I] - 54 - (6) ಶಾರೀರವರ್ಣನ-ಪಾಶ್ಚಾತ್ಯರೀತ್ಯಾ. ಶರೀರದ ಅಂಗಪ್ರತ್ಯಂಗಗಳ ಕುರಿತು ಪ್ರಾಚೀನ ಹಿಂದು ವೈದ್ಯಗ್ರಂಧಗಳಲ್ಲಿರುವ ವಿವರಣಗಳನ್ನೂ, ಪಾಶ್ಚಾತ್ಯ ಶಾಸ್ತ್ರಜ್ಞರು ಮಾಡಿದ ಶೋಧನೆಗಳ ಫಲಿತಾಂಶಗಳನ್ನೂ, ಪರ್ಯಾ ಲೋಚಿಸಿದ್ದಲ್ಲಿ ತೋರುವ, ನಮ್ಮ ವೈದ್ಯರು ತಿಳಿಯಬೇಕಾದ, ಕೆಲವು ಅಂಶಗಳು ಈ ಭಾಗದಲ್ಲಿ ವರ್ಣಿಸಲಾಗುತ್ತವೆ. ಚರ್ಮಗಳು 122. ಪಾಶ್ಚಾತ್ಯ ರೀತ್ಯಾ ಚರ್ಮಗಳು ಮುಖ್ಯವಾಗಿ ಎರಡು ಅವುಗಳಲ್ಲಿ 1 ನೇದು ನಾಲ್ಕು ಪದರುಗಳುಳ್ಳದ್ದು, 2ನೇದು 2 ಪದರುಗಳುಳ್ಳದ್ದು , ಇವೆರಡು ಚರ್ಮಗಳಿಗೆ ಮತ್ತು ಅವುಗಳಿಗಾಧಾರವಾದ ಮಾಂಸಖಂಡ ಅಧವಾ ಎಲುಬಿಗೆ ಮಧ್ಯಕ್ಕೆ ಇನ್ನೊಂದು ಹೊದಿಕೆಯುಂಟು 1ನೇ ಚರ್ಮವು ಕೈಕಾಲುಗಳ ಪಾದತಲ ಗಳಲ್ಲಿಯೂ, ಬೆನ್ನಿನಲ್ಲಿಯೂ ಅತಿ ದಪ್ಪವಾಗಿದೆ. ಬೆನ್ನಿನ ಚರ್ಮವು ಕಾಲಿಂಚಿನಷ್ಟು ದಪ್ಪ ವಿರಬಹುದು. ಮೂರನೇ ಹೊದಿಕೆಯು ಹೊಟ್ಟೆಯ ಚರ್ಮಗಳ ಅಡಿಯಲ್ಲಿ ಬಹಳ ದಪ್ಪ ವಾಗಿರುತ್ತದೆ. 2ನೇ ಚರ್ಮದಲ್ಲಿ ಸ್ನೇದದ ಗಂಟುಗಳು (ಅಧವಾ ಗೋಲಗಳು) ಮತ್ತು ಮೇದ ಸ್ಸಿನ ಗ್ರಂಧಿಗಳು ಇರುತ್ತವೆ ಸೆಕೆಗುಳ್ಳೆ ಎದ್ದಾಗ್ಗೆ, 1ನೇ ಚರ್ಮವು 2ನೇ ಚರ್ಮದಿಂದ ಪ್ರತ್ಯೇಕವಾಗುತ್ತದೆ. ಒಂದನೇ ಚರ್ಮದ ಬುಡದಲ್ಲಿ ಕಪ್ಪು ವರ್ಣದ ಸೂಕ್ಷ್ಮವಾದ ಚೀಲ ಗಳು ಇರುವ ದೆಸೆಯಿಂದ ಮನುಷ್ಯನ ಕಪ್ಪುವರ್ಣ ಉಂಟಾಗುವದು ಮೇದಸ್ಸಿನ ಗ್ರಂಧಿಗ ಳೊಳಗಿನ ರಸವು ಹೊರಗೆ ಬರುವರೆ ಅಡಿಯಾದಾಗ ಮೋಡಗಳು ಉಂಟಾಗುತ್ತವೆ. ಆ ಗ್ರಂಧಿಗಳು ಮುಖದಲ್ಲಿ ಯೂ ಮೂಗಿನ ಇತ್ತಕ್ಕೂ ಹೆಚ್ಚಾಗಿ ಇರುತ್ತವೆ. ಈ ಗ್ರಂಧಿಗಳಿಂದ ಹೊರಟುಬರುವ ಜೆಡ್ಡಾದ ರಸದಿಂದಲೇ ಹೊರಗಿನ ಚರ್ಮವೂ, ಕೂದಲುಗಳೂ, ನುಣು ಪಾಗಿರುವದು ಎಂತ ಕಾಣುತ್ತದೆ (ಸುಶ್ರುತದಲ್ಲಿ 7ನೇ ಚರ್ಮವಾಗಿ ಕೂಡಿಸಿದ ಮಾಂಸಧರಾ ಎಂಬದು ಪಾಶ್ಚಾತ್ಯರಂತೆ ಚರಕನು ಚರ್ಮವಲ್ಲ ಎಂತ ಎಣಿಸಿರಬೇಕು ಪ್ರಥಮ ನಾಲ್ಕು ಚರ್ಮಗಳು ಪಾಶ್ಚಾತ್ಯ ರೀತ್ಯಾ ಹೊರ ಚರ್ಮಕ್ಕೂ, 5ನೇ 6ನೇ ಚರ್ಮಗಳು ಒಳಗಿನ ಚರ್ಮಕ್ಕೂ ಸೇರಿದ ಪದರುಗಳಾಗಿರಬಹುದು ) . 123. ಶಿರಸ್ಸಿಗೂ ಮುಂಡಕ್ಕೂ ಆಧಾರವಾಗಿ ಅವುಗಳ ಭಾರವನ್ನು ಹೊತ್ತಿರುವದು ಬೆನ್ನಕೊಲೆಲುಬು ಇದರಲ್ಲಿ 33 ತುಂಡುಗಳು ಇವೆ. ಅವುಗಳಲ್ಲಿ ಕುತ್ತಿಗೆಯ ಹಿಂಬದಿ 7, ಎಲುಬು ಎದೆಯ ಪಂಜರದ ಹಿಂಬದಿ 12, ಶೋಣಿ ಅಧವಾ ಸೊಂಟದ ಭಾಗದಲ್ಲಿ 5, ಇವು ಗಳು ಗಳ ಕೆಳಗೆ 9. ಈ ಕಡೇ ಒಂಭತ್ತು ಬಾಲ್ಯದಲ್ಲಿ ಬೇರೆ ಬೇರೆಯಾಗಿದ್ದರೂ ಪ್ರಾಯಸ್ಥರಲ್ಲಿ ಕಡೇ ನಾಲ್ಕು ಕೂಡಿ 1, ಅದರ ಮೇಲಿನ 5 ಕೂಡಿ 1, ಹೀಗೆ 2 ಎಲುಬು ಗಳಾಗಿ ಕಾಣುತ್ತವೆ. ಬಾಲವುಳ್ಳ ಪ್ರಾಣಿಗಳಲ್ಲಿ ಬಾಲವು ಬೆನ್ನೆಲುಬಿನ ಕೆಳಗಿನ ತುದಿಗೆ ಕೂಡಿರುತ್ತದೆ. ಬೆನ್ನ ಕೋಲಿನ ತುಂಡುಗಳೆಲ್ಲಾ ಸಾಧಾರಣ ಒಂದೇ ಮಾದರಿ. ಪ್ರತಿಯೊಂದು ಒಂದೂವರೆ ಇಂಚು ಅಗಲ ಮತ್ತು ಅರ್ಧ ಇಂಚು ದಪ್ಪವಾದ ಉರುಟು ತುಂಡಾಗಿದ್ದು, ಅದರ ಬೆನ್ನಬದಿಯಲ್ಲಿ ಒಂದು ಗೊಣಸು ಇರುತ್ತದೆ. ಈ ತುಂಡುಗಳು, ಮಧ್ಯ ಮೃದ್ವಸ್ಥಿ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.