ಈ ಪುಟವನ್ನು ಪರಿಶೀಲಿಸಲಾಗಿದೆ

- 63 63 --

  • 11

ಗಳಲ್ಲಿ ಮೇಲೆ ಹೊಕ್ಕುಳ ವರೆಗೂ ಕಾಣಬಹುದು ಈ ಬಾಕು ಹೊರಗಿನಿಂದ ಕಣ್ಣಿಗೆ ಕಾಣುವದಲ್ಲದೆ, ಕೈಗೆ ಗಟ್ಟಿಯಾಗಿ ಮುಟ್ಟುವದು; ಮತ್ತು ಗುದದೊಳಗೆ ಬೆರಳನ್ನು ಹಾಕಿ ನೋಡಿದರೂ ತಿಳಿಯುವದು. 136 ಮೂತ್ರಕ್ಕೆ ಮೂಲಸ್ಥಾನಗಳಾದ ವೃಕ್ಕುಗಳೆರಡು ಸೊಂಟದ ಬೆನ್ನೆಲುಬಿನ ಇತ್ತಟ್ಟು, ಹೊಟ್ಟೆಯ ಹಿಂಬದಿಗೆ ಇರುತ್ತವೆ, ಬಲದ್ದು ಯಕೃತ್ತಿನ ಕೆಳಗೆ, ಎಡದ್ದು ಪ್ಲೀಹದ ಕೆಳಗೆ. ಬಲದ್ದು ಎಡದ್ದಕ್ಕಿಂತ ಸುಮಾರು ಮುಕ್ಕಾಲು ಇಂಚಿಗೆ ಕೆಳಗೆ ಇರುವದು. ಬಲ ವಾಗಿ ಉಚ್ಚ್ವಾಸ ಮಾಡಿದಾಗ್ಗೆ, ಎರಡು ವೃಕ್ಕುಗಳೂ ವಪಾವಹನದಿಂದ ಸ್ವಲ್ಪಕಡಿಮೆ ಅರ್ಧ ಇಂಚಿನಷ್ಟು ಕೆಳಗೆ ಒತ್ತಲ್ಪಡುತ್ತವ. ಹೆಚ್ಚಾಗಿ ಬಾತು ಹೋದ ಹೊರತು ವೃಕ್ಕುಗಳು ಹೊರಗಿನ ಸ್ಪರ್ಶನಕ್ಕೆ ಸಿಕ್ಕವು. ಅವುಗಳಲ್ಲಿ ಪ್ರತಿಯೊಂದು 10-12 ತೊಲೆ ಭಾರವಿರುವದು . ಅವುಗಳೆರಡರ ಉದ್ದ ಸುಮಾರು 4 ಇಂಚು, ಅಗಲ ಸುಮಾರು 2.1/2 ಇಂಚು

  • ಇರುತ್ತದೆ ಚಟ್ಟಿಯಾಗಿರುವದರಿಂದ ದಪ್ಪದಲ್ಲಿ ಒಂದು ಇಂಚಿಗೆ ಹಚ್ಚು ಇರುವದಿಲ್ಲ. ತೋರಮಟ್ಟಿಗೆ ಎರಡೂ ಸಮ್ಮುಖ, ಅರ್ಧಚಂದ್ರಾಕಾರವಾಗಿ ನಿಂತಿರುವವು (ಸಾಧಾರಣ ಹಲ್ಲೇಕಾಯಿಯ ಆಕಾರ). ಇವುಗಳ ಒಂದೊಂದರಿಂದ ಸುಮಾರು 15 ಇಂಚು ಉದ್ದದ ಸಪೂರವಾಗಿಯೂ ಬಳೇದಾಗಿಯೂ ಇರುವ ಒಂದು ಪ್ರೋತಸ್ಸು ಹೊರಟು ಮೂತ್ರಾಶಯಕ್ಕೆ ಕೂಡಿರುತ್ತದೆ ಈ ಪ್ರೋತಸ್ಸುಗಳಿಗೆ ಮೂತ್ರವನ್ನು ವಸ್ತಿಗೆ, ಒರತೆ ನೀರಿ ನಂತೆ, ಬೊಟ್ಟು ಬೂಟ್ಟಾಗಿ ಒಯ್ಯುತ್ತಿರುವದೇ ಕೆಲಸ

