ವೇ, ಬಿ, ಬಸವಾರಾಧ್ಯರುಗಳು ತಾವು ಮೊದಲೇ ಅಚ್ಚು ಹಾಕಿಸಲು ತಯಾರು ಮಾಡಿದ ಸಾಹಿತ್ಯವನ್ನು ಕೇವಲ ಹೆಸರುವಾಸಿಗಳಾಗಬೇಕೆಂದು ನಿರಪೇಕ್ಷ ಬುದ್ದಿ ಯಿಂದ ನನ್ನ ಮುಂದಿಟ್ಟು, “ ಗ್ರಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚ ರೇತ್ ” ಎಂಬ ಸದ್ರೋಧಸುಧೆಯನ್ನು, ನಿನ್ನ ಹೃತ್ಪಟಲದ ಮೇಲೆ ಇರಿಸಿಕೊಂಡು ಈ ಜಗತೀವಲಯದಲ್ಲಿ ಸಕ್ಕೀರ್ತಿಯನ್ನು ಪಡೆ ಎಂದು ಹರಿಸಿ ನನ್ನನ್ನು ಕೃತಕೃತ್ಯ ನನ್ನಾಗಿ ಮಾಡಿದುದಕ್ಕೆ, ಈ ಮಹನೀಯರು ಡೆಪ್ಪಿ ರಿಜಿಸ್ಟ್ರಾರ್ ಹಾಗೂ, ಆಲ್ಬಂ ಗ್ ಕಮಿಷನರ್ ಮತ್ತು ಫಸ್ಕಾ ಸ್ ಮಾಜಿಸೆ ಟ್, ಮೊದಲಾದ ಜವಾಬ್ದಾರಿ ಯ ಕೆಲಸಗಳಲ್ಲಿ ತೊಡಿ ಕಿರುವಂಥ ತಮ್ಮ ಅಮೌಲ್ಯವಾದ ವೇಳೆಯನ್ನು ಈ ಸತ್ಯಾ ಗ್ಯಕ್ಕೆ ಖರ್ಚು ಮಾಡಿದ್ದಕ್ಕಾಗಿ ಅವರಿಗೆ ಜಗದೀಶನು ಉತ್ತರೋತ್ತರ ಆಯುರಾ .ರೋಗ್ಯ ಧನಸಂಪದವನ್ನಿಯಲೆಂದು ಬೇಡಿಕೊಂಡು, ಈ ಯಾವತ್ತೂ ಕಾರ್ಯದಲ್ಲಿ ನೆರವಾದ ಸದ್ಧಹಸ್ಥರನ್ನೂ ಮತ್ತು ನಾನು ಒ೦ದೇ ಪ್ರತಿಯನ್ನು ಇಟ್ಟು ಕೊಂಡು ಮುಂದುಗಾಣದಿರುವ ಸಮಯದಲ್ಲಿ ಮಾರ್ಗದರ್ಶಕರಾದ ಮತ್ತು ಕನ್ನಡ ಮೇಘ ದೂತಕಾವ್ಯವನ್ನು ರಚಿಸಿದವರಾದ ರಾ, ಸಾ, ಮಲ್ಲಿಕಾರ್ಜುನ, ಶಿವಲಿಂಗಪ್ಪ ರೈನಾ ಪೂರ್, ಬಿ.ಎ. ರೆವಿನ್ಯೂ ಡಿಪಾರ್ಟ್ ಮೆಂಟ್ ಜಿಲ್ಲಾ ಬೆಳಗಾಂವ ಇವರನ್ನು ಪುನಃಪು ನಃ ನೆನಿಸಿ, ಸಕಲ ವೀರಶೈವ ಜ್ಞಾತಿಬಾಂಧವರಿಂದ ಪ್ರೋತ್ಸಾಹನೆಯುಂಟಾಗಿ ನನ್ನಿಂದ ಇಂಥ ಸಮಾಜಕಾರಂಗಳು ಪುನಃ ಪುನಃ ಸಂಘಟಿಸಲೆಂದು ಶ್ರೀ ಪುಲಿಕರವು ರಾಧೀಶ ಸೋಮೇಶನನ್ನು ತ್ರಿಕರಣಪೂರ್ವಕವಾಗಿ ಬೇಡಿಕೊಂಡು ಈ ಲೇಖನವನ್ನು ಮುಗಿಸುತ್ತೇನೆ. ಬೆಂಗಳೂರು, ) ಜೋತಪ್ಪ ಗವುಡರು, ಶಿದ್ದ ನಗವುಡರು, ವತನದಾರ ಪಾಟೀಲ, ೨೦ ಆಗಸ್ಟ್ ೧೯೧೧. | ಸಾ, ಯಹಡಲಗಿ ತಾಲ್ಲೂಕು ಅಧಣಿ, ಜಿಲ್ಲಾ ಬೆಳಗಾಂವ.
ಪುಟ:ಆದಿಶೆಟ್ಟಿಪುರಾಣವು.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.