ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೋಳ ಅಥವಾ ಪ್ರಿಯದರ್ಶಿ ಕರ ಸ್ಮೃತಿಪಟದಲ್ಲಿ ಮನೋಹರವಾದ ಚಿತ್ರವನ್ನು ಮೂಡಿಸುವದು, ಸರ್ವೋತ್ಕೃಷ್ಟವಾದ ಈ ಸೌಂದರ್ಯದಲ್ಲಿ ನಡುನಡುವೆ ನೂರಾರು ನದಿಗಳ ಮಂಡಲನಾದವು ಪ್ರಾಕೃತಿಕ ಸೌಂದರ್ಯದ ಸಂಗೀತದಲ್ಲಿ ಮಿಶ್ರವಾಗಿ ಮಾನವಹೃದಯದಲ್ಲಿ ಭಾವತರಂಗಗಳ ಮೇಲೆ ಭಾವತರಂಗಗಳನ್ನುಂಟುಮಾಡುತ್ತಿರುವದು, ಸರ್ವಜನಮನೋಹರವಾದ ಭರತಖಂಡದ ಈ ಭಾವಪ್ರವಾಹವು ಬಹುಕಾಲದಿಂದ ಪ್ರವಹಿಸುತ್ತಿರುವದು, ಶಾಕೃಸಿಂಹನು ಆವಿರ್ಭವಿ ಸಲು ಸಮಗ್ರಭರತಖಂಡದಲ್ಲಿ ಧರ್ಮದ ಒಂದು ಆಂದೋಲನವು ಆರಂಭವಾಯಿತು ಸರ್ವಸಂಗತ್ಯಾಗಿಯೂ, ಉದಾಸೀನನೂ ಆದ ಆ ರಾಜಪುತ್ರನ ವೈರಾಗ್ಯಕಥೆಯಿಂದ ಎಲ್ಲರೂ ಬೆರಗುವಡೆದುಹೋದರು. ಆ ಮಹಾಪುರುಷನು ಪ್ರವರ್ತಿಸಿದ ಧರ್ಮದ ಸಂಕ್ಷಿ ವ್ಯ ಇತಿಹಾಸವು ಪಾಠಕರ ಅವಗತಿಗಾಗಿ ಕೆಳಗೆ ಬರೆಯಲ್ಪಡುವದು. ಉರುಬಿಲ್ವದ ಬೋಧಿದ್ರುಮದ ಕೆಳಗೆ ಶಾಕೃಸಿಂಹನು ಯಾವ ಮಹಾಸತ್ಯವನ್ನು ಕಂಡುಹಿಡಿದನೋ ಅದನ್ನು ಆತನು ೩೫ ವರ್ಷಕಾಲ ಭರತಖಂಡದಲ್ಲಿ ಮನೆಮನೆಗೆ ಹೋಗಿ ಪ್ರಚಾರಪಡಿಸಿದ ತರುವಾಯ ಕಾಶೀ ಕ್ಷೇತ್ರಕ್ಕೆ ಬಂದನು. ವೈಶಾಖಪೌರ್ಣಿ ಮೆಯ ಉಜ್ವಲಚಂದ್ರಕಿರಣಗಳಿಂದ ಕಂಗೊಳಿಸುವ ರಾತ್ರಿಯಲ್ಲಿ, ಕಾಶೀನಗರದ ಸಾಲ ವೃಕ್ಷಗಳ ಕುಂಜದಲ್ಲಿ ಜಗಜ್ಯೋತಿಯಾದ ಬುದ್ಧದೇವನು ಮಹಾಪರಿನಿರ್ವಾಣವನ್ನು ಹೊಂದಿದನು, ಅಸಂಖ್ಯ ಸಾಧುಗಳು, ಬ್ರಾಹ್ಮಣರು, ಕ್ಷತ್ರಿಯರು ವೈಶ್ಯರು, ಶೂದ್ರರು