ಈ ಪುಟವನ್ನು ಪರಿಶೀಲಿಸಲಾಗಿದೆ

 -38- ಆ 11 ನಾಭಿಯೇ ಮೂಲಸ್ಥಾನವಾಗಿರುವ ಸಿರಾಧಮನಿಗಳು ಇಡೀ ಶರೀರವನ್ನು ವ್ಯಾಪಿಸಿ ನಿಂತು, ವಾಯುವಿನ ಸಹಾಯದಿಂದ ಶರೀರವನ್ನು ಸರ್ವ ಧಾತುಗಳಿಂದ ಪೋಷಿಸುತ್ತವೆ. ಷರಾ ಮುಂದಿನ ಸಂ 108 ನೋಡು

92. ಬೆಳಿಕೆಯಿಲ್ಲದ ಅಂಗಗಳು (ದೃಷ್ಟಿ ಮತ್ತು ರೋಮಕೂಪ):

ದೃಷ್ಟಿಶ್ಚ ರೋಮಕೂಪಾಶ್ಚ ನ ವರ್ಧಂತೇ ಕದಾಚನ | ಧ್ರುವಾಣ್ಯೇತಾನಿ ಮರ್ತ್ಯಾನಾಮಿತಿ ಧನ್ವಂತರೇರ್ಮತಂ ||(ಸು.324.) 

ಮನುಷ್ಯರ ದೃಷ್ಟಿಯೂ, ರೋಮಕೂಪಗಳೂ ಯಾವಾಗಲಾದರೂ ವೃದ್ಧಿ ಹೊಂದುವದಿಲ್ಲ, ಇವು ಸ್ಥಿರವಾದವು, ಎಂತ ಧನ್ವಂತರಿಯ ಮತವಾಗಿರುತ್ತದೆ.

93. ನಾಭಿಯ ಸ್ಥಾನ: ಪಕ್ವಾಮಾಶಯಯೋರ್ಮಧ್ಯೇ ಸಿರಾಪ್ರಭವಾ ನಾಭಿರ್ನಾಮ | (ಸು. 341.) ಪಕ್ವಾಶಯಕ್ಕೂ ಆಮಾಶಯಕ್ಕೂ ಮಧ್ಯದಲ್ಲಿ ಇರುವ ಸಿರಾನಾಳಗಳ ಮೂಲವು ನಾಭಿ (ಹೊಕ್ಕುಳು) ಎಂಬ ಹೆಸರಿನದು.

94. ಮರ್ಮಗಳ ಸಾಮಾನ್ಯ ಲಕ್ಷಣ : ಮರ್ಮಾಣಿ ನಾಮ ಮಾಂಸಸಿರಾಸ್ನಾಯ್ವಸ್ಥಿಸಂಧಿಸನ್ನಿ ಪಾತಾಸ್ತೇಷು ಸ್ವಭಾವತ ಏವ ವಿಶೇಷೇಣ ಪ್ರಾಣಾಸ್ತಿಷ್ಠಂತಿ | (ಸು. 338.)

ಮಾಂಸಖಂಡ, ಸಿರಾನಾಳ, ನರ, ಎಲುಬು, ಸಂದು, ಇವು ಒಟ್ಟಾಗಿರುವ ಸ್ಥಾನಗಳು ಮರ್ಮಗಳೆನ್ನಿಸಿಕೊಳ್ಳುತ್ತವೆ. ಅಲ್ಲಿ ಸ್ವಾಭಾವಿಕವಾಗಿಯೇ ಪ್ರಾಣಗಳು ಮುಖ್ಯವಾಗಿ ನಿಂತಿರುತ್ತವೆ.

95.ಮರ್ಮಗಳ ಸಂಖ್ಯೆ ಮತ್ತು ವಿಭಾಗಗಳು:

ಸಪ್ರೊತ್ತರಂ ಮರ್ಮ ಶತಂ | ತಾನಿ ಮರ್ಮಾಣಿ ಪಂಚಾತ್ಮಕಾನಿ |ತದ್ಯಧಾ | ಮಾಂಸಮರ್ಮಾಣಿ | ಸಿರಾಮರ್ಮಾಣಿ | ಸ್ನಾಯುಮರ್ಮಾಣಿ | ಅಸ್ಥಿಮರ್ಮಾಣಿ | ಸಂಧಿಮರ್ಮಾಣಿ ಚೇತಿ | (ಸು 336.) 

ಮರ್ಮಗಳು 107. ಆ ಮರ್ಮಗಳು, ಮುಖ್ಯಾಶ್ರಯ ಭಾಗದ ಮೇಲೆ 5 ವಿಧ. ಹ್ಯಾಗಂದರೆ. ಮಾಂಸಮರ್ಮ, ಸಿರಾನಾಳಮರ್ಮ, ನರಮರ್ಮ, ಎಲುಬು ಮರ್ಮ, ಮತ್ತು ಸಂದು ಮರ್ಮ ಎಂತ. ತತ್ರೈಕಾದಶ ಮಾಂಸಮರ್ಮಾಣಿ | ಏಕಚತ್ವಾರಿಂಶತ್ ಸಿರಾಮರ್ಮಾಣಿ | ಸಪ್ತವಿಂಶತಿಃ ಸ್ನಾಯುಮರ್ಮಾಣಿ | ಅಷ್ಟಾವಸ್ಥಿಮರ್ಮಾಣಿ | ವಿಂ ಶತಿಃ ಸಂಧಿಮರ್ಮಾಣಿ | ತದೇತತ್ ಸಪ್ತೋತ್ತರಂ ಮರ್ಮ ಶತಂ | (ಸು. 336,)