ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಲ. ಗುಣಾದ್ಭವೇದ್ದರ್ಮಹಾನಿಃ ಋಣಾದರ್ಥಶ್ಚ ಹೀಯತೇ | ತಥಾ ಕಾಮಶ್ಚ ಮೋಕ್ಷ್ಮಶ್ಚ ತಸ್ಮಾನ್ನ ಋಣರ್ವಾ ಭವೇತ್ || ಸಾಲವು ಬಹಳ ಅನರ್ಥಕಾರಿಯಾದದ್ದು. ಸಾಲಮಾಡುವಾಗ ಬಾಯಿಮಾತಿನಿಂದಾಗಲಿ ಒಡವೆ ವಸ್ತುಗಳನ್ನು ಒತ್ತೆಯಿಟ್ಟಾಗಲಿ ಗ್ರಾಮ ಭೂಮಿ ಮನೆ ಮೊದಲಾದುವುಗಳನ್ನು ಆಧಾರವಾಡಿಯಾಗಲಿ ಸಂತೆಗೆದು ಕೊಳ್ಳುವುದುಂಟು. ಯಾವ ವಿಧವಾಗಿಯಾದರೂ ಸಾಲಮಾಡುವಾಗ ಗಡು ವಿಗೆ ಸರಿದೂಗಿ ಹೇಗಾದರೂ ತೀರಿಸುತ್ತೇನೆಂಬ ಉತ್ಸಾಹವು ವಿಶೇಷವಾ ಗಿರುವುದು. ಆದರೆ ಅದರಂತೆ ನಡೆಯುವುದಕ್ಕೆ ಅನೇಕವಾಗಿ ಅನಿವಾಯ್ಯ ಗಳು ಪ್ರಾಪ್ತವಾಗುವುದರಿಂದ ಸಾಲ ತೆಗೆದುಕೊಂಡವನು ತಾನು ಆಡಿದಂತೆ ನಡೆದು ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟ. ವಿಶೇಷವಾಗಿ ಆಯತ್ರಿ ಯುಳ್ಳವರು ಸಾಲಗಾರರಾಗುವುದಿಲ್ಲವೆಂದೂ, ಬಡಬಗ್ಗರೇ ಸಾಲಗಾರ ರಾಗುವರೆಂದೂ ತಿಳಿಯಕೂಡದು. ತಮ್ಮ ಯೋಗ್ಯತೆಗೆ ಅನುರೂಪವಾಗಿ, ನಡೆಯದೆ ಮಿತಿಮೀರಿ ವೆಚ್ಚ ಮಾಡುವುದಕ್ಕುಪಕ್ರಮಿಸಿದವರೆಲ್ಲರೂ 'ಸಾಲ ಮಾಡುವುದಕ್ಕೆ ಹೊರಡುವರು. ಸಾಲಮಾಡುವುದಕ್ಕೆ ಅನೇಕ ಆಾರಣಗಳುಂಟು, ಕುಟುಂಬರಕ್ಷಣೆ ಗೋಸ್ಕರ ಆರ್ಣಿಸುತ್ತಿದ್ದವನು ಕಾಲಾಧೀನನಾದಾಗಲೂ ಪ್ರಬಲವಾದ ಕ್ಷಾಮವಾಸ್ತವಾದಾಗಲೂ ಸಾಲಮಾಡಬೇಕಾಗಿ ಬರುವುದು, ಇವುಗಳು ವಿಧಿಯಿಲ್ಲದೆ ಮಾಡಬೇಕಾದ ಸಾಲಗಳು, ಆದರೆ ಅನೇಕರು ಇತರರಿಗೆ ಹೊಣೆಗಾರರಾಗುವುದರಿಂದಲೂ, ಜೂಜಾಡುವುದರಿಂದಲೂ, ಅಗಮಾಗಮನ ಅಪೇಯಪಾನಗಳನ್ನು ಮಾಡುವುದರಿಂದಲೂ, ಶುಭಾಶುಭ ಕಕ್ಕಿಗಳಲ್ಲಿ: ಮಿತಿಮೀರಿ ವ್ಯಯಮಾಡುವುದರಿಂದಲೂ ಸಾಲಗಾರರಾಗುವರು' ಇವು?