ಈ ಮಹಾಸಮಾಧಿಯ ದರ್ಶನಕ್ಕಾಗಿ ಕೂಡಿದ್ದರು. ಮಹಾಕಾಶ್ಯಪನೊಡನೆ ೭ ಲಕ್ಷ ಬೌದ್ಧ ಭಿಕ್ಷುಗಳು ಶೋಕವಿಹ್ವಲರಾಗಿ ಅಲ್ಲಿಗೆ ಬಂದಿದ್ದರೆಂದೂ, ಮಹಾಪರಿನಿರ್ವಾಣವಾದ ಬಳಿಕ ಬುದ್ಧ ಶಿಷ್ಯರು ಮಹಾಕಾಶ್ಯಪನನ್ನು ತಮ್ಮ ನಾಯಕನನ್ನಾಗಿ ಮಾಡಿಕೊಂಡ ರಂದೂ ಹೇಳಲ್ಪಟ್ಟಿದೆ. ಸ್ಥವಿರ-ಕಾಶ್ಯಪನು ಬುದ್ಧದೇವನ ಅತ್ಯಂತ ಪ್ರೀತಿಯ ಶಿಷ್ಯರ ಬ್ಲೊಬ್ಬನು. ಬುದ್ಧದೇವನು ತನ್ನ ಆ ಪ್ರೀತಿಯ ಶಿಷ್ಯನಿಗೆ ತಾನು ಧರಿಸಿದ ಗೈರಿಕವಸ್ತ್ರ ಗಳನ್ನು ಕೊಟ್ಟು ಶಿಷ್ಯರಲ್ಲಿ ಆತನಿಗೆ ಮುಖ್ಯತೆಯನ್ನುಂಟುಮಾಡಿದ್ದನು, ಮತ್ತು ಆತನಿಗೇ। ತನ್ನ ತರುವಾಯ ಧರ್ಮಪ್ರಸಾರಭಾರವನ್ನು ಅರ್ಪಿಸಿದ್ದನು. ಬುದ್ಧದೇವನು ದೇಹವಿಟ್ಟ ಬಳಿಕ ಆತನ ಅಂತ್ಯೇಷ್ಟಿಯನ್ನು ಮುಗಿಸಿ ಬುದ್ಧ ಶಿಷ್ಯರು ಆತನ ಭನ್ನಾಸ್ಥಿಗಳನ್ನು ಹಲವು ಸಳಗಳಿಗೆ ಕಳುಹಿಸಿಕೊಟ್ಟರು. ಮಹಾಕಾಚ್ಯ ಪನು ಗುರುವಿನ ಅಪ್ಪಣೆಯನ್ನು ಸ್ಮರಿಸಿ ತನ್ನ ಮೇಲೆ ದೊಡ್ಡ ಭಾರವಿರುವದೆಂಬದನ್ನು ಅರಿತುಕೊಂಡನು. ಯಾಕಂದರೆ ಬುದ್ಧದೇವನು ಆತನಿಗೆ ಬೌದ್ಧಧರ್ಮಪ್ರಸಾರಮಾಡುವ ಭಾರವನ್ನು ಒಪ್ಪಿಸಿಹೋಗಿದ್ದನು. ಶಾಕೃಸಿಂಹನು ಮಾಡಿದ ಅಮೃತಸಮಾನವಾದ ಉಪ ದೇಶಗಳು ಮುಂದಿನ ಕಾಲದಲ್ಲಿ ಮಾನವರ ಕಲ್ಯಾಣಕ್ಕಾಗಿ ಗ್ರಂಥರೂಪವಾಗಿ ಇರಬೇ ಕೆಂಬ ಉದ್ದೇಶದಿಂದ ಮಹಾಕಾಶ್ಯಪನು ಐನೂರುಜನ ವಾಸನಾರಹಿತರಾದ ಭಿಕ್ಷುಗ ಳಿಗೆ ಒಟ್ಟುಗೂಡುವದಕ್ಕೆ ಹೇಳಿಕಳುಹಿದನು. ಭಿಕ್ಷುಗಳೆಲ್ಲ ಒಟ್ಟುಗೂಡಿದ ಬಳಿಕ ಮಹಾ