರಾಮಾಂತರಗಳಲ್ಲಿಟ್ಟರೆ ಅಲ್ಲಿ ಅವುಗಳನ್ನು ಇಟ್ಟವನ ಬಂಡವಾಳಕೂಡ ಏಳುವುದಿಲ್ಲ. ಭರತಖಂಡದವನೊಬ್ಬನು ಯುರೋಪ್ ಖಂಡಕ್ಕೆ ಹೋಗಿ ಗೊಡ್ಡು ಸಾರುಮಾಡಿ ಮಾರಿ ಲಕ್ಷಾಂತರ ದ್ರವ್ಯವನ್ನು ಸಂಪಾದಿಸಿದನು. ಅವನು ಅದೇರೀತಿಯಲ್ಲಿ ಈ ದೇಶದಲ್ಲಿ ನಡ ಸಿದ್ದರೆ ಅವನಿಗೆ ಒಂದು ಕಾಸೂ ಹುಟ್ಟುತ್ತಿರಲಿಲ್ಲ. ಅರಬ್ಬಿ ದೇಶದವರು ಮೊದಲು ಈ ದೇಶದಿಂದ ಬಗೆ ಬಗೆಯ ಹಣ್ಣು ಹಂಪಲುಗಳನ್ನೂ ಸಂಬಾ ರದ ಸಾಮಾನುಗಳನ್ನೂ ಯೂರೋಪ್ ಖಂಡಕ್ಕೆ ತಗೆದುಕೊಂಡು ಹೋಗಿ ವಿಕ್ರಯಿಸಿ ಕುಬೇರರಾದರು. ಅವರು ಅದೇ ಸಾಮಾನುಗಳನ್ನು ಈ ದೇಹ ದಲ್ಲಿಯೇ ವಿಕ್ರಯಿಸಿದ್ದರೆ ಅಷ್ಟು ಹಣಗಾರರಾಗುತ್ತಿರಲಿಲ್ಲ. ಆದುದರಿಂದ ಯಾವಯಾವ ಉದ್ಯೋಗದಿಂದ ನಿರಾಣಮಾಡಲ್ಪಟ್ಟ ಪದಾರ್ಥಗಳಿಗೆ ಎಲ್ಲೆಲ್ಲಿ ವಿಶೇಷವಾಗಿ ಗಿರಾಕಿಯಿರುವುದೋ ಅದನ್ನು ಮೊದಲು ಗೊತ್ತು ಮಾಡಿಕೊಂಡು ಆ ಸ್ಥಳಗಳಿಗೆ ಆ ಪದಾರ್ಥಗಳನ್ನು ಕಳುಹಿಸುವುದು ಲಾಭಕ್ಕೆ ಸಾಧಕವಾದದ್ದು. ಆಂಗ್ಲೀಯರು ಈ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದರಿಂದಲೇ ಅಧಿಕವಾದ ಉಪಪತ್ತಿಯನ್ನು ಹೊಂದಿ ಸೌಖ್ಯಪಡುತಲಿದ್ದಾರೆ. ಅವರ ದೇಶ ದಲ್ಲಿ ವ್ಯಾಪಾರದಿಂದಲೂ ಬಗೆಬಗೆಯ ವೃತ್ತಿಗಳಿಂದಲೂ ಬಹುಜನರು ಜೀವಿ ಸುತ್ತಲಿದ್ದಾರೆ. ಅವರಲ್ಲಿ ವಿಶೇಷ ಅಕ್ಷರವಂತರಾದವರು ಕೂಡ ಕೆಲವರಿ ದ್ದಾರೆ. ಕೆಲವುಜನ ವರ್ತಕರು ಲಾಭವನ್ನು ವಾರಗಟ್ಟಲೆ ಎನಿಸುತ್ತಾರೆ.