ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ಅರ್ಧಸಾಧನ momammamanan ವರಿಗೆ ಕೊಡುವುದರಲ್ಲಿ ಕೈ ಹಿಡಿದುಕೊಟ್ಟರೆ ಮಿತವ್ಯಯವೆಂದು ತಿಳಿದು ಕೊಂಡಿರುವರು. ಇನ್ನು ಕೆಲವರು ಕಾರ್ಪಣ್ಯದಿಂದ ಜೀವಿಸುವುದೇ ಮಿತ ವ್ಯಯವೆಂದು ಭಾವಿಸಿರುವರು. ಇದೊಂದೂ ಸರಿಯಲ್ಲ. ಮಿತವ್ಯಯವೆಂದರೆ ಆವಶ್ಯಕವಾದ ಸಂಗತಿಗಳಲ್ಲಿ ಕಡಿಮೆ ಮಾಡುವುದಲ್ಲ, ಕೆಲಸಮಾಡತಕ್ಕ ವರಿಗೆ ಅವರ ಕಷ್ಟಕ್ಕೆ ತಕ್ಕ ಹಾಗೆ ಸಾವಕಾಶಮಾಡದೆ ಕೃಪವಾದ ಕಾಲ ಗಳಲ್ಲಿ ಸಂಬಳ ಮೊದಲಾದುವುಗಳನ್ನು ಕೊಡುತ್ತ ಬಂದಹೊರತು ಅವರು ಮನಃಪೂರಕವಾಗಿ ಕೆಲಸಮಾಡುವುದಿಲ್ಲ. ಅದರಿಂದ ಯಜಮಾನನಿಗೆ ನಷ್ಟವೇ ಹೊರತು ಆದಾಯವಾಗುವುದಿಲ್ಲ ಗೃಹಕೃತ್ಯದಲ್ಲಿ ಮಿತವಾಗಿ ವ್ಯಯಮಾಡಬೇಕೆಂಬ ತಾತ್ಸಲ್ಯವುಳ್ಳವರು ವೆಚ್ಚವಾಗತಕ್ಕವುಗಳನ್ನೆಲ್ಲಾ ಒಂದು ಪಟ್ಟಿಯಲ್ಲಿ ಬರೆದುಕೊಂಡು ಗೃಹಕೃತ್ಯದಲ್ಲಿರತಕ್ಕವರೆಲ್ಲರೂ ಅನ್ನ ವಸ್ತ್ರಗಳಿಗೆ ನ್ಯೂನತೆಯಿಲ್ಲದಂತೆ ಸೌಖ್ಯವಾಗಿರುವುದಕ್ಕೆ ಯಾವವು ಆವ ಶ್ಯಕವಾದುವುಗಳು ಯಾವುವು ಅನಾವಶ್ಯಕವಾದುವುಗಳು ಎಂಬುದನ್ನು ಮೊದಲೇ ನಿಷ್ಕರ್ಷೆ ಮಾಡಿಕೊಳ್ಳಬೇಕು. ದೇಹದಾರ್ಡ್ಯಕ್ಯಾವಶ್ಯಕವಾದುವು ಗಳಲ್ಲಿ ನ್ಯೂನತೆಯನ್ನು ಮಾಡಿಕೊಳ್ಳುವುದು ವಿತವ್ಯಯಕ್ಕೆ ಸೇರುವು ದಿಲ್ಲ ಇದು ಮಿತವ್ಯಯ ಇದು ಅಮಿತವ್ಯಯ ಎಂಬ ಅಂಶಗಳನ್ನು ವಿಚಾರ ಮಾಡುತಹೊದರೆ ಪಾಯೇಣ ಅದು ಎಲ್ಲರಿಗೂ ಗೊತ್ತಾಗಿಯೇ ಆಗು ವುದು.ಜನರು ಇದನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅತ್ಯಾವಶ್ಯಕ ವಾದುದು.