ಅಶೋಕ ಅಥವಾ ಪ್ರಿಯದರ್ಶಿ. r 2 \ \ • ! " + \/ + + 1 ಸರ ಬಿಡುಗಡೆಗಾಗಿಯೂ ಶ್ರೀಕೃಷ್ಣನು ಭೀಮಾರ್ಜುನರೊಡನೆ ಮಗಧದ ರಾಜ ಧಾನಿಯಾದ ಗಿರಿಜಪುರಕ್ಕೆ ಹೋಗಿದ್ದನು. ಆಗ ಶ್ರೀಕೃಷ್ಣನು ದಾರಿಯಲ್ಲಿ ಹೋ ಗುತ್ತ ಮಗಧರಾಜ್ಯವನ್ನು ವರ್ಣಿಸಿದಂತೆ ಭಾರತದಲ್ಲಿ ಮನೋಹರವಾದ ವರ್ಣನೆ ಯುಂಟು, ಅದನ್ನು ಇಲ್ಲಿ ಕೊಡುವೆವು:- " ಶ್ರೀಕೃಷ್ಣನೂ ಭೀಮಾರ್ಜುನರೂ ಗಂಗಾಶೋಣಗಳನ್ನ ತಿಕ್ರಮಿಸಿ ಪೂರ್ವ ದಿಕ್ಕಿಗೆ ಮಗಧವನ್ನು ಕುರಿತು ನಡೆದರು. ಅವರು ಕೆಲವು ವೇಳೆಯಾದ ಬಳಿಕ ಗೋಧನ ಪೂರ್ಣವಾಗಿಯೂ, ಜಲಸಮೃದ್ಧವಾ ಗಿಯೂ, ನಾನಾವೃಕ್ಷಗಳಿಂದ ಮನೋಹರವಾಗಿಯೇ ಇರುವ ಗೋರಥಪರ್ವತವನ್ನು ಹತ್ತಲು ಮುಂದೆ ಮಗಧಪುರವು ಅವರ ಕಣ್ಣಿಗೆ ಬಿತ್ತು. ಆಗ ಶ್ರೀಕೃಷ್ಣನು-- ಎಲೈ ಪಾರ್ಥನೆ, ಇದು ನಿರಂತರ ಜಲಸಮೃದ್ದವಾಗಿಯೂ, ಮನೋಹರವಾದ ಉಪ್ಪರಿಗೆಗೆ ಳಿಂದ ಕಂಗೊಳಿಸುವದಾಗಿಯೂ, ರೋಗೋಪದ್ರವಶೂನ್ಯವಾಗಿಯೂ ಇರುವ ಮಗ ಧರಾಜ್ಯವು ವೈಹಾರ, ವರಾಹ, ವೃಷಭ, ಖುಷಿಗಿರಿ, ಚೈತ್ಯಕ ಎಂಬ ಐದು ಪರ್ವತ ಗಳು ಒಂದಕ್ಕೊಂದು ಸೇರಿಕೊಂಡು ಈ ಗಿರಿಜಪುರವನ್ನು ಕಾಪಾಡುತ್ತಿರುವವೋ ಎಂಬಂತೆ ಕಾಣುವದು. ಆ ಗಿರಿಗಳು ಪುಷ್ಟಿತವಾದ, ಕಾಮಿಜನಪ್ರಿಯವಾದ ಲೋಧ ವೃಕ್ಷರಾಜೆಯಿಂದ ಮುಚ್ಚಿಹೋಗಿರುವವು. ಇದೇ ಸ್ಥಾನದಲ್ಲಿ ಮಹಾತ್ಮನಾದ ಗೌತಮ ನೆಂಬ ಋಷಿಯು ಶೂದ್ರ ಸ್ತ್ರೀಯಾದ ಔಶೀನರಿಯಲ್ಲಿ ಕತ್ರೀವ ಮೊದಲಾದ ಮಕ್ಕ ಳನ್ನು ಹಡೆದನು. ಎಲೈ ಅರ್ಜುನನೇ, ಗೌತಮನ ಆಶ್ರಮದ ಸುತ್ತಲು ಬೆಳೆದ ಅಶ್ವತ್ಥ ಲೋಧ್ರವೃಕ್ಷಗಳ ವನರಾಜಿಯನ್ನು ನೋಡು, ಸ್ವಸ್ತಿಕನ, ಮತ್ತು ಮಣಿನಾಗನ ಆಲಯಗಳು ಇಲ್ಲಿ ಇರುವವ, ಮಗಧ ರಾಜ್ಯದ ಮೇಲೆ ತಪ್ಪದೆ ಮಳೆಗರೆಯುವಂತೆ ಮನುವು ಅನುಗ್ರಹಮಾಡಿರುವನು, ಮತ್ತು ತಂಡಕೌಶಿಕ, ಮಣಿಮಂತರು ಜರಾಸಂಧ ನಲ್ಲಿ ಅನುಗ್ರಹಮಾಡಿರುವರು. ಈ ಪರ್ವತಗಳಲ್ಲಿ ಯತಿಗಳು, ಸಿದ್ಧರು, ಮುನಿಗಳು, ನಾ ಗರು, ಗಂಧರ್ವರು ಇವರ ವಾಸಸ್ಥಳಗಳಿರುವವು.ಶತ್ರುಗಳಿಗೆ ಮುತ್ತಲಿಕ್ಕಾಗದ ಈ ಪಟ್ಟ ಣಕ್ಕೆ ಒಡೆಯನಾಗಿ ಜರಾಸಂಧನು ತನ್ನ ಕಾರ್ಯಸಿದ್ಧಿಯ ವಿಷಯದಲ್ಲಿ ಅಭಿಮಾನ ನಡುವನು ( ಮಹಾಭಾರತ, ಸಭಾಪರ್ವ ೨೦-೨೧.) ಕ್ರಿ. ಶ. ೫ನೆಯ ಶತಮಾನದಲ್ಲಿ ಸುಪ್ರಸಿದ್ಧ ಚೀನಪ್ರವಾಸಿಯಾದ ಫಾಹಿಯಾ ನನು ಭರತಖಂಡಕ್ಕೆ ಬಂದಿದ್ದನು. ಅವನು ತಾನು ಬರೆದ ಭರತಖಂಡದ ವೃತ್ತಾಂತ ದಲ್ಲಿ ಪ್ರಾಚೀನ ಗಿರಿಜಪುರದಿಂದ ಉತ್ತರಕ್ಕೆ ೩ ಮೈಲಿನ ಮೇಲೆ ನೂತನ-ರಾಜ ಗೃಹಪುರವಿರುವದೆಂದೂ, ಭಾರತದಲ್ಲಿ ಹೇಳಿದ ೫ ಪರ್ವತಗಳು ಪ್ರಾಕಾರದಂತೆ ಈ ಪಟ್ಟಣವನ್ನು ಸುತ್ತುಗಟ್ಟಿರುವವೆಂದೂ, ವರ್ಣಿಸಿರುವನು. ಕ್ರಿ. ಶ. ೭ನೆಯ ಶತಕದಲ್ಲಿ ಇನ್ನೊಬ್ಬ ಚೀನವಾಸಿಯಾದ ಹುಯೆನ್‌ತ್ಸಾಂಗನು ಭರತಖಂಡಕ್ಕೆ ಬಂದಾಗ
ಪುಟ:ಅಶೋಕ.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.