ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಅಶೋಕ ಅಥವಾ ಪ್ರಿಯದರ್ಶಿ winAnush೧೧ ೧/\AN (Nhf h/* * \ fin ላለለለለለለለለለለለለለለ፡ (೪), ವಾಣಿಜ್ಯ (ವ್ಯಾಪಾರ) ವಿಭಾಗ-ಈ ವಿಭಾಗದ ಕಾಮದಾರರು ತೂಕದ ಕಲ್ಲುಗಳ ಮತ್ತು ಅಳತೆಯ ಮಾವುಗಳ ಕಡೆಗೆ ವಿಶೇಷವಾಗಿ ಲಕ್ಷವಿಡುತ್ತಿ ದ್ದರು, ಮಾರಾಟದ ಸರಕು ಕಾಲಕಾಲಕ್ಕೆ ಜಾಹೀರು ಮಾಡಿ ಮಾರಲ್ಪಡುತ್ತಿತ್ತು. ಒಂದಕ್ಕಿಂತ ಹೆಚ್ಚು ಸರಕುಗಳ ಮಾರಾಟ ಮಾಡುವದಾದರೆ ಇಮ್ಮಡಿ ಕರವನು ಕೊಡಬೇಕಾಗುತ್ತಿತ್ತು. ಪಣ್ಯ ವಿಭಾಗ-ದೇಶದಲ್ಲಿ ಉತ್ಪನ್ನವಾಗುವ ಎಲ್ಲ ತರದ ಸರಕು ಹೆಚ್ಚಾಗಿ ಮಾರಾಟವಾಗುವಂತೆ ವ್ಯವಸ್ಥೆಯನ್ನು ಈ ವಿಭಾಗದ ಕಾಮದಾರರು ಮಾಡುವರು. ಯಾರೂ ಹೊಸ ಸರಕಿನಲ್ಲಿ ಹಳೆಯದನ್ನು ಮಿಶ್ರಮಾಡಿ ವ್ಯಾಪಾರ ಮಾಡದಂತೆಯೂ, ಮಾಡಿದರೆ ದಂಡವಾಗುವಂತೆಯ ವ್ಯವಸ್ಥೆಯಿತ್ತು. (೬), ವ್ಯಾಪಾರದ ಕರದ ವಿಭಾಗ-ಮಾರಿದ ಸರಕಿನ ಬೆಲೆಯ ೧ ನೆಯ ಭಾಗವು ಕರರೂಪವಾಗಿ ತೆಗೆದುಕೊಳ್ಳಲ್ಪಡುತ್ತಿತ್ತು. ಈ ಕರವನ್ನು ಕೊಡುವಲ್ಲಿ ಯಾರಾದರೂ ವಂಚನೆ ಮಾಡಿದರೆ ಅವರಿಗೆ ದೇಹಾಂತಶಿಕ್ಷೆಯಾಗು ತಿತ್ತು. ಚಂದ್ರಗುಪ್ತನು ಸ್ಥಾಪಿಸಿದ ವಿಶಾಲವಾದ ಸಾಮ್ರಾಜ್ಯದ ಉತ್ತಮವಾದ ರಾಜ್ಯ ಪದ್ಧತಿಯನ್ನು ನೋಡಿ ಪರದೇಶದವರು ಬೆರಗಾಗುತ್ತಿದ್ದರು. ಬಲವಾದ ಕೋಟೆ ಕೊತ್ತಳಗಳಿಂದ ಭದ್ರವಾದ, ಮತ್ತು ಸುಂದರವಾದ ಪಾಟಲಿಪುತ್ರ ರಾಜಧಾನಿಯು ಈ ಸಾಮ್ರಾಜ್ಯಕ್ಕೆ ತಕ್ಕ ರಾಜಧಾನಿಯಾಗಿತ್ತು, ಅಲ್ಲಿ ೪ ಲಕ್ಷ ಜನರು ವಾಸಮಾಡು ತಿದ್ದರು. ೬೦ ಸಾವಿರ ದಕ್ಷರಾದ ಕಾಲಾಳುಗಳ, ೩೦ ಸಾವಿರ ಸವಾರರ, ೮ ಸಾವಿರ ಆನೆಗಳ ಖರ್ಚನ್ನು ಮಹಾರಾಜನು ತಾನೇ ನೋಡಿಕೊಳ್ಳುತ್ತಿದ್ದನು. ಸಾಹಸಿಯಾದ ೬ ಲಕ್ಷ ಚತುರ ಸೈನ್ಯವು ಯಾವಾಗಲೂ ಯುದ್ಧದ ಸಲುವಾಗಿ ಸಜ್ಜಾಗಿರುತ್ತಿತ್ತು. ಈ ಅಪಾರವಾದ ಸೇನೆಯ ಸಹಾಯದಿಂದ ಅತನು ಭರತಖಂಡದಲ್ಲಿ ಎದುರಾಳಿಗ ಳಾದ ರಾಜರನ್ನು ಸೋಲಿಸಿ ಏಕಚ್ಛತಸಾಮ್ರಾಜ್ಯವನ್ನು ಸ್ಥಾಪಿಸುವದಕ್ಕೆ ಸಮರ್ಥ ನಾದನು, ಸೈನ್ಯವಿಭಾಗದಲ್ಲಿಯೂ "ಆರು ಉಪಭಾಗಗಳಿದ್ದವು, ೧ ಯುದ್ಧನೌಕಾ ವಿಭಾಗ; ೨ ಯುದ್ದ ಸಂಭಾರ ವಿಭಾಗ-ಈ ವಿಭಾಗದವರು ಗಾಡಿ ಮೊದಲಾದವುಗಳ ಸಹಾಯದಿಂದ ಶಸ್ತ್ರಾಸ್ತ್ರಗಳು, ಆಹಾರ ಪದಾರ್ಥಗಳು ಮೊದಲಾದವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವರು. ೩ ಪದಾತಿಗಳು ೪ ಸವಾರರು ೫ ಆನೆಗಳು ೬ ರಥಿಕರು. ಈ ಷಡಂಗ ಸೈನ್ಯದ ವ್ಯವಸ್ಥೆಗಾಗಿ ಬೇರೆ ಬೇರೆ ಕಾಮದಾರರು ನಿಯಮಿಸಲ್ಪಟ್ಟಿದ್ದರು, ದೇಶದಲ್ಲಿ ಶಾಂತತೆಯಿರುವಾಗ ಶಸ್ತ್ರಾಸ್ತ್ರಗಳನ್ನು ಅಸ್ತ್ರಶಾಲೆ ಯಲ್ಲಿ ಸಜ್ಜಾಗಿಡುತ್ತಿದ್ದರು. ಅಸ್ತ್ರಶಾಲೆಗಳ ಸುತ್ತಲು ಅಶ್ವಶಾಲೆಗಳೂ, ಗಜಶಾಲೆಗಳೂ ಇರುತ್ತಿದ್ದವು. ದಂಡೆತ್ತಿ ಹೋಗುವಾಗ ಕುದುರೆಗಳಿಗೆ ದಣುವಾಗಬಾರದೆಂದು ರಥ ಗಳಿಗೆ ಖೇಚರಗಳನ್ನು ಹೂಡುತ್ತಿದ್ದರು.