ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ 24 MMvvvvvvvvvvvvvvvvvvmM ಐತಿಹಾಸಿಕರು ಮೌನವನ್ನವಲಂಬಿಸಿರುವರು. ಈ ಬದಲಾವಣೆಯು ಒಬ್ಬ ಬಾಲಭಿಕ್ಷುವಿನ ಉಪದೇಶದಿಂದಾಗಲಿ, ಅಲೌಕಿಕ ಶಕ್ತಿಯುಳ್ಳ ಒಬ್ಬ ಭಿಕ್ಷುವಿನ ಪ್ರಭಾವವನ್ನು ನೋಡಿ ದ್ದರಿಂದಾಗಲಿ, ಬುದ್ದದೇವನ ಭವಿಷ್ಯವಾಣಿಯನ್ನು ಕೇಳಿದ್ದರಿಂದಾಗಲಿ, ಉಂಟಾಯಿ ತೆಂಬದು ವಿಚಾರಣೀಯವಾಗಿರುವದು, ಒಬ್ಬ ೭ ವರ್ಷದ ಬಾಲಸನ್ಯಾಸಿಯು ಧರ್ಮದ ತಾತ್ಪರ್ಯವನ್ನು ಚೆನ್ನಾಗಿ ಗ್ರಹಿಸಿ ಅರ್ಹತ್ಪದವನ್ನು ಹೊಂದಿದನೆಂಬದೂ, ಧರ್ಮೋಪ ದೇಶದಿಂದ ಅಶೋಕನಂಥ ರಾಜನು ಹೊಸ ಧರ್ಮವನ್ನು ಸ್ವೀಕರಿಸುವಂತೆ ಮಾಡಿದ ನೆಂಬದೂ ಎಷ್ಟು ಮಟ್ಟಿಗೆ ನಿಜವಿರುವದೆಂಬದನ್ನು ನಿರ್ಣಯಿಸುವದು ಕಠಿಣವಾಗಿರುವದು. - ಐತಿಹಾಸಿಕವಿಚಾರವೆಂಬ ಒರೆಗಲ್ಲಿಗೆ ಹಚ್ಚಿ ನೋಡಿದರೆ ಈ ತರದ ಕಥೆಗಳಿಗೆ ಏನೂ ಬೆಲೆಯಿಲ್ಲ. ಅಂಥ ಅಲೌಕಿಕವ್ಯಾಪಾರದಿಂದ ಅಶೋಕನ ಮನಸ್ಸು ಎಳೆಯಲ್ಪಟ್ಟಿ ದ್ದರೆ ಅವನು ಅದನ್ನು ಬಹುಶಃ ಶಿಲಾಲಿಪಿಗಳಲ್ಲಿ ಬರೆದಿಡುತ್ತಿದ್ದನು. ಇನ್ನು ಮಹಾವಂಶವು ಒಂದು ಪ್ರಸಿದ್ಧ ಐತಿಹಾಸಿಕಗ್ರಂಥವು. ಇದರ ಪ್ರಾಮಾಣ್ಯವು ಬೇರೆ ಗ್ರಂಥಗಳಿಗಿಂತ ಹೆಚ್ಚಾಗಿರುವದೆಂಬದನ್ನು ಎಲ್ಲ ಇತಿಹಾಸಜ್ಞರು ಒಪ್ಪುವರು, ವಿಶೇಷವಾಗಿ ಸಿಂಹಲದ ಭಿಕ್ಷುಗಳು ಪ್ರಯತ್ನಪೂರ್ವಕವಾಗಿ ಈ ಗ್ರಂಥವನ್ನು ಕಾದಿಡುತ್ತ ಬಂದಿರುವರು, ಮಹಾ ವಂಶದಲ್ಲಿ ಬೆಳೆಸಿ ಹೇಳಿದ ಅಲೌಕಿಕಸಂಗತಿಗಳು ಇದ್ದರೂ ಅವುಗಳಲ್ಲಿ ಕೆಲವು ಮಟ್ಟಿಗೆ ಸತ್ಯವು ಬೆರೆತುಕೊಂಡಿರುವದೆಂಬ ವಿಷಯದಲ್ಲಿ ಸಂಶಯವಿಲ್ಲ. ಶ್ರಮಣನಾದ ನಿದ್ರೋ ಧನು ೭ ವರ್ಷದವನಾಗಲಿ, ಇಲ್ಲವೆ ಆಗದಿರಲಿ ಆತನ ಉಪದೇಶವಾಣಿಯು ಅಶೋಕನ ಜೀವನದ ಮೇಲೆ ತನ್ನ ಕಾರ್ಯವನ್ನು ನಡೆಯಿಸಿತೆಂಬದನ್ನು ನಂಬಬಹುದಾಗಿದೆ. ಏನೇ ಇರಲಿ; ಅಶೋಕನು ಈ ವಿಷಯದಲ್ಲಿ ತಾನೇ ಏನಾದರೂ ಉಲ್ಲೇಖಿಸಿರುವನೋ ಎಂಬ ದನ್ನು ಈಗ ವಿಚಾರಿಸಬೇಕಾಗಿರುವದು, ೧೩ನೆಯ ಶಿಲಾಲಿಸಿಯನ್ನು ಓದಿನೋಡಿದರೆ ಕಲಿಂಗವಿಜಯದಲ್ಲಿ ಅಶೋಕನು ನೋಡಿದ ರೋಮಾಂಚಜನಕವಾದ ಶೋಚನೀಯ ಪ್ರಸಂಗದಿಂದಲೇ ಆತನು ಈ ಪವಿತ್ರಧರ್ಮವನ್ನು ಗ್ರಹಿಸಿದನೆಂದು ಗೊತ್ತಾಗುವದು. ಅವನು ಯಾವ ಉಪದೇಶಕನ ಉಲ್ಲೇಖವನೂ ಮಾಡಿಲ್ಲ. ಈ ಸಮಯದಲ್ಲಿ ಬೌದ್ಧ ಧರ್ಮವೂ, ಜೈನಧರ್ಮವೂ ನಾಲ್ಕೂ ದಿಕ್ಕಿಗೆ ಹಬ್ಬಿದ್ದವು, ಭಿಕ್ಷುಗಳು, ಆಜೀವ*ಕರು ಇವರ ಪವಿತ್ರಜೀವನಮಾರುತವು ಸುತ್ತಲೂ ನಿರ್ಮಲವಾದ ಸುಗಂಧವನ್ನು ಬೀರುತ್ತಿತ್ತು. ವಿಶೇಷವಾಗಿ ಈ ಕಾಲಕ್ಕೆ ಬೌದ್ಧ ಭಿಕ್ಷುಗಳು ಬುದ್ದದೇವನ ಪವಿತ್ರವಾದ ಮಹಿಮೆಯನ್ನೂ ಆತನ ಸಮಸ್ತ ಪ್ರಾಣಿವಿಷಯಕ ದಯಾ-ಪ್ರೇಮಗಳನ್ನೂ ಜನಸಾಮಾನ್ಯದಲ್ಲಿ ಪ್ರಚಾರ ಪಡಿಸುತ್ತಿದ್ದದರಿಂದ ಸಮಾಜವೆಲ್ಲ ಒಂದು ತರದ ದೈವಿಕಶಕ್ತಿಯಿಂದ ಸ್ಪೂರ್ತಿಗೊಳ್ಳುತ್ತಿತ್ತು. ಈ ಸಂಗತಿಗಳೆಲ್ಲ ಅಶೋಕನ ಮನಸ್ಸಿನಲ್ಲಿ ಬೌದ್ಧಧರ್ಮದ ಮಹಿಮೆಯನ್ನು ಮೂಡಿಸ ತೊಡಗಿರಬಾರದೇಕೆ ? ಕಲಿಂಗವಿಜಯವಾದ ತರುವಾಯ ಯಾವರೀತಿಯಿಂದಲೇ ಆಗಲಿ,

  • ಜೈನ ಸಂಪ್ರದಾಯದ ಸನ್ಯಾಸಿಗಳು.

10