ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ'೬) ಸೋಮನಾಥಚರಿತ್ರ. ೧೫ ತತ್ತ ಕಾಳಗದ ಸೂಚನೆಯ ಸನ್ನೆಗೆ ರಭಸ | ವೆತ್ತ ಭೇರೀರವವ ಕೇಳು ಶಿವಶಿವ ಭೂಮಿ | ಹೆತ್ತುದೋ ನಭವೀದುದೋ ದೆಸಗಳುಗುಳುವೋ ಭವನವೇಂತಾನಾದು ಬಿತ್ತರಿಸಲರಿದೆನಲು ನೆರೆಯಿತ್ತು ಗಣಿ ಸತಿಯ | (ದೋ || ನೆತ್ತಿ ಕೊರಳೊಳು ಮುಳುಗಲಾದಿಕೂರ್ಮನ ಬೆನ್ನು ! ಹತ್ತಿ ಬಸುರೆಡೆಯ ಪುಗೆ ಹಸ್ತಶರಥಪದಾತಿಗಳು ಕಣ್ಣ ದ್ದು ತದಲೀ |೪|| ಸೇನೆ ನೆರೆಯಿತ್ತು ರಿಪುಕುಮುದಮಾರ್ತಾಂಡ ಪು | ಜ್ಞಾನೂನತಂಡ ಬಲಭರಿತದೋರ್ದಂಡ ಭೂ || ಮಾನಿನಿಯ ಗಂಡ ವಿಜಯಾಂಗನೆಯ ಮಿಂಡ ರಣರಂಗಮುಖಕಾಲದಂಡ | ದಾನಿ ! ಚಿತ್ರ ಸೆಂಬ ಭಟರ್ಗೆ ಹೊಸಪಸೆಯಲಾ | ದಾನಮುಂ ಕೊಟ್ಟು ಸಭೆಯಿಂದೆದ್ದು ನಡೆತಂದು | ನಾನಾವಿಧದ ಲಗ್ಗೆ ವರಿಯ ಸೌರಂಭದಿಂ ಗರುಡಿಯಂ ಪೂಜಿಸಿದನು || ೫ | ರಾಶಿಗಳಂ ಸುರಿದು ರಾಜರಾವುತರು ಸಹಿ | ತಾಸುರದೊಳುಂಡು ಕಂಕಣ ಕಟ್ಟ ಯತಿಬಲರ ! ಭಾಷೆಯಂ ಬರೆಸಿ ವೀಳಯವಿತ್ತು ಪುಣ್ಣಸತಿಯರು ಕೈನೆಗಮಿನೀಡುವಾ || ' ಸೂಸುವರಕೆಯನು ನಿಜಭುಜಪೂಜೆಯನು ವೀರ | ಸೇಸಯನು ವಿಜಯಾರತಿಯನು ಕೈಕೊಂಡು ಧರ || ದೇಶ ಬಾಹಪ್ಪಳಿಸಿ ಬೊಬ್ಬೆಯಬ್ಬರದೊಳಗೆ ಹೊರವಂಟಿನರಮನೆಯನೂ || ೬ || ತಳತ ಬೆಳುಗೊಡೆಯ ತುರುಗಿದ ಹೀಲಿದಳೆಯ ಮಂ || ಡಳಸಿದಣಕುಗಳ ತಂಪಿನೊಳೊಲೆವ ಚಾಮರಂ || ಗಳ ಸೀಗುರಿಗಳ ತಂಗಾಳಿಯಿಂ ಕೋಪಾಗ್ನಿಕೊಬ್ಬಿ ಕೊನೆವರಿವುತಿರಲು || ಬಳಿಯ ಪಾಯವಧಾರುಎನಲು ಗಜಮಸ್ತಕದೊ | ಆಳವಟ್ಟು ಕೈವೀಸ ಭೋರೆಂಬ ಬಗ್ಗೆ ವರೆ | ಗಳ ಬೊಬ್ಬೆಯಬ್ಬರಂಗಳೊಳು ಚಂದ್ರಾದಿತ್ಯ ಮುತ್ತಿದ ಶಿವಾಲಯವನೂ ||೬||