ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೩# ANNh/s hhhhhhh/೧೧//N # \r\ /\r\ \

  • * **/* * * * * * * ** #
        • * */* * * 1/\ f/1/\ #\ #\\Ah/\೧೧೧hh

ಜನ ಅರ್ಹ೦ತರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಬೌದ್ಧ ಭಿಕ್ಷುಗಳ ಸಲುವಾಗಿ ಅಶೋಕನು ಇಲ್ಲಿ ಐನೂರು ಸಂಘಾರಾಮಗಳನ್ನು ಕಟ್ಟಿಸಿದ್ದನು. ಕಾಶ್ಮೀರದಲ್ಲಿ ಪ್ರಚಲಿತವಾಗಿರುವ ಕಥೆಯಿಂದ ಅಶೋಕನು ಉದಾರ ಧರ್ಮ ( ಯಾವದೊಂದು ವಿಶಿಷ್ಟ ಪಂಥವನ್ನವಲಂಬಿಸದ ) ವನ್ನವಲಂಬಿಸಿದ್ದನೆಂದು ತಿಳಿಯುವದು, ವಿಜಯೇ ಶ್ವರ' ವೆಂಬ ಪ್ರಾಚೀನ ಶೈವತೀರ್ಥದ ಸಲುವಾಗಿ ಅಶೋಕನು ಸಹಾಯ ಮಾಡಿದ ಕಥೆಯ ಗ್ರಂಥದಲ್ಲಿ ಉಂಟು. ಅಶೋಕನು ಈ ತೀರ್ಥದ ಹಳೆಯ ಇಟ್ಟಿಗೆಯ ಗೋಡೆಯನ್ನು ತೆಗೆಯಿಸಿ ಅದರ ಸ್ಥಳದಲ್ಲಿ ಒಂದು ಕಲ್ಲಿನ ಗೋಡೆಯನ್ನು ಕಟ್ಟಿಸಿದ ನೆಂದು ಪ್ರವಾದವುಂಟು. ಇದಲ್ಲದೆ ಕಾಶ್ಮೀರದಲ್ಲಿ ಅಶೋಕನು ಎರಡು ದೇವಾಲಯ ಗಳನ್ನು ಕಟ್ಟಿಸಿದ್ದನು. ಈ ಎರಡಕ್ಕೂ ಅಶೋಕೇಶ್ವರ ಎಂದು ಹೆಸರಿತ್ತು. ಅದರ ಬ್ಲೊಂದು ಕಲ್ಲಣನ ಕಾಲದವರೆಗೆ ಅಶೋಕೇಶ್ವರವೆಂಬ ಹೆಸರಿನಿಂದಲೇ ಇತ್ತು, ಅಶೋಕನು ಶಿವಭೂತೇಶ • ವೆಂಬ ಪ್ರಸಿದ್ದ ಶೈವತೀರ್ಥದ ಒಬ್ಬ ಉಪಾಸಕನಾಗಿದ್ದ ನೆಂದು ಪ್ರವಾದವುಂಟು, ಕಾಶ್ಮೀರದ ಬ್ರಾಹ್ಮಣರು ಜೈಷ್ಣರುದ್ರವೆಂಬ ಪ್ರಾಚೀನ ಶಿವಮಂದಿರವು ಅಶೋಕನ ಮಗನಾದ ಜಾಲೂಕನಿಂದ ಕಟ್ಟಿ ಸಲ್ಪಟ್ಟಿತೆಂದು ಹೇಳುತ್ತಿ ದ್ದರು, ಕಲ್ಲಣನು ಅಶೋಕನು ಪ್ರಾಚೀನ ಶ್ರೀನಗರದ ಸ್ಥಾಪಕನೆಂದು + ಉಲ್ಲೇಖಿಸಿ ರುವನು. ಕ್ರಿ, ೫ನೆಯ ಶತಮಾನದವರೆಗೆ ಇದೇ ಕಾಶ್ಮೀರದ ರಾಜಧಾನಿಯಾಗಿತ್ತು. ಮುಂದಿನ ಕಾಲದ ರಾಜಧಾನಿಗೆ ಪ್ರವರಸೇನಪುರವೆಂಬ ಹೆಸರು ಇತ್ತು, ಇದು ೬ನೆಯ ಶತಮಾನದಲ್ಲಿ ೨ನೆಯ ಪ್ರವರಸೇನನೆಂಬ ರಾಜನ ಕಾಲದಲ್ಲಿ ಕಟ್ಟಿಸಲ್ಪಟ್ಟಿತು. ಈ ಎಲ್ಲ ಪ್ರಸಂಗಗಳನ್ನಲ್ಲದೆ ಅಶೋಕನ ವಂಶಾವಲಿಯನ್ನೂ ಅದರಲ್ಲಿ ಉಲೇ ಬಿಸಿದ್ದು ಕಂಡು ಬರುವದು, ರಾಜತರಂಗಿಣಿಯಲ್ಲಿ ಅಶೋಕನ ಪ್ರಪಿತಾಮಹನ ಹೆಸರು ಶಾಕುನಿ ... ಎಂದು ಹೇಳಿದೆ. ಆದರೆ ಬೇರೆ ಯಾವ ಗ್ರಂಥದಲ್ಲಿಯೂ ಈ ವಿಷಯದ ಉಲ್ಲೇಖವಿಲ್ಲದದರಿಂದ ಹಲವರು ಇದು ಐತಿಹಾಸಿಕ ಸತ್ಯವೆಂದು ನಂಬುವದಿಲ್ಲ. ರಾಜತರಂಗಿಣಿಯು ಭಾರತವರ್ಷದಲ್ಲಿ ಒಂದೇ ಐತಿಹಾಸಿಕ ಗ್ರಂಥವಾಗಿದ್ದರೂ ಅದ ರಲ್ಲಿ ಅಶೋಕನ ಏಕಚ್ಛತ್ರಸಾಮ್ರಾಜ್ಯದ ವಿಷಯವು ಸ್ವಲ್ಪವೂ ಉಲ್ಲೇಖಿಸಲ್ಪಟ್ಟಿಲ್ಲ ವೆಂಬದು ಆಶ್ಚರ್ಯದ ಸಂಗತಿಯು. ಆದರೂ ಮೇಲೆ ಹೇಳಿದ ಎಲ್ಲ ಕಥೆಗಳಿಂದ ಅಶೋಕನ ಸಾಮ್ರಾಜ್ಯದ ಪ್ರಭಾವವು ಮೇಲೆ ಹೇಳಿದ ಆ ಎಲ್ಲ ದೇಶಗಳಲ್ಲಿ ಹಬ್ಬಿ ತೊಂದು ಸ್ಪಷ್ಟವಾಗುವದು. - ಬ

  • Ancient Geography of India.

• ರಾಜತರಂಗಿಣಿ, ↑ Ancient (tegraphy of India. S ರಾಜತರಂಗಿಣಿ.