ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وف ಅಶೋಕ ಅಥವಾ ಪ್ರಿಯದರ್ಶಿ. vv ///// ಚಿಕ್ಕವನು ವರವ ಪಡೆದನು. ಇದನ್ನು ಕಂಡು ಅವರಿಬ್ಬರೂ ಪ್ರತ್ಯೇಕಬುದ್ಧನ ಬಳಿಯಲ್ಲಿ ತಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಂಡು ತಾವೂ ವರವನ್ನು ಬೇಡಿದರು, ಹಿರಿಯವನು ಮೋಕ್ಷವನ್ನು ಬೇಡಿದನು. ಬಳಿಕ ಪ್ರತ್ಯೇಕಬುದ್ಧನು ಸಂತೋ। ಷದಿಂದ ತಿರುಗಿ ಬರುತ್ತಿರುವಾಗ ಮೊದಲು ಮಾರ್ಗವನ್ನು ತೋರಿಸಿದ ತರುಣಿಯು ಆತ ನಿಂದ ಎಲ್ಲ ವರ್ತಮಾನವನ್ನು ಕೇಳಿಕೊಂಡಳು; ಮತ್ತು ಆ ವ್ಯಾಪಾರಿಯು ಯಾವಾಗ ಜಂಬೂದ್ವೀಪದ ಅಧಿಪತಿಯಾಗುವನೋ ಆಗ ತಾನು ಆತನ ಮುಖ್ಯ ಪಟ್ಟದ ರಾಣಿ ಯಾಗಬೇಕೆಂದೂ, ತನ್ನ ಸೌಂದರ್ಯದಲ್ಲಿ ಸ್ವಲ್ಪವೂ ಕುಂದುಕೊರತೆಗಳಿರಬಾರದೆಂದೂ ವರವನ್ನು ಬೇಡಿಕೊಂಡಳು. ಪ್ರತ್ಯೇಕಬುದ್ದನು ವರವನ್ನು ಕೊಟ್ಟು ಹೊರಟುಹೋ। ದನು. ಜೇನುತುಪ್ಪ ಮಾರುವವನು ಮುಂದಿನ ಜನ್ಮದಲ್ಲಿ ಮಗಧಾಧಿಪತಿ ಅಶೋಕನಾಗಿ ಹುಟ್ಟಿದನು. ಅಶೋಕನ ಮಹಿಷಿಯಾದ ಅಸಂಧಿಮಿತ್ರಿಯೇ ಆ ತರುಣಿಯು, ಹಿರಿಯ ಅಣ್ಣನು ಪ್ರತ್ಯೇಕಬುದ್ಧನನ್ನು ಚಂಡಾಲನೆಂದು ತಿರಸ್ಕರಿಸಿದ್ದರಿಂದ ಆತನು ಚಂಡಾಲರ ಆಶ್ರಯದಲ್ಲಿ ಜನ್ಮ ಹೊಂದಿ ನಿದ್ರೋಧನೆಂಬ ಹೆಸರಿನವನಾದನು, ಮತ್ತು ಮೋಕ್ಷದ ವರ ವನ್ನು ಬೇಡಿಕೊಂಡದ್ದರಿಂದ ಏಳೇ ವರ್ಷಗಳಲ್ಲಿ ಅರ್ಹತ್ಪದವನ್ನು ಹೊಂದಲು ಸಮರ್ಥ ನಾದನು, ನಡುವಿನವನು ಪ್ರತ್ಯೇಕಬುದ್ಧನನ್ನು ಸಮುದ್ರದಾಚೆಗೆ ಬಿಸುಟಬೇಕೆಂದು ಅಂದ ದರಿಂದ ಆತನು ಸಿಂಹಲಾಧಿಪತಿ ತಿಷ್ಯನಾದನು” ಈ ಕಥೆಯೆಲ್ಲ ಮುಂದಿನಕಾಲದ ಲೇಖಕರಿಂದ ಬರೆಯಲ್ಪಟ್ಟು ಪ್ರಚಲಿತವಾಗಿರುವದೆಂಬ ವಿಷಯದಲ್ಲಿ ಸಂಶಯವಿಲ್ಲ. ಏನೇ ಇರಲಿ, ಯಾವದರಿಂದ ಅಶೋಕಮಹಾರಾಜನ ಜೀವನದಲ್ಲಿಯೂ, ಚರಿತ್ರದಲ್ಲಿ ಯೂ, ರಾಜನೀತಿಯಲ್ಲಿಯೂ ಬದಲಾವಣೆಯುಂಟಾಯಿತೋ ಅದರ ನಿಜವಾದ ವಿವರ ಣವು ಎಲ್ಲಿಯೂ ದೊರೆಯುವದಿಲ್ಲ. ಅಶೋಕನ ತಂದೆಯಾದ ಬಿಂದುಸಾರನು ಹಿಂದು ಧರ್ಮದವನು. ೬೦ ಸಾವಿರ ಬ್ರಾಹ್ಮಣರು ಆತನ ಆಶ್ರಯದಲ್ಲಿದ್ದರು. ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸುವದಕ್ಕೆ ಮುಂಚೆ ಆತನೂ ಆ ಬ್ರಾಹ್ಮಣರಿಗೆ ಆಶ್ರಯ ಕೊಟ್ಟ ದೈನು, ಬೌದ್ಧ ಧರ್ಮವನ್ನು ಸ್ವೀಕರಿಸುವದಕ್ಕೆ ಮುಂಚೆ ಆತನು ಬೇಟೆಗೆ ಬಹಳವಾಗಿ ಮೆಚ್ಚಿದವನೂ, ಮಾಂಸಾಹಾರಿಯೂ ಆಗಿದ್ದನು. ಯುದ್ಧದಲ್ಲಿ ಗೆಲವು ಸಿಗಬೇಕೆಂದು ಕಲಿಂಗದೇಶವನ್ನು ಮುತ್ತಿದ್ದನು, ಆದರೆ ಕೊನೆಗೆ ಬೇಟೆಯ ಮೇಲಿನ ಪ್ರೀತಿಯೂ, ಜೀವಹಿಂಸಾಪ್ರವೃತ್ತಿಯೂ, ದೇಶವನ್ನು ಗೆಲ್ಲುವ ಆಕಾಂಕ್ಷೆಯೂ ಒಮ್ಮೆಲೆ ಹೇಗೆ ಇಲ್ಲ ದಂತಾದವು, ಜಗತ್ತಿನಲ್ಲಿ ಮೈತ್ರೀಧರ್ಮವನ್ನು ಪ್ರಚಾರಪಡಿಸುವ ಇಚ್ಛೆಯು ಹೇಗೆ ಉತ್ಪನ್ನವಾಯಿತು ಎಂಬ ಪ್ರಶ್ನೆಗಳಿಗೆ ಸಮಾಧಾನಕಾರಕವಾದ ಉತ್ತರಗಳು ದೊರೆಯುವ ದಿಲ್ಲ. ಯಾವನು ಯೌವನದ ಆರಂಭದಲ್ಲಿ ಅಸಾಧಾರಣವಾದ ಪರಾಕ್ರಮದಿಂದ ಭರತ ಖಂಡದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಿಜಯಪತಾಕೆಯನ್ನು ಮೆರೆ ಯಿಸುವದಕ್ಕೆ ಸಮರ್ಥನಾದನೋ ಅವನೇ ಮುಂದೆ ಅದನ್ನೆಲ್ಲ ಬಿಟ್ಟು ಧರ್ಮದ ಮಹಿ ಮೆಯನ್ನು ಜಗತ್ತಿನಲ್ಲಿ ಪ್ರಚಾರಗೊಳಿಸುವ ಕೆಲಸದಲ್ಲಿ ಯಾಕೆ ತೊಡಗಿದನೆಂಬ ಪ್ರಶ್ನಕ್ಕೆ