ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಅಶೋಕ ಅಥವಾ ಪ್ರಿಯದರ್ಶಿ, V Mv// r / T # + * * * * * * * * * * * - مر مرمری مرمرمرهای نرم و مرمي ದೇಶದಿಂದ ಸಹಸ್ರಾವಧಿ ನರನಾರಿಯರ ಹೃದಯದಲ್ಲಿ ಶಾಂತಿಯನ್ನುಂಟುಮಾಡಿದ್ದನು. ಈ ಮಹಾಶಾಲೆಯ ಸಮೀಪದಲ್ಲಿಯೇ ಬುದ್ದದೇವನ ಚಿಕ್ಕವ್ವನಾದ ( ಮಾತೃಷ್ಟ) ಪ್ರಜಾಪತಿ ಭಿಕ್ಷುಣಿಯ ವಿಹಾರವಿತ್ತು. ಶ್ರಾವಸ್ತಿಯ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿರುವ ಸುಪ್ರಸಿದ್ದವಾದ * ಜೇತವನವಿಹಾರವು ಅನಾಥಪಿಂಡಿಕನ ಕೀರ್ತಿಯನ್ನು ಘೋಷಿಸುತ್ತಿ ರುವದು. ಈ ನಗರದ ಪೂರ್ವದ್ವಾರದ ಎಡಬಲಗಳಲ್ಲಿ ಅಶೋಕನು ಸುಮಾರು ೭೦ ಅಡಿ ಎತ್ತರವಾದ ಕಲ್ಲಿನ ಕಂಬಗಳನ್ನು ನಿಲ್ಲಿಸಿದ್ದನು. ಎಡಗಡೆಯ ಕಂಬದ ಮೇಲ್ಗಡೆ ಯಲ್ಲಿ ಧರ್ಮಚಕ್ರವೂ ಬಲಗಡೆಯ ಕಂಬದ ಮೇಲೆ ವೃಷಭಮೂರ್ತಿಯೂ ಸ್ಥಾಪಿಸಲ್ಪ ಟ್ಟಿದ್ದವು. ಚೀನಪ್ರವಾಸಿಗಳು ಈ ಕಂಬಗಳನ್ನು ಉಲ್ಲೇಖಿಸಿರುವರು. ಕ್ರಿ. ೭ನೆಯ ಶತ ಮಾನದಲ್ಲಿ ಹುಯೆನ್ನಾಂಗನು ಜೇತವನವಿಹಾರದ ಹಾಳಾದ ಭಾಗದೊಳಗೆ ಒಂದು ಇಟ್ಟಿಗೆಯ ಕಟ್ಟಡವನ್ನು ನೋಡಿದ್ದನು. ಅಲ್ಲಿ ಬುದ್ಧದೇವನ ಮೂರ್ತಿಯು ಸ್ಥಾಪಿಸಲ್ಪ ಟ್ಟಿತ್ತು. ಜೇತವನ ವಿಹಾರದಲ್ಲಿ ಬುದ್ದದೇವನು ತನ್ನ ಕೈಯಿಂದಲೇ ಒಬ್ಬ ಬೇನೆ ಬಿದ್ದ ಭಿಕ್ಷುವಿನ ಶುಶ್ರಫೆಮಾಡಿದ್ದನು. ಈ ಪುಣ್ಯಲೀಲೆಯ ಸ್ಮಾರಕವೆಂದು ಈ ವಿಹಾರದ ಈಶಾನ್ಯದಲ್ಲಿ ಒಂದು ಸ್ಕೂಪವು ನಿರ್ಮಿಸಲ್ಪಟ್ಟಿತ್ತು. ಯಾವ ಸ್ಥಳದಲ್ಲಿ ನಾರಿಪುತ್ರನ ಎದುರಿಗೆ ಮೌದ್ದಲ್ಯಪುತ್ರನ ಅಲೌಕಿಕ ಶಕ್ತಿಯು ಕುಂಠಿತವಾಗಿತ್ತೊ ಅಲ್ಲಿ ಒಂದು ಸಣ್ಣ ಸ್ಫೂ ಪವಿತ್ತು. ಈ ಸಣ್ಣ ಸ್ತೂಪದ ಬಳಿಯಲ್ಲಿ ಒಂದು ಬಾವಿಯು ಕಂಡುಬರುತ್ತಿತ್ತು. ಬುದ್ದದೇವನು ಜೇತವನವಿಹಾರದಲ್ಲಿರುವಾಗ ಆತನ ಬಳಕೆಗೆ ಇದೇ ಬಾವಿಯ ನೀರು ಸೇದಲ್ಪಡುತ್ತಿತ್ತೆಂದು ಪ್ರವಾದವುಂಟು, ಅಶೋಕನು ಈ ಬಾವಿಯ ಬಳಿಯಲ್ಲಿ ಒಂದು ಸ್ತೂಪವನ್ನು ಕಟ್ಟಿಸಿದ್ದನು. ಈ ವಿಹಾರದೊಳಗೆ ಹಲವೆಡೆಗಳಲ್ಲಿ ಬುದ್ದದೇವನು ಪಾದ ಚಾರಣ ಮಾಡುತ್ತ ಮಾಡುತ್ತ ಸದ್ಧರ್ಮೋಪದೇಶವನ್ನು ಮಾಡುತ್ತಿದ್ದನು. ಈ ಪವಿತ್ರ ಸ್ಕೃತಿಯನ್ನು ಚಿರನ್ನಾಯಿಯಾಗಿ ಮಾಡಬೇಕೆಂದು ಅಶೋಕನು ಒಂದು ದೊಡ್ಡ ಸ್ತಂಭ ವನ್ನು ನಿಲ್ಲಿಸಿದನು. "ಜೇತವನವಿಹಾರದ ಬಳಿಯಲ್ಲಿ ಒಂದು ದೊಡ್ಡ ಆಳವಾದ ಅಗಳ ತೆಯು ಕಂಡುಬರುವದು. ಈ ಅಗಳತೆಯೊಳಗೆ ಬುದ್ಧ ದ್ವೇಷಿಯಾದ ದೇವದತ್ತನ ಕೊಲೆ ಯಾಯಿತು.... ಇದರ ದಕ್ಷಿಣಕ್ಕಿರುವ ಇನ್ನೊಂದು ಅಗಳತೆಯಲ್ಲಿ ಪಾಪಿಷ್ಠೆಯಾದ ಕೂಕಾಲಿಭಿಕ್ಷುಣಿಯು ಬುದ್ಧನಿಂದೆಯನ್ನು ಮಾಡಿದ ಪಾಪಫಲದಿಂದ ಮೃತ್ಯುಪಥವನ್ನು ಹಿಡಿದಳು. ಈ ಶ್ವಾನಪ್ರಿಯ ರಾಜಕುಮಾರನಾದ ಜೇತಸಿಂಹನ ಹೆಸರಿನಿಂದ ಈ ಉದ್ಯಾನಕ್ಕೆ ಜೇತವನನೆ೦ಬ ಹಸರು ಬಂದಿದೆ, ಅತ್ಯಂತ ಧನಶಾಲಿಯಾದ ಅನಾಥಪಿ೦ಡಿ ಕನೆ೦ಬ ಬುದ್ಧ ಶಿಷ್ಯನು ಈ ವನವನ್ನು ಕೊಂಡು ಭಿಕ್ಷುಸಂಘಕ್ಕೆ ದಾನಮಾಡಿದ್ದನು. ಬುದ್ಧದೇವನು ಇಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನು. ಮತ್ತು ಅವನು ಉಪದೇಶಮಾಡಿದ್ದು ಬಹಳಮಟ್ಟಿಗೆ ಈ ಸ್ಥಳದಲ್ಲಿಯೇ 8 ಬುದ್ಧದ್ವೇಷಿಯಾದ ದೇವದತ್ತನ ಉಪದೇಶದಿಂದ ಕೂ ಕಾಲಿ ಭಿಕ್ಷುಣಿಯು ಬುದ್ದದೇವನ ಆಚರಣೆ ಯಲ್ಲಿ ದೊಡ್ಡ ದೋಷವನ್ನಾ ರೋಪಿಸಿದಳು, ಸ್ವಲ್ಪ ಕಾಲದಲ್ಲಿಯೇ ಅಕಯ ತಂತ್ರವು ಬಯಲಿಗೆ ಬಿತ್ತು. ಆ ಪಾಪದಿಂದ ಅವಳು ಭಯಂಕರ ಯಾತನೆಯನ್ನನುಭವಿಸಿದಳು; ಈ ಮೇರೆಗೆ ಪ್ರವಾದವುಂಟು.