ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. مهره ه عمهم مرمیم مره //hy MMA ಗ್ಯಭಾಗದಲ್ಲಿ ನಾಗರಾಜನಾದ ಇಳಾಪುತ್ರನ ಒಂದು ಮನೋಹರವಾದ ಸರೋವರ ವಿತ್ತು, ಸ್ವಚ್ಛವಾದ ನೀರಿನಿಂದಲೂ, ಹಲವು ತರದ ಕಮಲಗಳಿಂದಲೂ ಆ ಸರೋವರವು ಅಂದವಾಗಿತ್ತು. ತಕ್ಷಶಿಲೆಯು ಪೂರ್ವಕಾಲದಲ್ಲಿ ಭರತಖಂಡದ ಮುಖ್ಯ ವಿದ್ಯಾಪೀಠವು. ಆತ್ರೇಯ ಮೊದಲಾದ ನಾನಾಶಾಸ್ತ್ರ ಪಂಡಿತರಾದ ಋಷಿಗಳು ತಕ್ಷಶಿಲೆಯ ವಿಶ್ವವಿದ್ಯಾಲಯ ದಲ್ಲಿ ಅಧ್ಯಾಪನ ಮಾಡಿಸುತ್ತಿದ್ದರು. ನಾನಾದೇಶಗಳಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಇಲ್ಲಿಗೆ ಬರುತ್ತಿದ್ದರು. ಬೌದ್ಧಗ್ರಂಥಗಳಲ್ಲಿ ಜೀವಕನೆಂಬ ಒಬ್ಬ ಸುಪ್ರಸಿದ್ದ ಚಿಕಿತ್ಸಾ ಶಾಸ್ತ್ರ ಪಂಡಿತನ ಹೆಸರು ಬಂದಿರುವದು. ಅವನು ಈ ವಿಶ್ವವಿದ್ಯಾಲಯದ ಶಿಷ್ಯನು. ಅವನು ಮಗಧದೇಶದಿಂದ ಇಲ್ಲಿಗೆ ಅಧ್ಯಯನಕ್ಕೆ ಬಂದು ಆತ್ರೇಯ ಮಹರ್ಷಿಯ ಬಳಿಯಲ್ಲಿ ಚಿಕಿತ್ಸಾ ಶಾಸ್ತ್ರವನ್ನು ಕಲಿತನು. ಪಾಣಿನಿಮಹರ್ಷಿಯೂ ಇದೇ ಸ್ಥಳದಲ್ಲಿ ಅಧ್ಯಯನ ಮಾಡಿದನೆಂದು ಹೇಳಿರುವದು, ಚಾಣಕ್ಯಪಂಡಿತನು ಪುಷ್ಟಪುರಕ್ಕೆ ಬರುವ ಮುಂಚೆ ತಕ್ಷತಿ ಲೆಯಲ್ಲಿ ಶಿಕ್ಷಣಪಡೆದಿದ್ದನು. ಗ್ರೀಕವೀರನಾದ ಸಿಕಂದರನು ಈ ತಕ್ಷಶಿಲೆಗೆ ಬಂದಾಗ ಅಲ್ಲಿಯ ರಾಜನು ಯುದ್ಧ ವಿಲ್ಲದೆ ಅವನಿಗೆ ಅಂಕಿತನಾದನು. * ಅಲೆಕ್ಸಂದರನು ಪಂಚಾಬವನ್ನು ಬಿಟ್ಟು ಹೋದೆ ಬಳಿಕ ಯುಡಿಮ್ಬ ಎಂಬ ಸೇನಾಪತಿಯು ಹಿಂದುಸ್ತಾನದಲ್ಲಿದ್ದ ಗ್ರೀಕನಾಮ್ರಾಜ್ಯದ ರಾಜ್ಯಭಾರವನ್ನು ಸಾಗಿಸುತ್ತಿದ್ದನು. ತಕ್ಷಶಿಲಾರಾಜನೂ ಪುರುರಾಜನೂ ಅವನ ಸಹಾ ಯಕ್ಕಾಗಿ ನಿಯಮಿಸಲ್ಪಟ್ಟಿದ್ದರು. ಕ್ರಿ. ಪೂ. ೩೧೭ ರವರೆಗೆ ಅವನು ಇದೇ ಕೆಲಸದಲ್ಲಿ ಇದ್ದನು. ಮುಂದೆ ಅಂಟಿಗೋನಾಸನೊಡನೆ ಯುದ್ದವು ಒದಗಲು ಯುಡಿಮ್ಬನು ಪುರು ರಾಜನನ್ನು ಕೊಂದು ಅವನ ೧೨೦ ಆನೆಗಳನ್ನು ತೆಗೆದುಕೊಂಡು ಯುಮಿನಿಸನಿಗೆ ಸಹಾ ಯಮಾಡುವದಕ್ಕೆ ಹೋದನು. ಈ ಸುಯೋಗವನ್ನು ಸಾಧಿಸಿ ಚಂದ್ರಗುಪ್ತನು ತನ್ನ ಸ್ವಾತಂತ್ರವನ್ನು ಸ್ಥಾಪಿಸುವದಕ್ಕಾಗಿ ಸುಶಿಕ್ಷಿತವಾದ ಸೇನೆಯೊಡನೆ ಗ್ರೀಕರಾಜ್ಯವನ್ನು ಮುತ್ತಿದನು. ಜಯಶೀಲನಾದ ಚಂದ್ರಗುಪ್ತನು ಪಂಚನದದಲ್ಲಿ ಗ್ರೀಕರನ್ನು ಸೋಲಿಸಲು ಗ್ರೀಕನಾಮಂತರು ಭರತಖಂಡವನ್ನು ಬಿಟ್ಟು ಹೊರಟುಹೋದರು. ಈ ಕಾಲದಿಂದ ತಕ್ಷಶಿಲೆಯು ಮಗಧನಾಮ್ರಾಜ್ಯಕ್ಕೆ ಒಳಪಟ್ಟಿತ್ತು. ತಕ್ಷಶಿಲೆಯಲ್ಲಿ ದಂಗೆಯು ಹುಟ್ಟಲು ಬಿಂದುಸಾರ ಮಹಾರಾಜನು ಅದನ್ನು ಅಡ ಗಿಸುವ ಭಾರವನ್ನು ಅಶೋಕನಿಗೇ ಒಪ್ಪಿಸಿದನು. ರಾಜನು ಅಶೋಕನನ್ನು ಒಳೆಯ ದೃಷ್ಟಿಯಿಂದ ನೋಡುತ್ತಿರಲಿಲ್ಲವಾದದರಿಂದ ದಂಗೆಯೆದ್ದ ತಕ್ಷಶಿಲೆಗೆ ಆತನನ್ನು ಕಳುಹಿ ದನೆಂದು ಹೇಳುತ್ತಾರೆ. ಆದರೆ ಈ ಸಂಗತಿಯನ್ನು ನಂಬಲಾಗುವದಿಲ್ಲ. ಯಾಕಂದರೆ ರಾಜಪುತ್ರನು ರಣಕ್ಷೇತ್ರದಲ್ಲಿ ಹತನಾದರೆ ಮಗಧ ಸಾಮ್ರಾಜ್ಯಕ್ಕೆ ಕುಂದಿಲ್ಲವೇ? ಸಹಜ ವಾಗಿ ತಿಳಿಯಬಹುದಾದ ಈ ಮಾತನ್ನು ಕೂಡ ಬಿಂದುಸಾರನು ತಿಳಿಯಲಿಲ್ಲವೆಂದು

  • Early History of India by Vincent Sunith