ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&O| ಅಶೋಕ ಅಥವಾ ಪ್ರಿಯದರ್ಶಿ. ለለለኣለለለለለለለለለለ፡ AnoMoN ೧ ಆ ಕುಮಾರನಿಗೆ ಎಲ್ಲ ಹುಡುಗರು ಆದರದಿಂದ ನಿಗೊಧನೆಂದು ಕರೆಯುತ್ತಿದ್ದರು. ಕಾಲಕ್ರಮದಿಂದ ಮಹಾವರುಣನೆಂಬ ಒಬ್ಬ ಬೌದ್ದ ಸ್ಥವಿರನು ಶಿಶುವಿನ ಪವಿತ್ರಲಕ್ಷಣ ಗಳನ್ನು ಕಂಡು ಆತನು ಯಾರೆಂಬದನ್ನು ಗೊತ್ತು ಹಚ್ಚಿದನು. ಈ ಹುಡುಗನು ೭ ವರ್ಷದ ವಯಸ್ಸಿನಲ್ಲಿಯೇ ಆ ಸ್ಥಾವಿರನಿಂದ ಬೌದ್ಧ ಧರ್ಮದ ದೀಕ್ಷೆಯನ್ನು ಹೊಂದಿದ ನೆಂದು ಹೇಳಿದೆ. ಒಂದು ದಿವಸ ನಿಗೊಧನು ಸಾಟಲಿಪುತ್ರದ ಅರಮನೆಯ ಎದುರಿನ ರಾಜಮಾರ್ಗವನ್ನು ಹಿಡಿದು ಹೋಗುವಾಗ ಅಶೋಕಚಕ್ರವರ್ತಿಯು ಕಿಡಕಿಯಿಂದ ಆತನನ್ನು ನೋಡಿದನು. ಬಾಲಕನ ಗಂಭೀರವಾದ ಆಕಾರವನ್ನೂ, ಕಾಂತಿಯನ್ನೂ ಕಂಡು ಅರಸನು ಮರುಳಾಗಿ ಕೂಡಲೆ ಆ ಬಾಲಭಿಕ್ಷುವನ್ನು ಕರೆಸಿದನು. ಆ ಬಾಲ ಕನು ಮೆಲ್ಲಮೆಲ್ಲನೆ ರಾಜಸಭೆಯಲ್ಲಿ ಅರಸನ ಬಳಿಗೆ ಬಂದನು. ರಾಜನು ನವ್ರಸ್ವಭಾ ವದ ಆ ಗಂಭೀರಮುಖಮುದ್ರೆಯ ಬಾಲಕನಿಗೆ ಬೇಕಾದ ಆಸನದಲ್ಲಿ ಕುಳ್ಳಿರಬಹು ದೆಂದು ಹೇಳಿದನು, ನಿಗೊಧನು ರಾಜಸಭೆಯಲ್ಲಿ ಭಿಕ್ಷುಗಳಿಗೆ ತಕ್ಕ ಆಸನವಿಲ್ಲದ್ದನ್ನು ನೋಡಿ ಸಿಂಹಾಸನದ ಕಡೆಗೆ ಸಾಗಿದನು. ಅಶೋಕಮಹಾರಾಜನು ಪ್ರೇಮಪರವಶ ನಾಗಿ ಬಾಲಕನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಮರ್ಯಾದೆಮಾಡಿ ಬೌದ್ಧ ಧರ್ಮದ ವಿಷಯವಾಗಿ ಕೆಲವು ಪ್ರಶ್ನೆಗಳನ್ನು ಆತನಿಗೆ ಮಾಡಿದನು. ಆಗ ನಿಗೊ ಧನು ಇಂಪಾದ ದನಿಯಿಂದ

  • x अप्पमादो अमतपदं पमादो मच्चुनो पदम् ।। अप्पमत्ता न मीयन्ति ये पमत्ता यथा मता । एतं विसेसतो ज्ञत्वा अप्पमादन्ति पण्डिता ।। अप्पमादे पमोदन्ति अरियानं गोचरे रता ।। ते झायिने साततिकः निच्चं दह परक्रमा ।

फूसन्ति धीरा निर्वाणं योगख्षेमं अनुत्तरम्” ॥ « ಅಪ್ರಮಾದವು ಅಮೃತದ ( ಮೋಕ್ಷದ ) ಮಾರ್ಗವು, ಪ್ರಮಾದವು ಮೃತ್ಯು ವಿನ ದ್ವಾರವು, ಅಪ್ರಮತ್ತ ( ಧರ್ಮಾಚರಣತತ್ಪರ ರಾದವರು ಎಂದೂ ಸಾಯುವ ದಿಲ್ಲ. ಪ್ರಮತ್ತರು ಸತ್ತಂತೆಯೇ ಸರಿ. ಈ ಸತ್ಯವನ್ನು ಯಾರು ವಿಶೇಷವಾಗಿ ತಿಳಿದು ಕೊಂಡು ಅಪ್ಪಮತ್ತರಾಗಿರುವರೋ, ಮತ್ತು ಯಾವಾಗಲೂ ಆರ್ಯರ ( ನಿರ್ವಾಣ ಮಾರ್ಗಾವಲಂಬಿಗಳ ) ಜ್ಞಾನದಲ್ಲಿ ವಿಹರಿಸುವರೋ, ಯಾರು ಧ್ಯಾನನಿಷ್ಕರೂ, ಸತತ ಪ್ರಯತ್ನ ಶೀಲರೂ, ನಿತ್ಯ 'ದೃಢಪರಾಕ್ರಮವುಳ್ಳವರೂ ಆಗಿರುವರೋ ಆ ಎಲ್ಲ ವೀರ ಪುರುಷರು ಪರಮ ಶಾಂತಿರೂಪವಾದ ನಿರ್ವಾಣವನ್ನು ಪಡೆಯುವರು. ” ... ಎಷ್ಟೋ ಕಡೆಗೆ ಈತನಿಗೆ "ಗೋಧವೆಂದೂ ಕರೆದಿರುವರು, • ಧಮ್ಮಪದ- ಅಪ್ರಮಾದ ನಗ್ನ.