೨೬ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ಕಮನಕಲ್ಪ ದು ಮಕ ಕಲ್ಪಲತೆಯಂ ಕೂಡಿ | ಸಮನೋಜಮಿತ್ರನಂತಾದಿವಯ್ಯಂಗೆ ನೆರೆ | ಸುಮುಹೂರ್ತ ಸುದಿನಂ ಸುತಾರ ಸುಗ್ರಹಸುಕರಣಂ ಸುಯೋಗಂಗಳಲ್ಲಿ! ಸಮಕುಲಂ ಸಮರೂಪು ಸಮಬಲ ಸಮಪ್ರಾಯ ! ಸಮರೀತಿ ಸಮಧಾತು ಸಮಶೀಲ ಸಮಗುಣಂ | ಸಮವಾದ ಕನ್ನೆಯಂ ಮದುವೆಯಂ ಮಾಡಿದರು ನೆರೆ ಮಹೋತ್ಸವದಿಂದಲೀ || ೯೩ || ಹರದಿಕೆಯ ಹರಿಬಕ್ಕೆ ಮಂನಣೆಯ ಮೊದಲಿಂಗೆ | ಗರುವಿಕೆಯ ಗತಿಗೆ ಪಟ್ಟಣಸಾಮಿಕೆಯ ಪದಕೆ | ನೆರೆದು ಪಟ್ಟಂಗಟ್ಟಿ ಹಲರು ಕಾಣಿಕೆಗೆಟ್ಟು ನುಡಿಯ ಚೀಲಂಗಟ್ಟ ಸೀ ! ವೊರೆಯಾಣಿ ಕೇಣಿ ನೋಟಂ ತೂಕ ಬಡ್ಡಿಯೂ | ವರಿಯುಭೆಯವಟ್ಟಹಿಡಿಹತೆಗನ್ನಗತಕಭಾ ! ಸುರರತ್ನದ ಪರೀಕ್ಷೆಗಳೊಳು ಪರಿಣತನ ಮಾಡಿದನಯ್ಯನಾದನಾ || Fur || ಸುರತರುವಿನಗೆಯಂತೆ ತರುಣಶಶಿಯಂತೆ ಬಲ | ಧುರಕುಸುಮಸರದಂತೆ ಬೆಳುದಿಂಗಳಂತೆ ತಂ : ಬೆರಲಂತೆ ನಳನಳಿಸಿ ಕಳೆಯೇರಿ ಮೋಹಿಸಿ ನಯಂಬಡೆದು ರಂಜಿಸುತ್ತಾ || ಪುರಜನಂ ಹರಸಿ ಹಾರೈಸೆ ತಂದೆಯ ಸಕಲ | ಭರಭಾರಮಂ ತಳೆದು ಮನವಾರ್ತೆಗತಿಧುರಂ || ಧರನಾಗಿ ಸುಖದೊಳಾದಯ್ಯನಿರ್ದಾ ಸೋಮನಾಥನಂ ಪೂಜಿಸುತ್ತಾ ||೯೯|| ಹತ್ತೇ ದುಕಾಲ ಹದುಳರುತಿರಲು ಶೂಲಿ ಬೆಸ | ನಿತ್ಯ ವಧಿದಿನ ಹತ್ತೆ ಬರ ಸಾರ್ವ ಪದದೊಳನಿ || ಮಿತ್ತ ಮನವತ್ತಿಕ್ಕಿ ವಿಪುಳತರಲಾಭಕ್ಕೆ ಮನವೆಳಸಿ ಹೇರುಗಳಲೀ || ( ಮುತ್ತು ಮಾಣಿಕವೆರಸಿ ಹೋಹೆನಾಂ ತೆಂಕನಾ || ಡ, ಬಣಜಿಸಿ ಧನಂಬಡೆದು ಬಂದಪೆನೆಂದು | ಹೆತ್ತ ತಾಯ್ತಂದೆಗಳಿಗೊಂದುದಿನ ಹಗಲೊಳೇಕಾಂತದಿಂಬಿಸಲೂ | ||೧೦gl
ಪುಟ:ಆದಿಶೆಟ್ಟಿಪುರಾಣವು.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.