ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೫೭ ಎಷ್ಟೋ ಕ್ರೂರ ಕೃತ್ಯಗಳ ಉಲ್ಲೇಖವುಂಟು, ಒಂದು ದಿನ ಆತನು ಮಂತ್ರಿಗಳಿಗೆ ನೀವು ಫಲಪುಷ್ಪಭರಿತವಾದ ವೃಕ್ಷವನ್ನು ಕಡಿದು ಮುಳ್ಳಿನ ಮರಕ್ಕೆ ನೀರೆರೆಯುತ್ತೀರಿ ಎಂದು ಅಂದದ್ದಕ್ಕೆ ಅವರು ನಿರಾಕರಣಮಾಡಿ ಪ್ರತ್ಯುತ್ತರವನ್ನಿ ಯಲು ಅಶೋಕನು ಕ್ರೋಧಾಂಧನಾಗಿ ಖಡ್ಗವನ್ನು ಒರೆಯಿಂದ ಹಿರಿದು ಐನೂರು ಜನ ಮಂತ್ರಿಗಳ ಶಿರ ಕ್ಷೇದ ಮಾಡಿದನಂತೆ, ಅಂತಃಪುರದ ಮಹಿಳೆಯರು ಅಶೋಕನ ಕುರೂಪಕ್ಕೆ ಹೇಸಿ ಹೊದೋಟದಲ್ಲಿರುವ ಒಂದು ಅಶೋಕವೃಕ್ಷದ ಎಲೆಗಳನ್ನೆಲ್ಲ ಹರಿದು ಅದಕ್ಕೆ ಅಣಕಿಸಿ ಚೇಷ್ಟೆ ಮಾಡುತ್ತಿರುವದನ್ನು ಅಶೋಕನು ಕೇಳಿ ಆ ಎಲ್ಲ ಮಹಿಳೆಯರನ್ನು ಸುಟ್ಟು ಬಿಟ್ಟನು. ಮಂತ್ರಿಗಳು ಈ ಅಸಹ್ಯವಾದ ನಡತೆಯನ್ನು ನೋಡಿ ಮಹಾರಾಜರೆ, ತಾವು ಸ್ವಹಸ್ತ ದಿಂದ ಇಂಥ ಭಯಂಕರ ಕೃತ್ಯಗಳನ್ನು ಮಾಡಿ ರಾಜಹಸ್ತವನ್ನು ದೂಷಿತ ಮಾಡಬಾರದು; ತಮ್ಮ ಅಪ್ಪಣೆಯನ್ನು ತಪ್ಪದೆ ನಡೆಯಿಸುವ ಒಬ್ಬ ಕೊಲೆಗಡಿಕನನ್ನು ಈ ಕೆಲಸಕ್ಕೆ ನಿಯ ಮಿಸಬೇಕು; ಎಂದು ಬೇಡಿಕೊಂಡರು. ಅಶೋಕನು ಮಂತ್ರಿವರ್ಗದ ಈ ಬಿನ್ನಹಕ್ಕೆ ಮಾನವಿತ್ತು ಚಂಡಗಿರಿಕನೆಂಬ ಒಬ್ಬ ಅತಿ ಕ್ರೂರನಾದ ನೇಕಾರನ ಮಗನನ್ನು ಈ ಕೆಲ ಸಕ್ಕೆ ನಿಯಮಿಸಿದನು. ಪಾಪಿಷ್ಠನಾದ ಚಂಡಗಿರಿಕನ ಕ್ರೌರ್ಯವು ಲೋಕಪ್ರಸಿದ್ಧ ವಾಗಿತ್ತು ಅಶೋಕನು ಕೊಲೆಯ ಕೆಲಸಕ್ಕಾಗಿಯೇ ಬಹು ಸುಂದರವಾದ ಒಂದು ದೊಡ್ಡ ವಧಾಗಾರ (ಕೊಲೆ-ಮನೆ)ವನ್ನು ಕಟ್ಟಿಸಿದ್ದನು. ಈ ಕಟ್ಟಡದ ಹೊರಭಾಗದ ಶಿಲ್ಪವು ಬಹು ಮನೋಹರವಾಗಿತ್ತು. ಆ ಶಿಲ್ಪ ಚಾತುರ್ಯವನ್ನು ನೋಡಿದೊಡನೆ ಯಾರಿಗಾದರೂ ಒಳಗೆ ಪ್ರವೇಶಿಸಬೇಕೆಂದು ಮನಸ್ಸಾಗುತ್ತಿತ್ತು, ಆದರೆ ಈ ಭಯಂಕರ ವಾದ ಮಂದಿರದಲ್ಲಿ ಪ್ರವೇಶಿಸಿದವನು ಬದುಕಿ ತಿರುಗಿ ಬರುತ್ತಿರಲಿಲ್ಲ! ಈ ವಧಾಗಾರದಲ್ಲಿ ಯಾರಾದರೂ ಪ್ರವೇಶಿಸಿದರೆ ಅವರ ಶಿರಚ್ಛೇದ ಮಾಡಬೇ। ಅಂದು ಕೊಲೆಗಡಿಕರಿಗೆ ರಾಜನ ಕಟ್ಟಪ್ಪಣೆಯೇ ಆಗಿತ್ತು. ಈ ವಧಭೂಮಿಗೆ “ ನರಕ ೨೨ ಎಂದು ಹೆಸರಿಟ್ಟಿದ್ದನು, ಈ ಸ್ಥಾನದಲ್ಲಿ ನಿಜವಾಗಿಯೂ ಭಯಂಕರ ನರಕಯಾತನೆಯನ್ನು ಅನುಭವಿಸಬೇಕಾಗುತ್ತಿತ್ತು. ಈ ನರಕವು ಎಷ್ಟು ಜನ ನಿರಪರಾಧಿಗಳ ರಕ್ತದಿಂದ ತೊಯ್ಲಿ ತೆಂಬದರ ಇಯತ್ತೆಯೇ ಇಲ್ಲ. ಒಂದು ದಿವಸ ಬಾಲಪಂಡಿತಸಮುದ್ರನೆಂಬ ಒಬ್ಬ ಭಿಕ್ಷುವು • ನರಕ 'ದ ಅಪೂರ್ವ ಶಿಲ್ಪಕ್ಕೆ ಮರುಳಾಗಿ ತಿಳಿಯದೆ ಅದರಲ್ಲಿ ಪ್ರವೇಶಿಸಿದನು. ಕೂಡಲೆ ನೀಚತಮನಾದ ಚಂಡಗಿರಿಕನು ಅನುಚರರೊಡನೆ ಆ ಭಿಕ್ಷುವಿನ ಮೇಲೆ ಸಾಗಿಬಂದನು. ಸಂಸಾರವಾಸನಾ ವಿಮುಕ್ತನಾದ ಆ ಸನ್ಯಾಸಿಯನ್ನು ನೋಡಿ, ಆ ಕೊಲೆಗಡಿಕನು ೭ ದಿವಸಗಳಾದ ತರು ವಾಯ ನಿನ್ನನ್ನು ಕೊಲ್ಲುತ್ತೇನೆಂದು ಹೇಳಿ ಆತನಿಗೆ ೬ ದಿವಸಗಳ ಅವಧಿಯನ್ನು ಕೊಟ್ಟನು. ಅವಧಿಯು ಮುಗಿದ ಬಳಿಕ ಉರಿಯುವ ಅಗ್ನಿ ಕುಂಡದ ಮೇಲೆ ಇಟ್ಟ ಕೊಪ್ಪರಿಗೆಯಲ್ಲಿ ಆತನನ್ನು ಚಲ್ಲಿದನು. ಆಗ ಚಂಡಗಿರಿಕನು ಆಶ್ಚರ್ಯದಿಂದ ನೋಡು