ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, wwwm ೯ನೆಯ ಅಧ್ಯಾಯ. +೨ ಅಶೋಕನು ಬೌದ್ಧ ಧರ್ಮದ ದೀಕ್ಷೆಯನ್ನು ಸ್ವೀಕರಿಸಿದುದು. - . ಕ) ಲಿಂಗ ಯುದ್ದದಲ್ಲಾದ ಅಸಂಖ್ಯ ಪ್ರಾಣಿವಧೆಯನ್ನು ನೋಡಿ ಅಶೋಕನ ನ ಹೃದಯವು ವ್ಯಥೆಬಟ್ಟಿ ತು. ಆತನ ಗಿರಿಲಿಪಿಗಳನ್ನೂ ಬೇರೆ ಬೇರೆ ಶಾಸನ (ಗಳನ್ನೂ ನೋಡಿದರೆ ಅವುಗಳ ಪ್ರತಿಪಂಕ್ತಿಯೂ, ಪ್ರತ್ಯಕ್ಷರವೂ ಕಣ್ಣೀರಿ \ ನಿಂದ ತೊಯ್ದ ಲೇಖಣಿಯಿಂದ ಬರೆದಂತೆ ಇರುವವು. ಅಶೋಕನು ಕಲಿಂಗ ಯುದ್ಧದಲ್ಲಿ ತನ್ನ ಕಣ್ಣಾರೆ ಆ ಭಯಂಕರ ದೃಶ್ಯವನ್ನು ನೋಡಿ ಪರರಾಜ್ಯಗಳನ್ನು ಜಯಿ ಸುವ ಇಚ್ಛೆಯನ್ನು ಪೂರ್ಣವಾಗಿ ಬಿಟ್ಟು ಬಿಟ್ಟನು, ಮತ್ತು ಪವಿತ್ರವಾದ ಧರ್ಮ ಸಾಮ್ರಾ ಜ್ಯವನ್ನು ಸ್ಥಾಪಿಸುವ ಸಂಕಲ್ಪ ಮಾಡಿದನು. ಜೀವನದ ಈ ಸಂಧಿಕಾಲದಲ್ಲಿ ಬೌದ್ಧಧರ್ಮ ವೆಂಬ ಚಂದ್ರನ ಶಾಂತೋಜ್ವಲಕಿರಣಗಳಿಂದ ಅಶೋಕನ ಹೃದಯಸಾಗರದಲ್ಲಿ ಭೂತ ದಯೆಯ ತೆರೆಗಳು ಮೇರೆದಪ್ಪಿ ಬರುತ್ತಿದ್ದವು. ಶಾಂತಿಮಯವಾದ ಧರ್ಮ ಸಾಮ್ರಾಜ್ಯವನ್ನು ಸ್ಥಾಪಿಸುವದೇ ನಿಜವಾದ ಗೆಲುವೆಂದು ಆತನು ತಿಳಿದನು. ಯಾವ ಧರ್ಮವನ್ನು ಪ್ರಚಾರ ಪಡಿಸುವದರಿಂದ ಲಕ್ಷಾವಧಿ ಪ್ರಾಣಿಗಳು ಸನ್ಮಾರ್ಗವನ್ನವಲಂಬಿಸುವವೋ, ದುಷ್ಟವಾದ ಮನೋವೃತ್ತಿಗಳು ಅಡಗಿ ಪರಮಶಾಂತಿಯು ಸುಗಮವಾಗುವದೋ, ಯಾವ ಧರ್ಮ ವನ್ನು ಪರಿಶೀಲಿಸುವದರಿಂದ ಹಿಂಸೆ, ದ್ವೇಷ ಮೊದಲಾದ ದುಃಖಜನಕವಾದ ಮನೋ ಭಾವನೆಗಳು ಬಯಲಾಗಿ ಮನುಷ್ಯನಿಗೆ ಮಾನವರೆಲ್ಲ ಪರಸ್ಪರಬಂಧುಗಳೆಂಬ ಭಾವನೆ ಯಾಗುವದೋ ಅಂಥ ಪವಿತ್ರಧರ್ಮವನ್ನು ಅಶೋಕನು ತಾನು ಮೊದಲು ಸ್ವೀಕರಿಸಿ ಬಳಿಕ ಜಗತ್ತಿನ ಎಲ್ಲ ನರನಾರಿಯರ ರಾಗದ್ವೇಷ ಮೋಹಾಂಧಕಾರದಿಂದ ವ್ಯಾಪ್ತವಾದ ಹೃದಯದಲ್ಲಿ ಅಹಿಂಸಾಮೂಲವಾದ ಆ ಧರ್ಮಜ್ಯೋತಿಯನ್ನು ಪಸರಿಸುವದರಲ್ಲಿ ಅತಿ ಶಯ ಉತ್ಸಾಹವುಳ್ಳವನಾದನು. ಕಲಿಂಗವಿಜಯವಾದೊಡನೆಯೆ ಅಶೋಕನಿಗೆ ಮೈತ್ರೀಧರ್ಮದಲ್ಲಿ ಅತಿಶಯ ಅನು ರಾಗವುಂಟಾಯಿತು, ಮತ್ತು ಉತ್ಸಾಹದಿಂದ ಅದನ್ನು ಪ್ರಚಾರಪಡಿಸಹತ್ತಿದನು. ಅಶೋ ಕನು ತನ್ನ ಒಂದು ಸಣ್ಣ ಗಿರಿಲಿಪಿಯಲ್ಲಿ f- ನಾನು ಎರಡುವರೆ ವರ್ಷ ಗೃಹಸ್ಥ-ಶಿಷ್ಯ ನಾಗಿ ಇದ್ದೆನು, ಆಗ ಧರ್ಮವೃದ್ಧಿಗಾಗಿ ಅಷ್ಟೊಂದು ಪ್ರಯಾಸಬಡಲಿಲ್ಲ. ಆದರೆ ಈ ಲಿಪಿಯನ್ನು ಪ್ರಚಾರಪಡಿಸುವ ಮೊದಲು ಸುಮಾರು ೧ ವರ್ಷದಿಂದ ನಾನು ಪವಿತ್ರವಾದ ಬೌದ್ಧ ಧರ್ಮದ ಆಶ್ರಯಮಾಡಿದೆನು, ಆ ವೇಳೆಯಿಂದ ಎಲ್ಲ ಮನುಷ್ಯಜಾತಿಯಲ್ಲಿ ಆ

  1. Minor Roek Ediet, ಕ್ಷುದ್ರಗಿರಿಲಿಪಿ, ರೂಪನಾಥ.