ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅನುವಾದಕನ ಎರಡು ಮಾತುಗಳು. ಇಂತಹ ಮಹಾಗ್ರಂಥವನ್ನು ಸ್ವತಂತ್ರವಾಗಿ ಬರೆಯುವದು ನನ್ನ ಯೋಗ್ಯತೆಯ ಕೆಲಸವಲ್ಲ. ಆದರೂ ಕನ್ನಡಭಾಷೆಯಲ್ಲಿ ಇತಿಹಾಸದ ಆಭಾಸವುಳ್ಳ ಅಶೋಕಯುಗದ ಕಾದಂಬರಿಗಳು ಕೆಲವು ಮೊದಲೇ ರಚಿತವಾಗಿದ್ದರೂ ಅಶೋಕಯುಗದ ನಿಜವಾದ ಇತಿಹಾನಾಂಶಗಳುಳ್ಳ ಪುಸ್ತಕಗಳು ವಿದ್ವಾಂಸರಾದ ಕನ್ನಡಿಗರಿಂದ ಇನ್ನೂ ಬರೆಯಲ್ಪ ಡದಿರುವದರಿಂದ ಅವರು ಬರೆವವರೆಗಾದರೂ ಇದರಿಂದ ಆ ಕಾಲದ ಇತಿಹಾಸಾಂಶ ಗಳು ಕೇವಲ ಕನ್ನಡಿಗರಿಗೆ ತಿಳಿಯಲೆಂದು ಬಂಗಾಲಿಯ ಒಂದು ಪುಸ್ತಕದ ಆಧಾರ ದಿಂದ ಇದನ್ನು ಬರೆದೆನು. ಮೂಲ ಗ್ರಂಥಕಾರರು ದೊಡ್ಡ ಯೋಗ್ಯತೆಯವರಿರುವದ ರಿಂದ ಅದರ ಭಾಷಾಂತರವು ಹೇಗಿದ್ದರೂ ಇತಿಹಾಸಾಭಿಮಾನಿಗಳ ಆದರಕ್ಕೆ ಪಾತ್ರ ವಾದೀತೆಂದು ನಂಬಿರುವೆನು. ಮೇ ೧೯೧೯. ಧಾರವಾಡ. ಎಮ್, ಸಿ, ಪೂಜಾರ.