137, ಮೂತ್ರಾಶಯದಿಂದ ಪ್ರತ್ಯೇಕ ಹೊರಗೆ ಹೋಗುವ ಒಂದು ನಾಳ ಅಥವಾ ಮೂತ್ರದ್ವಾರ (unethra) ಇರುತ್ತದೆ. ಇದು ಮೂತ್ರವನ್ನು ಹೊರಗೆ ಬಿಡುತ್ತದೆ. ಈ ಮೂತ್ರನಾಳ

  • ನಾಳದ ಕೆಲಸವು ಇಚ್ಛೆಗೆ ಒಳಪಟ್ಟಿರುವದು. ವೃಕ್ಕುಗಳಿಂದ ಮೂತ್ರಾ
  • ಶಯಕ್ಕೆ ಒಯ್ಯುವ ಪ್ರೋತಸ್ಸುಗಳು ಇಚ್ಛೆಗೆ ಒಳಪಟ್ಟಿರುವದಿಲ್ಲ. ಸಾಧಾ ರಣವಾಗಿ ದಿನಕ್ಕೆ 10 ಕುಡುತೆ ಮೂತ್ರ ಒಬ್ಬ ಪ್ರಾಯಸ್ಥನಲ್ಲಿ ಉಂಟಾಗುತ್ತದೆ. ಚಿಕ್ಕ ಕೂಸು ಹೊಯ್ಯುವ ಮೂತ್ರವು ದಿನಕ್ಕೆ ಸುಮಾರು 2 ಕುಡುತೆಯಾಗಬಹುದು. ಮೂತ್ರದ ಪರಿಮಾಣವು, ಹವೆಯ ಭೇದ ಮೊದಲಾದ ಸಂಗತ್ಯಾನುಸಾರ ಹೆಚ್ಚು ಕಡಿಮೆಯಾಗುವದು.

_138. ಆಮಾಶಯದ ಹಿಂದಕಡೆ ಹೊಟ್ಟೆಗೆ ಅಡ್ಡವಾಗಿ 6-8 ಇಂಚು ಉದ್ದ, ಸರಾ ಸರಿ 1.1/2 ಇಂಚು ದಪ್ಪ ಆದ, ಭಾರದಲ್ಲಿ 6 ತೊಲೆಯಿಂದ 9 ತೊಲೆ ವರೆಗಿರುವ ಒಂದು ಪ್ರತ್ಯಂಗವಿರುವದು ಇದಕ್ಕೆ ‘ಕಣಿಯ' ಎಂತ ಒಬ್ಬ ಗ್ರಂಧಕರ್ತರು, ಮೇದೋ ಜೀರಕ ಎಂತ ಇನ್ನೊಬ್ಬರು, ಕನ್ನಡ ಹೆಸರಿಟ್ಟಿದ್ದಾರೆ. ಇದರಲ್ಲಿ ಬಾಯಿಯ ಎಂಜಲಿನಂತೆ ಸ್ವಚ್ಛವಾದ, ಅಂಟಾದ, ಮತ್ತು ಖಾರರುಚಿಯುಳ್ಳ ಒಂದು ರಸ ಇರುತ್ತದೆ. ಈ ಅಂಗದ ಎದುರುಭಾಗವು ಆಮಾಶಯದಿಂದಲೂ, ಸ್ಥೂಲಾ೦ತ್ರದ ಅಡ್ಡವಾಗಿರುವ ಭಾಗ ದಿಂದಲೂ ಮರಪಟ್ಟದೆ. ಅದರ ರಸವು ಕ್ಷುದ್ರಾಂತ್ರದ ಆದಿಭಾಗದಲ್ಲಿ, ಅಂದರೆ 'ಡ್ಯುವೊಡೇ ನಮಿ'ನಲ್ಲಿ, ಆಮಾಶಯ ದಾಟಿ ಬಂದ ಅನ್ನರಸಕ್ಕ ಪಿತ್ತದ ಜೊತೆಯಲ್ಲಿ ಕೂಡಿ ಪಚನ ಮಾಡುತ್ತದೆ.