ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೬೫ wwwxrwxrwxrwxrwxrwx ಮೇಲಿನ ವಿವರಣೆಯಿಂದ ಕಲಿಂಗರಾಜ್ಯವೂ ಅತಿಪ್ರಾಚೀನ ಪ್ರದೇಶವೆಂದು ಸ್ಪಷ್ಟ ವಾಗುವದು, ಹಿಂದು, ಬೌದ್ಧಗ್ರಂಥಗಳಲ್ಲಿ + ಹಲವೆಡೆಗಳಲ್ಲಿ ಇದರ ಉಲ್ಲೇಖವುಂಟು. ಕಲಿಂಗದೇಶದ ಧರ್ಮಾನುರಾಗ, ಶೌರ್ಯ, ಶಿಲ್ಪ, ವ್ಯಾಪಾರಗಳು ಒಂದಾನೊಂದು ಕಾಲ ದಲ್ಲಿ ಪ್ರಸಿದ್ಧವಿದ್ದವು, ಆದರೆ ಇದರ ಕಾಲಾನುಕ್ರಮವಾದ ಇತಿಹಾಸವು, ಇಲ್ಲವೆ ಇಲ್ಲಿಯ ರಾಜವಂಶದ ಇತಿಹಾಸವು ಎಲ್ಲಿಯೂ ಸಿಗುವದಿಲ್ಲ. ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಕಲಿಂಗದೇಶದ ರಾಜನಾದ ಶ್ರುತಾಯು ಎಂಬವನು ಕೌರವಪಕ್ಷದಿಂದ ಯುದ್ಧ ಮಾಡಿದ್ದನೆಂದೂ, ಅವನು ಶಕ್ರದೇವ ಮತ್ತು ಕೇತುಮಾನ್ ಎಂಬ ಇಬ್ಬರು ಮಕ್ಕ ಳೊಡನೆ ವೀರಶ್ರೇಷ್ಠನಾದ ಭೀಮಸೇನನ ಕೈಯಿಂದ ಹತನಾದನೆಂದೂ ಮಹಾಭಾರತ ದಲ್ಲಿ ಹೇಳಿದೆ. ಮಹಾವಂಶದಲ್ಲಿಯೂ ಕಲಿಂಗದ ಉಲ್ಲೇಖವುಂಟು, ಕಲಿಂಗರಾಜ ಕುಮಾರಿಯು * ವಂಗರಾಜನ ಪಟ್ಟದರಸಿಯಾಗಿದ್ದಳು. ಬುದ್ದದೇವನ ಪರಿನಿರ್ವಾಣದ ತರುವಾಯ ಕಲಿಂಗರಾಜನಾದ ಬ್ರಹ್ಮದತ್ತನು ಆತನ ಒಂದು ದಂತವನ್ನು ಹುಗಿದು ಅದರ ಮೇಲೆ ಒಂದು ದೊಡ್ಡ ಸ್ತಂಭವನ್ನು ಕಟ್ಟಿಸಿದ್ದನು. ಈ ಸ್ಥಾನವೇ ಮುಂದೆ ಕಲಿಂಗರಾಜಧಾನಿಯಾಗಿ ದಂತಪುರವೆಂದು ಕರೆಯಲ್ಪಟ್ಟಿತು. ಬುದ್ಧದೇವನ ಕಾಲದಲ್ಲಿ ಅತಿ ಸುಂದರವಾದ ಸೂಕ್ಷ್ಮವಸ್ತಗಳ ಕೈಗಾರಿಕೆಗಾಗಿ ಕಲಿಂಗವ ಪ್ರಸಿದ್ಧವಾಗಿತ್ತು. ಕ್ರಿ. ೭ನೆಯ ಶತಕದಲ್ಲಿ ಕಲಿಂಗದೇಶದ ಪ್ರಸಿದ್ದಿಯು ಬಹಳವಿತ್ತು, ನೂರಾರು ದೇವಾ ಲಯಗಳು ಆ ದೇಶವನ್ನಲಂಕರಿಸಿದ್ದವು. ಎಷ್ಟೋ ಸಂಘಾರಾಮಗಳೂx ಅಲ್ಲಿ ಇದ್ದವು. ಅವುಗಳಲ್ಲಿ ಐನೂರುಜನ ಬೌದ್ಧ ಭಿಕ್ಷುಗಳು ವಾಸವಾಗಿದ್ದರು. ಇದೇ ಕಾಲದಲ್ಲಿ ನಿಗ್ರ್ರಂಥಸಾಂಪ್ರದಾಯದ ಅಸಂಖ್ಯ ಜನರು ಅಲ್ಲಿ ವಾಸಿಸುತ್ತಿದ್ದರು. ಕಲಿಂಗವಿಜಯವು ಅಶೋಕಚಕ್ರವರ್ತಿಯ ಪೂರ್ವಾಪರಜೀವನಗಳಲ್ಲಿ ಪರಿವರ್ತ ನವನ್ನುಂಟುಮಾಡಿದ ಒಂದು ಅಪೂರ್ವಸಂಧಿಕಾಲವು, ಮನುಷ್ಯಜೀವಮಾನದಲ್ಲಿ ಇಂಥ ಒಂದು ಸಮಯವು ಬರುವದುಂಟು; ಆಗ ಒಂದು ಸಾಮಾನ್ಯ ಸಂಗತಿಯಿಂದ ಬಹುಕಾಲದ ಪ್ರಾಚೀನ ಸಂಸ್ಕಾರಗಳೆಲ್ಲ ಸ್ವಪ್ನದಂತೆ ಎಲ್ಲಿಯೋ ಅಡಗಿಹೋಗುವವು; ಮತ್ತು ಕೂಡಲೆ ಮನಸ್ಸಿನಲ್ಲಿ ಭಯಂಕರವಾದ ಕ್ರಾಂತಿಯುಂಟಾಗಿ ಒಂದು ಹೊಸ ಮಾರ್ಗದಲ್ಲಿ ಜೀವನಕ್ರಮವು ಆರಂಭವಾಗುವದು, ಮುಪ್ಪಿನ ಮುದುಕನನ್ನೂ ಹೆಣ ವನ್ನೂ ನಾವು ಯಾವಾಗಲೂ ನೋಡುತ್ತಿರಬಹುದು, ಮತ್ತು ಬೇನೆಯವರ ನರಳುವಿಕೆ ಯಿಂದ ಕ್ಷಣಕಾಲ ನಾವು ವ್ಯಸನಬಡುವದೂ ಉಂಟು. ಆದರೆ ಅದೇ ಮುಪ್ಪಿನ ಮುದುಕ ನನ್ನೂ, ಹೆಣವನ್ನೂ, ರೋಗಪೀಡಿತನನ್ನೂ ನೋಡಿ ರಾಜಪುತ್ರನಾದ ಶಾಕ್ಯಸಿಂಹನು + ವೇಶಾಂತರಜಾತಕ ಮೊದಲಾದ ಅತಿ ಪ್ರಾಚೀನ ಪಾಲೀ ಗ್ರಂಥದಲ್ಲಿಯೂ ಕಲಿಂಗದ ವರ್ಣನೆ ಯು೦ಟು.

  • ರಾಜಕುಮಾರಿ-ತಿಲಕ ಸುಂದರಿ, Cunningham. * Beal's Records of western world Vol II.