ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೬ ಅರ್ಧಸಾಧನ ಹಾಕಿದ ಬಟ್ಟೆಯನ್ನು ಉಪಾಯವಾಗಿ ಬಿಡಿಸಿಕೊಳ್ಳುವಹಾಗೆ ಸಾಲಕೊಟ್ಟ ವನು ತನ್ನ ಹಣವನ್ನು ಬಹಳ ಉಪಾಯದಿಂದ ಬರಮಾಡಿಕೊಳ್ಳಬೇಕು. ಸಾಲ ತೆಗೆದುಕೊಂಡಿರತಕ್ಕವನು ಆಸ್ತಿವಂತನಾಗಿಯೂ ಮಾನಿಷ್ಠನಾಗಿಯ ಇದ್ದರೆ ಖಂಡಿತೋಕ್ತಿಗಳಿಂದ ಹಣವನ್ನು ಬರಮಾಡಿಕೊಳ್ಳಬಹುದು. ಅವನು ಆಸ್ತಿಯಿಲ್ಲದವನಾಗಿಯೂ ತಾನು ಮಾಡತಕ್ಕ ಅರ್ಜನಿಯಿಂದಲೇ ಸಾಲ ತೀರಿಸಬೇಕಾದವನಾಗಿಯ ಅನುಪಸನ್ನನಾಗಿಯೇ ಇದ್ದರೆ ಅಂಥವ ನಿಂದ ಸಾಲವನ್ನು ಬರಮಾಡಿಕೊಳ್ಳುವುದರಲ್ಲಿ ಸಾಮ ದಾನಗಳನ್ನೇ ತೋರಿಸಬೇಕು. ದುಡುಕಿ ಕೋರ್ಟಿಗೆ ಎಳೆದು ಜಪ್ತಿ ಹರಾಜು ಸಿವಿಲ್ ಜೈಲ್ ವಗೈರೆಗಳನ್ನು ಮಾಡಿಸಿ ಅಸಮಾನಮಾಡಿದ ಪಕ್ಷದಲ್ಲಿ ಇದಕ್ಕೆ ಸ್ಕರ ವೆಚ್ಚ ಮಾಡಿದ ಹಣವೆಲ್ಲವೂ ಹೀಗೆ ದುಡುಕಿನಡೆದುದಕ್ಕೆ ಕೊಟ್ಟ ಜುಲ್ಮಾನೆಯಂತೆ ಪರಿಣಮಿಸುವುದು. ಕೋರ್ಟಿಗೆ ಎಳೆಯಲ್ಪಟ್ಟವನು ತಾನು ಹೊಂದಿದ ಅಪಮಾನಗಳಿಂದಲೂ ಹಿಂಸೆಯಿಂದ ಭಂಡನಾಗಿ “ ಮಾನ ವಂತು ಹೋಯಿತು, ಇನ್ನು ಏನುಬೇಕಾದರೂ ಮಾಡಿಕೊಳ್ಳಲಿ, ಇವರಿಗೆ ತಕ್ಕೆ ಪ್ರತೀಕಾರ ಮಾಡುತ್ತೇನೆ, ” ಎಂದು ಪ್ರತಿಜ್ಞೆ ಮಾಡಿ, ಸಾಲ ಕೊಟ್ಟ ವನಿಗೆ ಅಸಲಿಗೂ ಲೋಪವಾಗುವಂತೆ ಮಾಡುವನು. ಆದುದರಿಂದ ಸಾಲ ಕೊಟ್ಟವನೂ ತೆಗೆದುಕೊಂಡವನೂ ಪರಸ್ಪರ ದ್ವೇಷಿಗಳಾಗದೆ ಕ್ಷೇಮ ಚಿಂತಕರಾಗುವುದು ಉಭ ಬರಿಗೂ ಒಳ್ಳೆಯದು. ವೃತ್ತಿಗಳ ಘನತೆ. ಜೀವನಾರ್ಥಿ ಪುರ್ವ ಲೋಕ: ಯಾಂ ವೃತ್ತಿಮವಲಮೃತೇ | ತತ್ರ ಸಾಧು ಪ್ರಮಂ ಕುರಾತ್ ಅನ್ಯಥಾ ಹೀಯತೇ ಧ್ರುವಂ || ಲೋಕದಲ್ಲಿ ಪರಿಚಾರಿಕೆ ಝಾಡಮಾಲಿ ಮೊದಲುಗೊಂಡು ದೊಡ್ಡ ದೊಡ್ಡ ಅಧಿಕಾರಗಳವರೆಗೂ ಜೀವನೋಪಾಯವನ್ನುಂಟುಮಾಡತಕ್ಕೆ