ಅಶೋಕ ಅಥವಾ ಪ್ರಿಯದರ್ಶಿ. - . ಉಪಕ್ರನುಣಕ. ಎರಡುವರೆ ಸಾವಿರ ವರ್ಷಗಳ ಪೂರ್ವದಲ್ಲಿ ಅವತರಿಸಿದ ಒಬ್ಬ ಮಹಾಪುರು ಷನ ಅಲೌಕಿಕವಾದ ಮಹಿಮೆಯಿಂದ ಭರತಖಂಡದ ಪ್ರಾಚೀನ ಇತಿಹಾಸವು ಗೌರವ ವುಳ್ಳ, ಪುಣ್ಯಕರವೂ ಆಗಿರುವದು. ಯಾವನು ಅರಸುಮಗನಾಗಿದ್ದರೂ ವಿರಕ್ತ ನಾಗಿ ಸನ್ಯಾಸವನ್ನು ಸ್ವೀಕರಿಸಿದನೋ, ಯಾವನು ತಾರುಣ್ಯಭರದಲ್ಲಿ ಹೊಸದಾಗಿ ಹುಟ್ಟಿದ ಮಗನನ್ನೂ, ಪ್ರೀತಿಯ ಹೆಂಡತಿಯನ್ನೂ, ರಾಜೈಶ್ವರ್ಯವನ್ನೂ ಬಿಟ್ಟು ಕೊಟ್ಟು ಭಿಕ್ಷಾವೃತ್ತಿಯನ್ನ ವಲಂಬಿಸಿದನೋ, ಯಾವನು ನಾವು ಮುಪ್ಪುಗಳಿಂದ ಬಳ ಲುತ್ತಿರುವ ಸಂಸಾರದಲ್ಲಿ ಶಾಂತಿಮಯ ವೈರಾಗ್ಯವನ್ನು ೦ಟುಮಾಡುವ ನಿರ್ಮಾಣವನ್ನು ಮನೆಮನೆಗೆ ಹೋಗಿ ನಾರಿದನೋ, ಈಗಲೂ ಪೃಥ್ವಿಯ ಮೇಲಿನ ಮೂರರಲ್ಲೊಂದು ಪಾಲು ಜನವು ಯಾವಾತನನ್ನು ಭಕ್ತಿಭಾವದಿಂದ ಪೂಜಿಸುತ್ತಿರುವದೋ ಆ ಪುಣ್ಯ ಕೀರ್ತಿಯಾದ ಗೌತಮಬುದ್ದದೇವನ ಪಾದಸ್ಪರ್ಶದಿಂದ ಧರ್ಮಭೂಮಿಯಾದ ಭಾರತ ವರ್ಷವು ಪುಣ್ಯಕ್ಷೇತ್ರವಾಗಿರುವದು. ವೇದಕಾಲದ ಹಿಂನಾಬಹುಲವಾದ ಧರ್ಮದ ಮೇಲೆ ಔದಾಸೀನ್ಯವು ಹುಟ್ಟಲು ಹಿಂಸೆಯಿಲ್ಲದ ಒಣ ಕರ್ಮಕಾಂಡವು ಯಾವಾಗ ಆರಂಭವಾಯಿತೋ, ಆಗ ಎಲ್ಲ ಮಾನವಸಮಾಜದ ಕಲ್ಯಾಣಕ್ಕೋಸ್ಕರ ಶಾಕ್ ಸಿಂಹನು ನಿಷ್ಕಾಮಕರ್ಮಮೂಲವಾದ ಧರ್ಮವನ್ನು ಪ್ರಸಾರಗೊಳಿಸಿದನು. ಈ ಹೊಸಧರ್ಮದ ಉದಯವಾಗಲು ಭರತ ಖಂಡದ ಪ್ರಾಚೀನ ಧರ್ಮವೂ, ಸಮಾಜವೂ, ಪರಿಸ್ಥಿತಿಯೂ ಸಂಪೂರ್ಣವಾಗಿ ಬದ ಲಾವಣೆಯನ್ನು ಹೊಂದಿದವು, ಈ ಕಾಲಕ್ಕೇ ಇತಿಹಾಸದಲ್ಲಿ ಬೌದ್ದ ಯುಗವೆಂದು ಹೆಸರು, ಬುದ್ದದೇವನು ದೇಹವಿಟ್ಟ ಬಳಿಕ ಸುಮಾರು ಇನ್ನೂರು ವರ್ಷಗಳಾದ ತರು ವಾಯ ಅಶೋಕಮಹಾರಾಜ ಚಕ್ರವರ್ತಿಯು ಉದಯಹೊಂದಿದನು. ಆತನ ಶುಭ ವಾದ ಕೀರ್ತಿಯೂ, ಅತಿಶಯವಾದ ಧರ್ಮಾನುರಾಗವೂ, ಅಪ್ರತಿಹತವಾದ ರಾಜ ಶಕ್ತಿಯ, ಪ್ರಾಣಿ ಮಾತ್ರದ ಮೇಲಿನ ದಯೆಯೂ ಆ ಬೌದ್ಧ ಯುಗದ ಇತಿಹಾಸ ವನ್ನು ಉಜ್ವಲವಾಗಿ ಮಾಡಿರುವವು; ಪ್ರತಿಭಾಶಾಲಿಯೂ, ದಯಾಮಯನೂ ಆದ ಆ ಮಹಾತ್ಮನ ಪವಿತ್ರವಾದ ಹೆಸರನ್ನು ಪ್ರಾಚೀನೇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾಗಿರುವದು; ಯುಗಯುಗಾಂತರಗಳು ಗತಿಸಿಹೋಗಿದ್ದರೂ ಆತನ ಕೀರ್ತಿಚಿಹ್ನ ಗಳು ಇದುವರೆಗೆ ಎರಡು ಸಾವಿರ ವರ್ಷಗಳ ಪೂರ್ವದ ಇತಿಹಾಸವನ್ನು ದೇಶದೇಶಗಳಲ್ಲಿ ಜನದ ಕಣ್ಣೆದುರಿಗೆ ತಂದು ನಿಲ್ಲಿಸುತ್ತಿರುವವ, ಆ « ದೇವಾನಾಂ
ಪುಟ:ಅಶೋಕ.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.