ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೨೭ ವಾದ ಭರತಖಂಡದಲ್ಲಿ ಜನ್ಮ ಹೊಂದಿ ಕೃತಾರ್ಥರಾದೆವೆಂದು ಅಭಿಮಾನಬಡುವೆವು. ಮುಂದಿನ ಅಧ್ಯಾಯಗಳಲ್ಲಿ ನಾವು ಆ ಮಹಾರಾಜಚಕ್ರವರ್ತಿಯಾದ ಅಶೋಕನ ವಿಚಿತ್ರವಾದ ಚರಿತ್ರವನ್ನು ಆಲೋಚಿಸುವೆವು. ೧ನೆಯ ಅಧ್ಯಾಯ. ---೫೫ ಸತ್ಯ ಎ. 11 ರ್ಯರಾಜವಂಶಸ್ಥಾಪಕನಾದ ಚಂದ್ರಗುಪ್ತ ಮಹಾರಾಜನು ಮಗ

ಧದ ರಾಜಧಾನಿಯಾದ ಪಾಟಲಿಪುತ್ರನಗರದಲ್ಲಿ* ಮಯೂ ಇದು ಇತರಾಂಕಿತ ಸಿಂಹಾಸನವನ್ನು ಸ್ಥಾಪಿಸಿದನು. ಶಿಲ್ಪ ಕೌಶಲ್ಯದಿಂದ ಕಂಗೊಳಿಸುವ ಅಲ್ಲಿಯ ಅರಮನೆಯನ್ನು ನೋಡಿ ಪ್ರೇಕ್ಷಕರು ಬೆರಗಾಗುತ್ತಿದ್ದರು. ಭಾಗೀರಥೀಶೋಣಗಳ ಸಂಗಮಸ್ಥಲದಲ್ಲಿ ಐದುನೂರೆಪ್ಪತ್ತು ಕೊತ್ತಳಗಳೂ, ಅರು ವತ್ತು ನಾಲ್ಕು ಅಗಸೆಗಳೂ ಉಳ್ಳ ಆ ರಾಜಧಾನಿಯು ಪರದೇಶದ ಪ್ರವಾಸಿಗಳ ಲಕ್ಷವ ನೈಳೆದುಕೊಳ್ಳುತ್ತಿತ್ತು. ಶಿಲ್ಪಕೌಶಲ್ಯದ ಗರ್ವವುಳ್ಳ ಗ್ರೀಕರು ಕೂಡ ಪಾಟಲಿಪುತ್ರದ ಸೌಂದರ್ಯವನ್ನು ಬಹಳವಾಗಿ ಹೊಗಳಿರುವರು. ವಿಶಾಲವಾದ ಕಲ್ಲಿನ ಉಪ್ಪರಿಗೆ ಗಳು, ವಿಚಿತ್ರವಾದ ಚಿತ್ರಗಳಿಂದ ಕಂಗೊಳಿಸುವ ಸ್ತಂಭಗಳು, ವಿಸ್ತ್ರತವಾದ ರಾಜ ಮಾರ್ಗ ಗಳು, ಇವುಗಳನ್ನು ಅವರು ಅತಿಶಯವಾಗಿ ವರ್ಣಿಸಿರುವರು, ಪುರಾಣಗಳಲ್ಲಿ ಪಾಟಲಿಪುತ್ರಕ್ಕೆ ಕುಸುಮಪುರ ಇಲ್ಲವೆ ಪುಷ್ಪಪುರವೆಂಬ ಹೆಸರುಂಟು, ಪಟ್ಟಣದ ಸುತ್ತಲು ಇರುವ ಹೂದೋಟಗಳಲ್ಲಿ ಯಾವಾಗಲೂ ಅರಳಿರುವ ಹಲವು ತರದ ಹೂ ಗಳಿಂದ ಅಂದವಾಗಿದ್ದದರಿಂದಲೇ ಪ್ರಾಚೀನ ಕವಿಗಳು ಅದಕ್ಕೆ ಪುಷ್ಟಪುರವೆಂಬ ಹೆಸ ರಿಟ್ಟರೆಂದು ತೋರುವದು.

ಚಂದ್ರಗುಪ್ತ ಮಹಾರಾಜನು ೨೪ ವರ್ಷ ರಾಜ್ಯವಾಳಿ ದೇಹವಿಟ್ಟ ಬಳಿಕ ಬಿಂದು ಸಾರ ( ಅಮಿತ್ರಘಾತ ) ನು # ಕ್ರಿ. ಪೂ. ೨೯೭ರಲ್ಲಿ ಗೌರವವುಳ್ಳ ಪಾಟಲಿಪುತ್ರದ ಸಿಂಹಾಸನವನ್ನೇರಿದನು. ಬಿಂದುಸಾರನು ಅತ್ಯಂತ ಧಾರ್ಮಿಕನು, ಆತನ ರಾಜಧಾನಿ ಯಲ್ಲಿ ೬೦ ಸಾವಿರ ವಿದ್ವಾಂಸರಾದ ಪವಿತ್ರ-ಬ್ರಾಹ್ಮಣರಿಗೆ ನಿರಂತರವಾದ ಆಶ್ರಯವಿತ್ತು. ದಿನಾಲು ಸಾವಿರಾರು ಮುಖಗಳಿಂದ ಹೊರಟ ವೇದಧ್ವನಿಯಿಂದ ಅರಮನೆಯು ಶಬ್ರಾ ಯಮಾನವಾಗುತ್ತಿತ್ತು. ಧರ್ಮದ ಮೇಲೆ ಜೀವವುಳ್ಳ ಭರತಖಂಡದ ಪ್ರಜೆಗಳು ಇಂಥ ಧಾರ್ಮಿಕ ರಾಜನ ಆಳಿಕೆಯಲ್ಲಿ ಸುಖವಾಗಿ ಕಾಲಕಳೆಯುತ್ತಿದ್ದರು. ಬಿಂದುಸಾರನು

  • Rhys David's Buddhist India P. 302. ↑ ವಿಷ್ಣು ಪುರಾಣ, ಜೈನ ಪರಿಶಿಷ್ಟ ಸರ್ವನ ಮತ್ತು ಮತಾಂಶ.