ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಂಗ್ಲೀಪರಮೇಲೆ ಯುದ್ಧ ಮಾಡಿದನು, ಆ ಯುದ್ಧದಲ್ಲಿ ಇಂಗ್ಲೀಷರು ಸಂಪೂರ್ಣವಾಗಿ ಪರಾಜಿತರಾಗಿ ಸಾಂಡಿನಿಂದ ಓಡಿಹೋದರು. ಈಗಲೂ ಸ್ಕಾಟ್ಲಂಡ್ ನಿವಾಸಿಗಳು ಜಾಡಹುಳವು ತಮ್ಮ ದೇಶಕ್ಕೆ ಜಯವನ್ನು ಕಲ್ಪಿ ನಿದ ಪ್ರಾಣಿಯೆಂದು ಭಾವಿಸಿ ಅದನ್ನು ವಿಶೇಷ ದಯೆಯಿಂದ ಕಾಣುತ್ತಾರೆ. ಹೀಗೆ ಇಷ್ಟಾರ್ಥಪ್ರಾಪ್ತಿಯಲ್ಲಿ ಆಸಕ್ತಿಯುಳ್ಳವರು ತಾವು ಮಾಡತಕ್ಕ ಪ್ರಯತ್ನಗಳಲ್ಲಿ ಒಂದುವೇಳೆ ಪರಾಜಿತರಾದರೂ ಅದಕ್ಕೆ ಹಿಂಜರಿಯದೆ ಫಲಪ್ರಾಪ್ತಿಯಾಗುವವರೆಗೂ ಪನಃಪುನಃ ಪ್ರಯತ್ನಮಾಡಿ ಇಷ್ಟಾರ್ಥವನ್ನು ಸಾಧಿಸಿಕೊಳ್ಳಬೇಕು. ಕಾಲ. ನ ನಿವರಯಿತುಂ ಶಕ್ಕಾ ಪ್ರವಹ ನದೀ ಯದಾ | ತದ್ವತ್ ಕಾಲೋಪತಿಕ್ರಾಂತಃ ತನ್ನ ಕಾಲಂ ಕ್ಷಿಪೇಢಾ || ಲೋಕದಲ್ಲಿ ಎಂತಹ ವಸ್ತುವನ್ನು ಕಳೆದುಕೊಂಡರೂ ಮತ್ತೆ ಅದ ರಂತಹುದನ್ನೇ ಆಗಲಿ ಅಥವಾ ಅದಕ್ಕಿಂತಲೂ ಅಧಿಕವಾದುದನ್ನೇ ಆಗಲಿ ಸಂಪಾದಿಸಬಹುದು. ಕಾಲವನ್ನು ಕಳೆದುಕೊಂಡಮೇಲೆ ಅದನ್ನು ಪುನಃ ಸಂಪಾದಿಸುವುದಕ್ಕೆ ಆಗುವುದಿಲ್ಲ ಆದುದರಿಂದ ಕಾಲಕ್ಕಿಂತ ಹೆಚ್ಚಾದುದು ಯಾವುದೂ ಅಲ್ಲ. ಕಾಲದ ಬೆಲೆಯು ಅಭಿವೃದ್ಧಿ ಸಾಧಕಗಳಾದ ಕೆಲಸಗ ಳನ್ನು ಮಾಡುವವರಿಗೆ ತಿಳಿಯುವಹಾಗೆ ಇತರರಿಗೆ ಗೊತ್ತಾಗುವುದಿಲ್ಲ. ಬಾಲ್ಯದಿಂದಲೂ ಕಾಲವನ್ನು ವ್ಯರ್ಥವಾಗಿ ಕಳೆಯದೆ ಪೂರಾಪರ್ರತೆಗೆ ಬೀಜಭೂತಗಳಾದ ವಿದ್ಯಾ ವ್ಯಾಸಂಗಗಳಲ್ಲಿಯೂ, ಗೌರವವಾಗಿ ಜೀವಿಸುವು ದಕ್ಕೆ ಸಾಧಕಗಳಾದ ವೃತ್ತಿಗಳ ಮರಗಳನ್ನು ತಿಳಿದುಕೊಳ್ಳುವುದರಲ್ಲಿಯ, ಅರೋಗ ದೃಢಕಾಯರಾಗಿರುವುದಕ್ಕೆ ಸಾಧಕಗಳಾದ ವ್ಯಾಯಾಮಗಳನ್ನು ಮಾಡುವುದರಲ್ಲಿಯೂ ಕಾಲವನ್ನು ವಿನಿಯೋಗಿಸತಕ್ಕವರು ಅದರ ಫಲ