* UK - 52 - ಲಿ ' ವನ್ನು ಆಮಾಶಯದಲ್ಲಿ ತಡೆದಿಟ್ಟು ಪಚನಮಾಡಿ ಕೆಳಗೆ ಸಾಗಿಸುತ್ತದೆ. ಅಬಲಿಯಾದರೆ, ಆಹಾರವನ್ನು ಆಮವಾಗಿ ಕೆಳಕ್ಕೆ ಬಿಡುತ್ತದೆ ಗ್ರಹಣಿಗೆ ಬಲ ಅಗ್ನಿ ಮತ್ತು ಆ ಅಗ್ನಿಗೆ ಬಲ ಗ್ರಹಣೀ ಆಗಿರುತ್ತದೆ. ಅಗ್ನಿ ಕೆಟ್ಟರೆ ಗ್ರಹಣಿಯು ಕೆಟ್ಟು ರೋಗಗಳನ್ನುಂಟುಮಾಡುವುದು. ಅನ್ನವು ದೇಹ, ಧಾತು, ಓಜಸ್ಸು, ಬಲ ವರ್ಣಾದಿಗಳನ್ನು ಪೋಷಿಸುವದಕ್ಕೆ ಹೇತು ಅಗ್ನಿಯಾಗಿರುತ್ತದೆ. ಅಪಕ್ವವಾದ ಆಹಾರದಲ್ಲಿರುವ ರಸಾದಿಗಳು ಪೋಷಣೆ ಮಾಡುವುದಿಲ್ಲ. ಪ್ರಾಣವಾಯುವಿನ ಬಲದಿಂದ ಕೋಷ್ಠದೊಳಗೆ ಸೇರಿದ ಆಹಾರವು ಆಮಾಶಯದಲ್ಲಿ ನಿಂತು, ದ್ರವಗಳಿಂದ ಒಡೆದು, ತೆಳ್ಳಗಾಗಿ, ಜಿಡ್ಡಿನಿಂದ ಮೃದುವಾಗುತ್ತದೆ, ಮತ್ತು ಅದನ್ನು ಉದರದ ಅಗ್ನಿಯು ಸಮಾನವಾಯುವಿನಿಂದ ಕೂಡಿಕೊಂಡು, ಪಾತ್ರದಲ್ಲಿರುವ ನೀರು ಮತ್ತು ಅಕ್ಕಿಯನ್ನು ಹೊರಗಿನ ಅಗ್ನಿಯು ಹ್ಯಾಗೋ, ಹಾಗೆ ಪಾಕಮಾಡುತ್ತದೆ. ಪ್ರಾರಂಭದಲ್ಲಿ ಆಹಾರದ ಷಡ್ರಸಗಳು ಸೀ ರೂಪವಾಗುತ್ತದೆನ್ನಬೇಕು ಕಫ ಕೂಡಿ ನೊರಯುಳ್ಳದ್ದಾಗಿರುತ್ತದೆ. ಅನಂತರ ಅತಿ ಅಥವಾ ವಿಷಮವಾದ ಪಾಕದಿಂದ ಹುಳಿಯಾಗುತ್ತದೆ. ಅನಂತರ ಆಮಾಶಯದಿಂದ ಕೆಳಗೆ ಬಿದ್ದ ಮತ್ತು ಬಿಳುತ್ತಿರುವ ಅನ್ನವನ್ನು ಪಿತ್ತವು ತನ್ನ ಅಗ್ನಿಯಿಂದ ಒಣಗಿಸಿ, ಪಾಕಮಾಡಿ, ಖಾರ ವಾಯುಗಳಿಂದ ಕೂಡಿದ ಪಿಂಡವನ್ನಾಗಿ ಮಾಡುತ್ತದೆ. ಅನಂತರ ಪೃಥ್ವಿ, ಅಪ, ಅಗ್ನಿ, ವಾಯು, ಆಕಾಶ ಎಂಬ ಪಂಚಭೂತಗಳಿಗೆ ಸಂಬಂಧವಾದ ಪಂಚ ಅಗ್ನಿಗಳು ಆಹಾರದಲ್ಲಿರುವ ತಮ್ಮ ತಮ್ಮ ಪ್ರಧ್ವ್ಯಾದಿ ಐದು ಗುಣಗಳನ್ನು ಪಾಕಮಾಡುತ್ತವೆ. ಈ ಪ್ರಕಾರ ಬೇರೆ ಬೇರೆ ಪಾಕದಿಂದ ಪೃಥ್ವಿಗುಣಗಳು ದೇಹದಲ್ಲಿರುವ ಪೃಥ್ವಿಗುಣಗಳನ್ನೂ, ಮಿಕ್ಕವು ಇತರ ಗುಣಗಳನ್ನೂ ಪೋಷಿಸುತ್ತವೆ. ಆ ಪ್ರಕಾರ ಪಕ್ವವಾದ ಆಹಾರವು ಕಿಟ್ಟವೆಂತಲೂ, ಸಾರವೆಂತಲೂ, ಎರಡು ಪಾಲಾಗುತ್ತದೆ. ಅದರಲ್ಲಿ ಸ್ವಚ್ಛವಾದ ಕಿಟ್ಟವು