ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. Morrow MIDMMMoommM ••••••••• ದಂತೆ ಮಾಡಬೇಕೆಂದು ಆಲೋಚಿಸಿ ಅವರು ನಾಗದಾಸಕನೆಂಬವನನ್ನು ಸಿಂಹಾಸನದಿಂದ ತಳಿ ಸುಸುನಾಗ ಎಂಬ ವಿಚಕ್ಷಣನಾದ ಮಂತ್ರಿಗೆ ರಾಜ್ಯವನ್ನು ಕೊಟ್ಟರು. ಆತನು ೧೮ ವರ್ಷ ರಾಜ್ಯವಾಳಿದನು. ಆತನ ತರುವಾಯ ಆತನ ಮಗನಾದ ಕಾಲಾಶೋಕನು ಮಗಧಸಿಂಹಾಸನವನ್ನೇರಿದನು. ಬುದ್ಧದೇವನ ಪರಿನಿರ್ವಾಣವಾದ ೧೦೦ ವರ್ಷಗಳ ತರುವಾಯ ಕಾಲಾಶೋಕನ ಆಳಿಕೆಯಲ್ಲಿ ಬೌದ್ಧಧರ್ಮದಲ್ಲಿ ಒಂದು ದೊಡ್ಡ ಕ್ರಾಂತಿ ಯುಂಟಾಯಿತು. ಅದೇನಂದರೆ, ಕಾಲಕ್ರಮದಿಂದ ಸಂಘದ ಕಠೋರವಾದ ನಿಯಮಗಳು .ಶಿಥಿಲವಾಗಲಾರಂಭಿಸಿದವು. ವೈಶಾಲೀನಗರದಲ್ಲಿ ಮಹಾವನವಿಹಾರದಲ್ಲಿ ಬಹು ಜನ ಭಿಕ್ಷುಗಳು ವಾಸಮಾಡುತ್ತಿದ್ದರು. ಅವರಲ್ಲಿ ಭಿಕ್ಷುಗಳ ಆಚಾರಕ್ಕೆ ಹೊರತಾದ M ಪದ್ದ * ಗಳು ನೆಲೆಗೊಂಡಿದ್ದವು, ಬೌದ್ಧ ಧರ್ಮಾವಲಂಬಿಗಳಾದ ವೃಜಿಗಳು ಈ ವೈಶಾಲೀಭಿಕ್ಷು ಗಳನ್ನು ನೋಡಿಕೊಂಡು ತಾವೂ ಈ ಹತ್ತು ಪ್ರಕಾರದ ವಸ್ತುಗಳ ನಿಷೇಧಾಜ್ಞೆಯನ್ನು ಉಪೇಕ್ಷಿಸತೊಡಗಿದರು. ಒಮ್ಮೆ ಕಾಕಂದಕ ಪುತ್ರನಾದ ಯಶನೆಂಬ ಪ್ರಸಿದ್ಧ ಭಿಕ್ಷುವು ವೈಶಾಲೀಭಿಕ್ಷುಗಳ ಈ ಉಚ್ಚಂಖಲಾಚರಣದ ಸುದ್ದಿಯನ್ನು ಕೇಳಿ ತೀರ್ಥಯಾತ್ರೆಯ ನವದಿಂದ ಮಹಾವನವಿಹಾರಕ್ಕೆ ಬಂದನು. ಅದೇ ಕಾಲಕ್ಕೆ ಒಂದು ದಿವಸ ಆ ವಿಹಾರದಲ್ಲಿ ಉಪೋಸಥ8 ಕ್ರಿಯೆಯನ್ನು ನೆರವೇರಿಸುವ ಕಾಲದಲ್ಲಿ ಭಿಕ್ಷುಗಳೂ ಬೇರೆ ಬೌದ್ಧರೂ

  • ಬುದ್ದದೇವನು ಪರಿನಿರ್ವಾಣಹೊಂದಿದ ೧೦೦ ವರ್ಷಗಳ ತರುವಾಯ ವೈಶಾಲಿಯ ಭಿಕ್ಷುಗಳು ಈ ಹತ್ತು ವಸ್ತುಗಳು ನಿಷಿದ್ಧವಾಗಿದ್ದರೂ ಭಿಕ್ಷುಗಳು ಉಪಯೋಗಿಸಬಹುದೆಂದು ಹೇಳಿದರು. ಅವು (೧) ಕೋಡಿನಲ್ಲಿ ಉಪ್ಪನ್ನು ತುಂಬಿಟ್ಟು ಬೇಕಾದಂತೆ ಉಪಯೋಗಿಸುತ್ತ ಹೋಗುವದು, (೨) ಮಧ್ಯಾ ಹ್ನವಾದ ಮೇಲೆ ಕೂಡ ನೆಳಲು ೨ ಬೊಟ್ಟು ಹೋಗುವವರೆಗಿನ ಕಾಲದಲ್ಲಿ ಊಟಮಾಡುವದು () ನಿಮಂತ್ರಿತರಾಗಿ ಪರಸ್ಥಳಕ್ಕೆ ಹೋಗುವಾಗ ಊಟ ಮಾಡಿ ಹೋಗುವದು, ( ೪) ಬೇರೆ ಬೇರೆ ವಿಹಾರಗಳಲ್ಲಿ ಭಿಕ್ಷುಗಳಿಗೆ ಒಂದೇ ಸ್ಥಳದಲ್ಲಿ ಉಪೋಸಥಮಾಡುವದಕ್ಕೆ ನಿರ್ಬಂಧಿಸುವದು, ( ೫ ) ಉಪೋಸಥ ಮೊದಲಾದ ಕರ್ಮವು ಮುಗಿದ ಬಳಿಕ ಉಪೋಸಥಕ್ಕೆ ಬರಲಸಮರ್ಥರಾದ ಭಿಕ್ಷುಗಳ ಸಲುವಾಗಿ ಪ್ರಾರ್ಥಿಸುವದು. (೬) ಆಚಾರ್ಯರೂ, ಉಪಾಧ್ಯಾಯರೂ ಮಾಡಿದ್ದು ಅನ್ಯಾಯವಾಗಿ ದ್ದರೂ ಅದನ್ನು ಪಾಲಿಸುವದು, (೭) ಸ್ವಾಭಾವಿಕ ಅವಸ್ಥೆಯನ್ನು ಬಿಟ್ಟ, ಇನ್ನೂ ಮೊಸರಿನ ಅವಸ್ಥೆಗೆ ಬಾರದ ಹಾಲನ್ನು ಯಾವನೊಬ್ಬ ಭಿಕ್ಷುವು ಊಟವಾದ ಬಳಿಕ ಬೇರೆ ಆಸನದಲ್ಲಿ ಕುಳಿತು ತೆಗೆದುಕೊಳ್ಳು ದದು, ( ೮ ) ಇನ್ನೂ ಮದ್ಯದ ಅವಸ್ಥೆಯನ್ನು ಹೊಂದದೆ, ಪಾರಿವಾಳದ ಕಾಲಿನಂತ ಬಣ್ಣ ಬ೦ದ ಅವ ಸ್ಥೆಯಲ್ಲಿ ಮದ್ಯವನ್ನು ಕುಡಿದರೆ ಭಿಕ್ಷುಗಳಿಗೆ ದೋಷವಿಲ್ಲ (೯) ಆಚ್ಛಾದನವುಳ್ಳ ಆಸನವನ್ನು ಉಪ ಯೋಗಿಸುವದು ( ೧೦) ಭಂಗಾರಬೆಳ್ಳಿಗಳ ನಾಣ್ಯಗಳನ್ನು ಭಿಕ್ಷುಗಳು ಉಪಯೋಗಿಸಿಕೊಳ್ಳುವದು,

& ಉಪೋಸಥ ( ಸಂಸ್ಕೃತ-ಉಪವಾಸಾಧ) ಪೌರ್ಣಿಮೆ, ಅಮಾವಾಸ್ಯ, ಚತುರ್ದಶಿ, ಶುಕ್ಲ ಕೃಷ್ಟ ಅಷ್ಟಮಿ ತಿಥಿಗಳು ಉಪೋಸಥ ದಿವಸಗಳು, ಇವುಗಳಲ್ಲಿ ಪೌರ್ಣಿಮೆ, ಅಮಾವಾಸೆ , ಚತುರ್ದಶಿ ತಿಥಿಗಳಲ್ಲಿ ಭಿಕ್ಷುಗಳು ಯಾವದೊ೦ದು ವಿಹಾರದಲ್ಲಿ ಒಟ್ಟುಗೂಡುವರು, ಅಲ್ಲಿ ಒಬ್ಬ ಸ್ಥವಿರಭಿಕ್ಷುವನ್ನು ಸಭಾಪತಿಯನ್ನು ಮಾಡಿಕೊಂಡು ಪ್ರಾತಿಮೋಕ್ಷವನ್ನು ಓದುವರು, ಮತ್ತು ಕಳೆದ ೧೫ ದಿವಸಗಳಲ್ಲಿ ಮಾಡಿದ ಅಪರಾಧಗಳನ್ನು ಒಪ್ಪಿ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವರು. ಇವುಗಳಲ್ಲಿ ಅನಿ ತಿಥಿಯು ಕೇವಲ ಗೃಹಸ್ಥರ ಪುಣ್ಯಾನುಷ್ಠಾನಕ್ಕಾಗಿ ಗೊತ್ತುಮಾಡಲ್ಪಟ್ಟಿತ್ತು.