ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ vvvvvvvvvv vvvvvvvvv vvvvwwwx ಕೇಳಿ ಅಲ್ಲಿ ನೆರೆದ ಭಿಕ್ಷುಸಮುದಾಯವೆಲ್ಲ ಆನಂದಸಾಗರದಲ್ಲಿ ಓಲಾಡಿತು, ಮೌದ್ದಲಿ ಪುತ್ರನಾದ ತಿಮ್ಮನು-ಮಹಾರಾಜರೆ, ಬುದ್ಧದೇವನ ಪರಿನಿರ್ವಾಣದ ತರುವಾಯ ಮಗಧಚಕ್ರವರ್ತಿಯಾದ ಅಜಾತಶತ್ರುವು ಆತನ ಶರೀರ * ಧಾತುಗಳನ್ನು ರಾಜಗೃಹ ದಲ್ಲಿ ಸಮಾಧಿಮಾಡಿ ಕಾದಿಟ್ಟಿರುವನು. ತಾವು ಕಟ್ಟಿಸಬೇಕೆಂದು ಸಂಕಲ್ಪ ಮಾಡಿದ ಚೈತ್ಯ ಗಳಲ್ಲಿ ಅವುಗಳ ಅಂಶಗಳನ್ನು ಸ್ಥಾಪಿಸಿದರೆ ಮಾನವಜಾತಿಯ ಕಲ್ಯಾಣವಾಗುವದು ಎಂದು ಹೇಳಿದನು. ಅಶೋಕನು ಮಹಾಸ್ಟವಿರನ ಅಪ್ಪಣೆಯನ್ನು ತಲೆವಾಗಿ ಸ್ವೀಕರಿಸಿ ಶರೀರಧಾತುಗಳನ್ನು ಹುಡುಕಿ ತರುವದಕ್ಕೋಸ್ಕರ ರಾಜಗೃಹಕ್ಕೆ ಜನರನ್ನು ಕಳುಹಿ ದನು, ಮತ್ತು ೮೪ ಸಾವಿರ ಚೈತ್ಯಗಳನ್ನು ಕಟ್ಟುವದಕ್ಕೆ ಶಿಲ್ಪಿಗಳಿಗೆ ಅಪ್ಪಣೆಯಿತ್ತನು. ಇತ್ತ ರಾಜಗೃಹದಲ್ಲಿ ಬುದ್ಧನ ಸಮಾಧಿಸ್ಥಳವನ್ನು ನಾವಧಾನವಾಗಿ ಹುಡುಕಿದರೂ ಎಲ್ಲ ಶ್ರಮವು ವ್ಯರ್ಥವಾಯಿತು. ಇತ್ತ ೮೪ ಸಾವಿರ ಚೈತ್ಯಗಳು ನಿರ್ಮಿಸಲ್ಪಟ್ಟವು. ಆದರೆ ಶರೀರಧಾತುಗಳು ಇನ್ನೂ ಸಿಗಲಿಲ್ಲ. ಬಳಿಕ ಅಶೋಕನು ಪಾಟಲಿಪುತ್ರದಲ್ಲಿ ಆನೆಯ ಮೇಲೆ ಸಹಸ್ರ ಸುವರ್ಣಮುದ್ರೆಗಳನ್ನು ಹೇರಿಸಿ ( ಯಾವನು ಅಜಾತಶತ್ರು ಚಕ್ರವರ್ತಿಯು ಸಮಾಧಿಮಾಡಿದ ಬುದ್ಧಶರೀರಧಾತುಗಳನ್ನು ಹುಡುಕಿಕೊಡುವನೋ ಇಲ್ಲವೆ ಅವುಗಳ ಸ್ಥಳವನ್ನು ತೋರಿಸುವನೋ ಅವನು ಈ ಪಾರಿತೋಷಿಕವನ್ನು ಹೊಂದುವನು. ” ಎಂದು ಡಂಗುರ ಹೊಡೆಯಿಸಿದನು. ೭ನೆಯ ದಿವಸ ಒಬ್ಬ ಭಿಕ್ಷುಣಿ ಯು ಆ ಆನೆಯನ್ನು ಮುಚ್ಚಿದಳು. ರಾಜಕೀಯ ಅಧಿಕಾರಿಗಳು ಅವಳನ್ನು ಸಮ್ಮಾನ ಪೂರ್ವಕವಾಗಿ ಅರಸನ ಬಳಿಗೆ ಕರೆದೊಯ್ದರು. ಆ ಭಿಕ್ಷುಣಿಯು ಮಹಾರಾಜರನ್ನು ಸಂಬೋಧಿಸಿ ಮಹಾರಾಜರೇ, ನಾನು ಆ ಪವಿತ್ರಸ್ಥಾನವನ್ನು ಬಲ್ಲೆನು; ಆ ಸ್ಥಾನವನ್ನು ಅಗೆಯಿಸಿ ತಾವು ಆ ಪವಿತ್ರಾಕ್ಸಿಗಳನ್ನು ಹೊರದೆಗೆಯಬಹುದು ಎಂದು ಹೇಳಿದಳು. ರಾಜನು ಆ ಕ್ಷಣಕ್ಕೆ ಆ ಭಿಕ್ಷುಣಿಯೊಡನೆ ಜನರನ್ನು ಕಳುಹಿದನು. ಬಳಿಕ ಶರೀರಾಸ್ಥಿಗಳು ದೊರೆತವೆಂಬ ಸುದ್ದಿಯು ಬರಲು ಕೇಳಿ ಅಶೋಕನಿಗೆ ಪರಮಾನಂದವಾಯಿತು, ಮತ್ತು ಎಲ್ಲ ಚೈತ್ಯಗಳಲ್ಲಿ ಅವುಗಳನ್ನು ಸಮವಾಗಿ ವಿಭಾಗಿಸಿ ಸ್ಥಾಪಿಸಿದನು. ಚೈತ್ಯಗಳ ಬಳಿ ಯಲ್ಲಿ ಜಲಾಶಯಗಳನ್ನು ಕಟ್ಟಿಸಿದನು. ಈ ೮೪ ನಾವಿರ ಚೈತ್ಯಗಳನ್ನೂ ವಾಪೀಕೂಪ ಗಳನ್ನೂ ಕಟ್ಟಿಸುವದು ಮುಗಿದ ಬಳಿಕ ಅವುಗಳನ್ನು ಲೋಕಕಲ್ಯಾಣಕ್ಕೋಸ್ಕರ ಅರ್ಪಣಮಾಡುವದಕ್ಕೆ ೭ ದಿವಸಗಳ ಒಂದು ಮಹೋತ್ಸವವನ್ನು + ಮಾಡಬೇಕೆಂದು

  1. ಅಸ್ಥಿ.

t ಮಹಾವಂಶದಲ್ಲಿ ಕೇವಲ ಚೈತ್ಯಗಳ ಉಲ್ಲೇಖವು ಮಾತ್ರ ಉಂಟು ಬಾನಿ, ಇಲ್ಲವೆ ಬೇರೆ ಜಲಾಶಯಗಳ ಉಲ್ಲೇಖವಿಲ್ಲ. ಆದರೆ ಬೇರೆ ವರ್ಣನೆಗಳಲ್ಲಿ ಬಾನಿ, ಮತ್ತು ಬೇರೆ ಜಲಾಶಯಗಳನ್ನು ಕಟ್ಟಿಸಿದ್ದರ ಉಲ್ಲೇಖವು ಕಂಡುಬರುವದು. ಮಹಾವಂಶದ ಮತದ೦ತೆ ಈ ಉತ್ಸವವು ೭ ದಿವಸಗಳ ವರೆಗೆ ಇತ್ತು, ಕೆಲವು ಕಡೆಯಲ್ಲಿ ಈ ಉತ್ಸವವು ೭ ತಿಂಗಳು ೭ ದಿವಸಗಳ ವರೆಗೆ ಇತ್ತೆಂದು ಹೇಳಿದೆ. ಮಹಾವಂಶದಲ್ಲಿ ಈ ಉತ್ಸವಕ್ಕೆ ದೀಪಾವಲೀ ಉತ್ಸವವೆಂದು ಹೇಳಿದೆ.