rii ಶ್ರೀ ಸೋಮೇಶ್ವರ ದೇವರಿಗೆ ಮಾತ್ರ, ಆನೆ, ಕುದುರೆ, ಧ್ವಜ ಶತಕಗಳು ಸಲ್ಲ ತಕ್ಕದ್ದೆಂಬ ಬಗ್ಗೆ ಜೈನ ರು ಜಯಪತ್ರವನ್ನು ಬರಕೊಟ್ಟರು ಅಂತಾ ಲಕ್ಷೇಶ್ವರದ ಶಾಸನಗಳಿಂದ ತಿಳಿಯುತ್ತದೆ. ದೇವಗಿರಿಯ ಯಾದವರ ನಂತರ ಈ ಹುಲಿಗೆರೆಯನಾಡು ಮುಸಲ್ಮಾನರ ಆಳಿಕೆಗೆ ಸೇರಿ ಮುಂದೆ ಸವಣ, ಶ್ರೀರಂಗಪಟ್ಟಣದ ಮುತ್ತಿಗೆಯಲ್ಲಿ ಹೈದರ ಅಲ್ಲಿಯ ಸಂಗಡ ಯುದ್ದ ಮಾಡಿ ಜಯವನ್ನು ಹೊಂದಿದ ವಿರಜಕಿಲ್ಲೇದಾರರಾದ ಗೋವಿಂದತರಿ ಪಟವರ್ಧನರಿಗೆ ಸವಣೂರ, ಬಂಕಾಪೂರ ಮೊದಲಾದ ೨೫೦೦೦೦೦ ರು, ಸರಂಜಾಮವನ್ನು ಪುಣೆಯ ಬಾಳಾಜಿ ಬಾಜೀರಾವ ಪೇಶ್ಯಾನು ಹಾಕಿಕೊಟ್ಟನು, ಅವು ಸತಾರು ಒಪ್ಪಂದದಮೇರೆಗೆ ಈಗಿನ ಬ್ರಿಟಿಶ್ ಹುಯನ್ನು ಹೊತುಳಪಡಿಸಿ ಲಕ್ಷಶ್ವರ ಮೊದಲಾದ ಸಂಣಪುಟ್ಟ ಸಂಸ್ಥಾನಗಳು ಈಗಲೂ ಪಟವರ್ಧನ ಮನೆತನಗಳಿಗೆ ನಡಿಯುತ್ತಿದ್ದು ಮಿರಜ ಕಿಲ್ಲೇದಾರರಾದ ಶ್ರೀಮಂತಬಾಳಾಸಾಹೇಬ ಸರಕಾರದಿಂದ ಶ್ರೀ ಸೋಮನಾಥ ದೇವರಿಗೆ ಇನಾಮುಗಳು ಒರ್ಷಾಸನಗಳು ಈಗಲೂ ನಡೆಯುತ್ತವೆ. ಈ ಪುಣ್ಯಕ್ಷೇತ್ರವನ್ನು ಕಣ್ಣಾರೆ ಕಂಡು ನನ್ನ ಜಿಜ್ಞಾಸೆಯನ್ನು ತೃಪ್ತಿಗೊಳಿಸ ಬೇಕೆಂಬ ಕಕ್ಕುಲಿತೆಯಿಂದ ಲಕ್ಷ್ಮೀಶ್ವರಕ್ಕೆ ಹೋಗಲು ರಾ, ರಾ, ತಟ್ಟಿ ದೊಡ್ಡ ಬಸ ಸ್ಪನವರು ತಮ್ಮ ಶ್ರೀ ಸೋಮೇಶಸೇವಾನಿರತರಾದ ರಾ. ರಾ. ಬಾಳಪ್ಪಾ ಜಿವಪ್ಪಾ ವಕೀಲ ಮೊದಲಾದ ನಾಗರೀಕತೆಯನ್ನು ಹೊಂದಿದೆ ಮತ್ತು ಸಮಾಜ ೦ಾರ್ಯನಿರ ತರಾದ ಸದ್ಧತಸ್ಸರನ್ನು ಕೂಡಿಕೊಂಡು ಅಂದವಾದ ದೇವನಿಕೇತನವನ್ನು ತೋರಿಸಿ, ಶಾಸನಗಳ ಒಕ್ಕಣೆಯನ್ನು ಕರ್ಣಾಕರ್ಣಿಕೆಯಿಂದ ಬಂದ ಐತಿಹ್ಯವನ್ನು , ಮತ್ತು ತದ ನುಸಾರವಾಗಿರುವ ಪ್ರತ್ಯಕ್ಷ ಕುರುಹುಗಳನ್ನು ವಿಶದವಾಗಿ ವಿವರಿಸಲು, ಕೋಟಿಸೂರ್ಯ ಪ್ರಭಾವದೋಪಾದಿಯಲ್ಲಿರುವ ಈ ದೇವಾಲಯದಲ್ಲಿ ವ್ಯಕ್ತವಾಗುವ ಶಾಂತವಾದ ತೇಜ ಸ್ಸಿನಿಂದ ಭಕ್ತಿಶ್ರದ್ಧಾನಂದಗಳುದ್ಭವಿಸಿ ಒಂದುವರೆ ನಿಮಿಷ ನನ್ನ ಮನಸ್ಸು ಕೇವಲ ಸೌಮ್ಯಾವಸ್ಥೆಯಲ್ಲಿ ಉಳಿದಂತಾಯಿತು. ವೃಷಭಾರೂಢನಾದ ಶ್ರೀ ಸೋಮೇಶನ ದರು ಶನ ತಕ್ಕೊಂಡು ಶ್ರೀ ಆದಯ್ಯಗಳು ಐಕ್ಯವಾದ ಲಿಂಗವು ಗರ್ಭಗುಡಿಯ ಒಳಬಾಗಿ ಲದ ಬಲಕ್ಕೆ ನಿಲ್ಲಿಸಿದ್ದು, ಪುರಾಣದಲ್ಲಿ ಉಕ್ತವಾದ ಯಾವತ್ತು ಸಂಗತಿಗಳ ಕುರುಕು ಗಳನ್ನು ಉತ್ತು ಮಾಡಿಕೊಂಡೆನು. ಖಡ್ಗ ತೀರ್ಧವನ್ನು ಮಾತ್ರ ಸ್ಥಳಸಂಕೋಚದ ಮೂಲಕ ಸರಕಾರದವರು ೨೦-೩೦ ವರ್ಷದ ಕೆಳಗೆ ಹೂಳಿಬಿಟ್ಟಿರುತ್ತಾರೆ. ಚೈತ್ರ ಶು, ೧೪ ದಿವಸ ನಿಲಿಸಲ್ಪಟ್ಟ ಶ್ರೀ ಸೋಮೇಶನ ಪಲ್ಲಕ್ಕಿಯನ್ನು ಮಾರನೇ ( ದವನದ ಹುಣ್ಣಿವಿ) ದಿವಸ ದವನ ಮುಡಿಯುವದರ ಸಲುವಾಗಿ ಅತಿಸಂಭ್ರಮದಿಂದ ಯಾವದಾ ದರೊಂದು ತೀರ್ಥಕ್ಕೆ ಈಗಲೂ ಒಯ್ಯತಕ್ಕ ಸಾಂಪ್ರದಾಯವಿದ್ದು , ವೈಶಾಖ ಶು| ೧೦ ದಿವಸ ದೊಡ್ಡ ಜಾತ್ರೆ ಕೂಡಿ ರಥೋತ್ಸವವಾಗುತ್ತದೆ.
ಪುಟ:ಆದಿಶೆಟ್ಟಿಪುರಾಣವು.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.