ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಅಶೋಕ ಅಥವಾ ಪ್ರಿಯದರ್ಶಿ. vv --* * //* * p* * // - * - * * - * * * * * * * * * * * * * * // -/ ? ವದು, ಮತ್ತು ಅದರೊಡನೆ ಪ್ರಸಂಗಾನುಸಾರವಾಗಿ ಅದಕ್ಕೆ ಸಂಬಂಧಪಟ್ಟ ಬೇರೆ ಹಿಂದು ದೇಶಗಳ ಅರಸರ ಚರಿತ್ರಗಳೂ ಸಂಕ್ಷೇಪವಾಗಿ ವರ್ಣಿಸಲ್ಪಟ್ಟಿವೆ. ಇದರಲ್ಲಿ ಅಶೋಕನ ಸಂಬಂಧವಾಗಿಯೂ ಸ್ವಲ್ಪ ಉಲ್ಲೇಖವುಂಟು, ಈ ಗ್ರಂಥದಲ್ಲಿ ಅಶೋ ಕನ ಬೌದ್ಧ ಧರ್ಮನಿಷ್ಠೆಯ, ಧರ್ಮಾನುರಾಗವೂ ವರ್ಣಿಸಲ್ಪಟ್ಟಿವೆ. ಕಾಶ್ಮೀರದ ಹಲವು ಇತಿಹಾಸಪ್ರಸಿದ್ಧ ಸ್ಥಲಗಳಲ್ಲಿ ಅಶೋಕನ ಕೀರ್ತಿಯ ಅವಶೇಷಗಳಿರುವವು. ಚೀನ ಪ್ರವಾಸಿಗಳು ಈ ವಿಷಯವಾಗಿ ವಿಶೇಷ ರೀತಿಯಿಂದ ಉಲ್ಲೇಖಿಸಿರುವರು. ಶುಷ್ಕ ಲೇತ್ರ • ಮತ್ತು ವಿತಸ್ತತ್ರ ಎಂಬ ಸ್ಥಳಗಳಲ್ಲಿ ಅಶೋಕನು ಕಟ್ಟಿಸಿದ ಸ್ತೂಪ. ಗಳೂ, ವಿಹಾರಗಳೂ ಎಷ್ಟೋ ದಿವಸಗಳವರೆಗೆ ಇದ್ದವು, ಅಶೋಕನ ಕಾಲದಲ್ಲಿ ಕಾಶ್ಮೀರವು ಮಗಧ ಸಾಮ್ರಾಜ್ಯಕ್ಕೆ ಸೇರಿತು. ಈ ಕಾಲದಲ್ಲಿ ಸುಮಾರು $ ಐನೂರು. ರದಿಂದ ಒಂದು ಸಂಕ್ಷಿಪ್ತ ಪುಸ್ತಕವನ್ನು ಪ್ರಕಟಿಸಿದನು. ಅಕಬರನನ್ನು ಅನುಸರಿಸಿ ಮುಂದಿನ ಚಕ್ರ. ವರ್ತಿಗಳೂ ಆ ಗ್ರಂಥದ ಭಾಷಾಂತರವನ್ನು ಪ್ರಕಟಿಸುತ್ತ ಹೋದರು, ಮತ್ತು ಅವರು ತಮ್ಮ ಕಾಲದ ಸಂಗತಿಗಳನ್ನು ಕಾಶ್ಮೀರದ ಇತಿಹಾಸದಲ್ಲಿ ಸೇರಿಸಿದರು. ಬಾರ್ನಿಯರನು ಒಂದು ಸ್ಥಲದಲ್ಲಿ ಉಲ್ಲೇಖಿ ಸಿದ್ದೇನಂದರೆ-ಅಕಬರನ ಅಪ್ಪಣೆಯಿಂದ ರಾಜತರಂಗಿಣಿಯ ಒ೦ದು ಪಾರಸಿಭಾಷಾ೦ತರವು ಪ್ರಕಟಿಸ ಇಟ್ಟಂತೆ ಜಹಾಂಗೀರನ ಆಳಿಕೆಯಲ್ಲಿ ಅವನ ಅಪ್ಪಣೆಯಿ೦ದಲೂ ಇನ್ನೊ೦ದು ಪಾರ್ಸಿಭಾಷಾ೦ತರವು ಪ್ರಕಟಿಸಲ್ಪಟ್ಟಿತು. ಬಾರ್ನಿಯರನು ಇವುಗಳಲ್ಲೊಂದು ಪಾರ್ಸಿಭಾಷಾಂತರವನ್ನು ತಾನು ಪ್ರಕಟಸ ಬೇಕೆಂದು ಮಾಡಿದ್ದನು, ಆದರೆ ಆ ವಿಷಯದಲ್ಲಿ ಹೆಚ್ಚಿಗೆ ಏನೂ ಗೊತ್ತಾಗಿಲ್ಲ. ಮುಂದಿನ ಕಾಲದಲ್ಲಿ ಮುಸಲ್ಮಾನ ಲೇಖಕರು ಬೇರೆ ಬೇರೆ ಕಾಲದಲ್ಲಿ ಇದರ ಬೇರೆ ಬೇರೆ ಪಾರ್ಸಿ ಭಾಷಾ೦ತರಗಳನ್ನು ಪ್ರಕಟಿಸಿ ದ್ದರು. Gladwin ಎಂಬವರು ಆಯನ್ ಅಕಬರಿಯ ಇಂಗ್ಲಿಶ್ ಭಾಷಾಂತರವನ್ನು ಪ್ರಕಟಿಸುವ ವರೆಗೆ ಹಿಂದುಸ್ತಾನದಲ್ಲಿರುವ ಇಂಗ್ಲಿಶ ಜನರಿಗೆ ಯಾರಿಗೂ ರಾಜತರಂಗಿಣಿಯ ವಿಷಯವಾಗಿ ಏನೂ ತಿಳಿದಿರಲಿಲ್ಲ. Sir William Jones ನಂಥ ಅಸಾಧಾರಣ ಪಂಡಿತನಿಗೆ ಕೂಡ ಮೂಲ ಸಂಸ್ಕೃತ ಗ್ರಂಥವನ್ನು ಸಂಪಾದಿಸುವದಾಗಿರಲಿಲ್ಲ. ಕೊನೆಗೆ ೧೮೦೫ ರಲ್ಲಿ Mr, Colebrooke ನು ಕಲಕತ್ತೆಯ ಒಬ್ಬ ಬ್ರಾಹ್ಮಣನ ಬಳಿಯಲ್ಲಿದ್ದ ಒಂದು ಮೂಲಗ್ರಂಥವನ್ನು ಸಂಗ್ರಹಿಸಿದನು, ಮತ್ತು ಅದೇ ಕಾಲದಲ್ಲಿ Mr Speke ಲಖನೌಸಟ್ಟಣದಲ್ಲಿ ಇನ್ನೊಂದು ಪ್ರತಿಯನ್ನು ಕೊಂಡಿದ್ದನು. ಹಲವರು ರಾಜತರಂಗಿ ಣಿಯು ಸಮಗ್ರ ಒಂದೇ ಗ್ರಂಥವೆಂದು ತಿಳಿದಿದ್ದರು. ಆದರೆ ಹಾಗಲ್ಲ. ಇದು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿದೆ. ಕಾಶ್ಮೀರದ ರಾಜಮಂತ್ರಿಯಾದ ಚಂಪಕನ ಮಗನಾದ ಕಲ್ಲಣನೆಂಬ ಪ್ರಸಿದ್ದ ಪಂಡಿತನು ಮೊದಲನೆಯ ಭಾಗವನ್ನು ಬರೆದವನು. ಅವನೇ ಪೂರ್ಣವಾಗಿ ಬರೆದವ ನೆಂದು ಹಲವರು ನಂಬಿದ್ದರು. ಕಾಶ್ಮೀರದಲ್ಲಿ ಪ್ರಚಲಿತವಾಗಿರುವ ಉಪಾಖ್ಯಾನ ನೀಲಪುರಾಣ ಮೊದ ಲಾದ ಗ್ರಂಥಗಳೂ, ಪ್ರಾಚೀನ ಲೇಖಕರ ವಿವರಣೆಗಳೂ ಇವುಗಳಿಂದ ಕಲ್ಲಣನು ಈ ವಿಖ್ಯಾತ ಗ್ರಂಥವನ್ನು ಬರೆದನೆಂದು ಗೊತ್ತಾಗುತ್ತದೆ. ಅತಿ ಪ್ರಾಚೀನಕಾಲದಿಂದ ಆರಂಭಿಸಿ ಸಂಗ್ರಾಮದೇವನ ಕಾಲದವರೆಗೆ ಅಂದರೆ ಕ್ರಿ.೧೧೪೮ವರೆಗೆ ಸಂದ ಕಾಲವು ಈ ಗ್ರಂಥದ ವಿಷಯವು ಕಲ್ಲ ಣನ ರಾಜತರಂಗಿಣಿಯ ಹೊರತು ಬೇರೆ ಒಂದೆರಡು ರಾಜತರಂಗಿಣಿಗಳೆ೦ಬ ಗ್ರಂಥಗಳು ೦ಟು, ಅವುಗಳಲ್ಲಿ ಶ್ರೀವರ ಪಂಡಿತ ಕೃತ ಜೈನ ರಾಜತರಂಗಿಣಿಯು ಮುಖ್ಯವು. • ರಾಜತರಂಗಿಣಿ. 's Record of Western V orld, Vol. 1,