ಮೂತ್ರ, ದಪ್ಪವಾದದ್ದು ಹೇಲು. ಸಾರವು ಪುನಃ ಏಳು ವಿಧವಾದ ಅಗ್ನಿಗಳಿಂದ ತಮ್ಮ ತಮ್ಮ ಸ್ಥಾನಗಳಲ್ಲಿ ಪಚನವಾಗುತ್ತದೆ ಹೀಗೆ ರಸದಿಂದ ರಕ್ತವು, ರಕ್ತದಿಂದ ಮಾಂಸವು, ಮಾಂಸದಿಂದ ಮೇದಸ್ಸು, ಮೇದಸ್ಸಿನಿಂದ ಎಲುಬು, ಎಲುಬಿನಿಂದ ಮಜ್ಜೆ, ಮಜ್ಜೆಯಿಂದ ಶುಕ್ರ, ಶುಕ್ರದಿಂದ ಗರ್ಭವುಂಟಾಗುತ್ತದೆ. ಕಫ, ಪಿತ್ತ, ಸ್ರೋತಸ್ಸುಗಳಲ್ಲಿರುವ ಮಲ, ಬೆವರು, ಉಗುರು ಮತ್ತು ರೋಮಗಳು, ಕಣ್ಣುಗಳಲ್ಲಿ ಮತ್ತು ಚರ್ಮದಲ್ಲಿರುವ ಜಿಡ್ಡು, ಓಜಸ್ಸು, ಇವು 7 ಯಧಾಕ್ರಮವಾಗಿ ರಸಾದಿ ಶುಕ್ರಾಂತ 7 ಧಾತುಗಳ ಮಲವಾಗಿರುತ್ತವೆ. ಹೀಗೆ ಧಾತುಗಳ ಪಾಕದಿಂದ ಪ್ರಸಾದ-ಕಿಟ್ಟವೆಂಬ ಎರಡು ಭಾಗಗಳಾಗಿರುತ್ತವೆ. ಹೀಗೆ ಪರಸ್ಪರ ಆಧರಣೆಯ ದೆಸೆಯಿಂದ ಧಾತುಗಳೊಳಗಿನ ಸ್ನೇಹಪರಂಪರೆಯು (ಸಾರದ ಧಾತ್ವಂತರ ಗತಿಯು) ಕೆಲವರು ಒಂದು ಹಗಲು ಮತ್ತು ರಾತ್ರಿಯಿಂದ ಎಂತಲೂ-ಕೆಲವರು ಆರು ದಿನ ಗಳಿಂದ ಎಂತಲೂ ಹೇಳುತ್ತಾರೆ-ಕಡೇ ಪಕ್ಷದಲ್ಲಿ ಆಹಾರವು ಪಾಕಕ್ರಮಾದಿಗಳಿಂದ ಒಂದು ತಿಂಗಳಲ್ಲಿ ಶುಕ್ರರೂಪವನ್ನು ಹೊಂದುತ್ತದೆ. ಆಹಾರದ ಧಾತುಗಳು ಎಡೆಬಿಡದೆ ಚಕ್ರದಂತೆ ಪರಿವರ್ತನೆ ಮಾಡುತ್ತಿರುತ್ತವೆ. ಷರಾ - 'ಗ್ರಹಣೀ' ಎಂಬದು ಕ್ಷುದ್ರಾನ್ತ್ರದ ಬುಡವಾದ ಡ್ಯುವೊಡೇನಮ್' (ಸಂ 133 ನೋಡು) ಆಹಾರಾದಿ ದ್ರವ್ಯಗಳ ಸಾರವನ್ನು ಹೀರಿ ಉಪಯೋಗಿಸಿಕೊಳ್ಳುವ ಕೆಲಸವು ಅನ್ನನಾಳದ ಬುಡವಾದ ಬಾಯಿ ಹಿಡಿದು ಕೊನೆಯಾದ ಗುದದ ವರೆಗೆ ಹೆಚ್ಚು ಕಡಿಮೆಯಾಗಿ ನಡೆಯುತ್ತಿರುತ್ತದಾದರೂ, ಪಚನದ ಹೆಚ್ಚಿನ ಅಂಶವು ಗ್ರಹಣಿಯಲ್ಲಿ ನಡೆಯುವದಾಗಿರುತ್ತದೆ ಏಕೆಂದರೆ ಜೀರ್ಣವು ಪೂರ್ತಿಯಾಗುವದಕ್ಕೆ ಅಗ್ನ್ಯಾಶಯದ (ಸಂ 138 ನೋಡು) ಮೇದೋಜೀರಕ ರಸವೂ, ಪಿತ್ತಾಶಯದ ಪಿತ್ತರಸವೂ, ಗ್ರಹಣಿಯಲ್ಲಿಯೇ ಉತ್ಪತ್ತಿಯಾಗುವ ಒಂದು ರಸವೂ, ಹೆಚ್ಚಾಗಿ ಗ್ರಹಣಿಯಲ್ಲಿ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.